fbpx
ಸಮಾಚಾರ

“ಮಂಡ್ಯದಲ್ಲಿ ನಿಖಿಲ್ ಸೋಲಿಗೆ ಎವಿಎಂ ಕಾರಣ” ಮಾಜಿ ಸಂಸದ ಶಿವರಾಮೇಗೌಡ.

ಲೋಕಸಭಾ ಚುನಾವಣೆಯಲ್ಲಿ ಪಕ್ಷ ಸೋಲನ್ನು ನಿರೀಕ್ಷೆ ಮಾಡಿರಲಿಲ್ಲ. ಅದರಲ್ಲೂ ಮಂಡ್ಯದಲ್ಲಿ ನಿಖಿಲ್ ಸೋಲು ಅಘಾತ ತಂದಿದ್ದು, ಮತಯಂತ್ರದ ದೋಷವೇ ನಿಖಿಲ್ ಸೋಲಲು ಕಾರಣವಾಯ್ತ ಎಂಬ ಅನುಮಾನ ಇದೇ ಎಂದು ಮಾಜಿ ಸಂಸದ ಶಿವರಾಮೇಗೌಡ ತಿಳಿಸಿದ್ದಾರೆ.

ಮಂಡ್ಯದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ, ಬೇರೆಯವರ ಅಭಿಪ್ರಾಯ ನನಗೆ ಗೊತ್ತಿಲ್ಲ. ನನ್ನ ಅಭಿಪ್ರಾಯ ಬಿಜೆಪಿಯ ಭರ್ಜರಿ ಗೆಲುನಿಗೆ ಇವಿಎಂ ದೋಷವೇ ಕಾರಣ ಎಂಬ ಅನುಮಾನವಿದೆ ಎಂದು ತಿಳಿಸಿದರು.

ನಿಖಿಲ್ ಸೋಲಲು ಇವಿಎಂ ದೋಷವೇ ಕಾರಣ ಎಂಬ ಅನುಮಾನ ಇದೆ. ಏಕೆಂದರೆ ಮಂಡ್ಯಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಸುಮಾರು ಎಂಟು ಸಾವಿರ ಕೋಟಿಗೂ ಹೆಚ್ಚು ಅಭಿವೃದ್ಧಿ ಕೆಲಸಕ್ಕೆ ಅನುಮೋದನೆ ನೀಡಿದ್ದಾರೆ. ಆದರೂ ಸುಮಲತಾ ಗೆಲ್ಲುತ್ತಾರೆ ಎಂದರೆ ಮತಯಂತ್ರದ ಮೇಲಿನ ಅನುಮಾನ ಬಲವಾಗಿದೆ. ನನ್ನ ಅನುಮಾನದಂತೆ ನೂರಕ್ಕೆ ನೂರು ಇವಿಎಂ ಮಿಷನ್‍ನಲ್ಲಿ ಮೋಸವಾಗಿದೆ. ಬಹಳ ಜನ ಇವಿಎಂ ಮಿಷನ್‍ನಲ್ಲಿ ಏನೋ ಪ್ಲಾನ್ ಮಾಡಿದ್ದಾರೆ ಎಂದು ಹೇಳುತ್ತಿದ್ದರು. ಪ್ಲಾನ್ ಮಾಡಿರುವುದರ ಪ್ರಕಾರವೇ ಫಲಿತಾಂಶ ಬಂದಿದೆ. ” ಎಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top