fbpx
ಸಮಾಚಾರ

ಈ ಭಾರಿ ನೋಟಾಕ್ಕೆ ಬಿದ್ದ ಮತಗಳೆಷ್ಟು ಗೊತ್ತಾ?

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಒಟ್ಟು 65,14, 558 ಮತಗಳು ನೋಟಾಕ್ಕೆ ಬಿದ್ದಿವೆ. ಇದರಲ್ಲಿ ಬಿಹಾರದಲ್ಲಿ ಅತಿಹೆಚ್ಚು ಜನರು ಅಂದರೆ ಸುಮಾರು ಶೇ.2ರಷ್ಟು (8,17,139) ಜನರ ಮತ ನೋಟಾಕ್ಕೆ ಸೇರಿದೆ. ಅತಿಹೆಚ್ಚು ಲೋಕಸಭಾ ಕ್ಷೇತ್ರಗಳನ್ನೊಳಗೊಂಡ ಉತ್ತರ ಪ್ರದೇಶದಲ್ಲಿ 7,25,079 ಜನರು ನೋಟಾ ಆಯ್ಕೆ ಮಾಡಿಕೊಂಡಿದ್ದಾರೆ.

ಬಿಹಾರದಲ್ಲಿ , ಸುಮಾರು 8 ಲಕ್ಷ ಮಂದಿ ಮತದಾರರು ನೋಟಾಗೆ ಮೊರೆಹೋಗಿದ್ದಾರೆ. ಇಲ್ಲಿ ನೋಟಾ ಪಡೆದ ಮತಗಳಿಕೆ ಪ್ರಮಾಣ ಶೇ. 2ರಷ್ಟು. ಅಂದರೆ ಎಐಎಂಐಎಂ(0.72%), ಬಿಎಸ್‌ಪಿ(1.67%) ಹಾಗೂ ಸಿಪಿಎಂ (0.07%)ಮತ ಗಳಿಕೆಗಿಂತ ಹೆಚ್ಚು ಎನ್ನುವುದು ಗಮನಾರ್ಹ.

ರಾಜಸ್ಥಾನದಲ್ಲಿ 3.27 ಲಕ್ಷ ಮತದಾರರು ನೋಟಾ ಆಯ್ಕೆ ಮಾಡಿಕೊಂಡಿದ್ದಾರೆ. 2014ರಲ್ಲಿಯೂ 3.27 ಲಕ್ಷ ನೋಟಾ ಚಲಾವಣೆಯಾಗಿತ್ತು. ಇಲ್ಲಿ ಕೂಡ ಸಿಪಿಐ, ಸಿಪಿಎಂ ಹಾಗೂ ಬಿಎಸ್‌ಪಿಗಿಂತ ನೋಟಾ ಮತಗಳಿಕೆ ಪ್ರಮಾಣ ಹೆಚ್ಚಿದೆ. ಪಂಜಾಬಿನಲ್ಲಿ 1.54 ಲಕ್ಷ, ಹರಿಯಾಣದಲ್ಲಿ 45 ಸಾವಿರ ನೋಟಾ ಮತ ಚಲಾವಣೆಯಾಗಿದೆ. ಲಕ್ಷದ್ವೀಪದಲ್ಲಿ 100 ನೋಟಾಗಳನ್ನು ಮತದಾರರು ಆಯ್ಕೆ ಮಾಡಿದ್ದಾರೆ.

2014 ರ ಲೋಕಸಭಾ ಚುನಾವಣೆಯಲ್ಲಿ 60, 02,932 ಮತಗಳು ನೋಟಾ ಪಾಲಾಗಿದ್ದವು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top