fbpx
ಸಮಾಚಾರ

ಮಂಡ್ಯದಲ್ಲಿ ಮೂರು ಸುಮಲತಾ ಹೆಸರಿನ ಅಭ್ಯರ್ಥಿಗಳು ಗಳಿಸಿದ ಮತಗಳೆಷ್ಟು ಗೊತ್ತಾ?

ಮತದಾರರಿಗೆ ಗೊಂದಲ ಮೂಡಿಸಿ ಸುಮಲತಾ ಅಂಬರೀಷ್‌ ಅವರನ್ನು ಮಣಿಸುವ ದೃಷ್ಟಿಯಿಂದ ಮಂಡ್ಯದಲ್ಲಿ ‘ಸುಮಲತಾ’ ಹೆಸರಿನ ಇವರ ಮೂವರು ಅ್ಯರ್ಥಿಗಳನ್ನು ಕಣಕ್ಕಿಳಿಸಲಾಗಿತ್ತು. ಆದರೂ ಎಲ್ಲ ತಂತ್ರ-ಕುತಂತ್ರ, ಅಡೆತಡೆಗಳನ್ನು ದಾಟಿ 20ನೇ ಕ್ರಮ ಸಂಖ್ಯೆಯಲ್ಲಿದ್ದ ಸುಮಲತಾ ಅಂಬರೀಶ್ ಅವರು 703660 ಮತಗಳನ್ನು ಪಡೆದು ಜಯಳಿಸಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಅಂಬರೀಷ್ ವಿರುದ್ಧ ಒಟ್ಟು ಮೂರು ಮಂದಿ ಸುಮಲತಾ ಹೆಸರಿನ ಮಹಿಳೆಯರು ಸ್ಪರ್ಧಿಸಿದ್ದರು. ಸುಮಲತಾ (ಕ್ರಮ ಸಂಖ್ಯೆ 19), ಎಂ ಸುಮಲತಾ (ಕ್ರಮ ಸಂಖ್ಯೆ 21) ಮತ್ತು ಸುಮಲತಾ (ಕ್ರಮ ಸಂಖ್ಯೆ 22) ಎಂಬುವವರು ಸ್ಪರ್ಧಿಸಿದ್ದರು.

ಈ ಪೈಕಿ ಸುಮಲತಾ (ಕ್ರಮ ಸಂಖ್ಯೆ 19) ಅವರಿಗೆ ಒಟ್ಟು 8902 ಮತಗಳು ಬಿದ್ದಿದ್ದು, ಎಂ ಸುಮಲತಾ (ಕ್ರಮ ಸಂಖ್ಯೆ 21) ಅವರಿಗೆ 8542 ಮತಗಳು ಬಿದ್ದಿವೆ. ಅಂತೆಯೇ ಸುಮಲತಾ (ಕ್ರಮ ಸಂಖ್ಯೆ 22) ಅವರಿಗೆ 3119 ಮತಗಳು ಬಿದ್ದಿವೆ. ಆ ಮೂಲಕ ಮೂವರು ಸುಮಲತಾ ಎಂಬ ಅಭ್ಯರ್ಥಿಗಳಿಗೆ ಒಟ್ಟು 20,563 ಮತಗಳು ಬಿದ್ದಂತಾಗಿದೆ.

ಅಂದಹಾಗೆ ಪಕ್ಷೇತರ ಅಭ್ಯರ್ಥಿ ಟಿ.ಎನ್‌. ಶಶಿಕುಮಾರ್‌ ಅವರು 18,323 ಮತಗಳನ್ನು ಪಡೆದು ಅಚ್ಚರಿ ಮೂಡಿಸಿದ್ದಾರೆ. ಈ ಪೈಕಿ ಬಹುತೇಕ ಮತಗಳು ಜೆಡಿಎಸ್‌ನ ನಿಖಿಲ್‌ ಕುಮಾರಸ್ವಾಮಿ ಅವರಿಗೆ ಸೇರಿದ ಮತಗಳು ಎನ್ನಲಾಗಿದೆ. ಒಂದು ಮತಯಂತ್ರದಲ್ಲಿ 16 ಮಂದಿಯ ಹೆಸರನ್ನು ಹಾಕಲು ಮಾತ್ರ ಅವಕಾಶವಿದೆ. ಆದರೆ, ಮಂಡ್ಯ ಕ್ಷೇತ್ರದಲ್ಲಿ 22 ಅಭ್ಯರ್ಥಿಗಳಿದ್ದರಿಂದ ಹೆಚ್ಚುವರಿಯಾಗಿ ಮತ್ತೊಂದು ಮತಯಂತ್ರ ಅಳವಡಿಸಬೇಕಾಯಿತು. 17ನೇ ಕ್ರಮ ಸಂಖ್ಯೆಯಲ್ಲಿದ್ದ ಟಿ.ಎನ್‌.ಶಶಿಕುಮಾರ್‌ ಅವರು 2ನೇ ವಿದ್ಯುನ್ಮಾನ ಮತದಲ್ಲಿ ಮೊದಲ ಸ್ಥಾನದಲ್ಲಿದ್ದರು.

ಜೆಡಿಎಸ್‌ ಕಾರ್ಯಕರ್ತರು ಕ್ರಮಸಂಖ್ಯೆ 1ಕ್ಕೆ ಮತ ಹಾಕಬೇಕೆಂದು ಮತದಾರರಿಗೆ ಹೇಳಿ ಕಳುಹಿಸಿದ್ದರು. ಆದರೆ ಮತದಾರು 2ನೇ ಮತಯಂತ್ರದಲ್ಲಿ ಮೊದಲ ಸ್ಥಾನದಲ್ಲಿದ್ದ ಅ್ಯರ್ಥಿ ಶಶಿಕುಮಾರ್‌ಗೆ ಮತ ಚಲಾಯಿಸಿದರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top