fbpx
ಸಮಾಚಾರ

ವಿಶ್ವಕಪ್ 2019- ಕ್ರಿಕೆಟ್ ಶಿಶು ಅಫ್ಘಾನಿಸ್ತಾನ್ ವಿರುದ್ಧ ಮಣ್ಣು ಮುಕ್ಕಿದ ಪಾಕಿಸ್ತಾನ.

ಬಹು ನಿರೀಕ್ಷಿತ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುತ್ತೇವೆ ಎಂದು ಹೇಳಿಕೊಂಡು ಅಖಾಡಕ್ಕೆ ಇಳಿದಿರುವ ಪಾಕಿಸ್ತಾನ ತಂಡವು ಕ್ರಿಕೆಟ್ ಶಿಶು ಆಫ್ಘಾನಿಸ್ತಾನದ ವಿರುದ್ಧ ಅಭ್ಯಾಸ ಪಂದ್ಯದಲ್ಲೇ ಮುಗ್ಗರಿಸಿದೆ. ನೆನ್ನೆ ನಡೆದ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನ ಆಫ್ಘಾನಿಸ್ತಾನದ ವಿರುದ್ಧ 3 ವಿಕೆಟ್ ಗಳ ಅಂತರದ ಸೋಲು ಕಂಡಿದೆ.

ಮೊದಲ ಅಭ್ಯಾಸ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ಬ್ಯಾಟಿಂಗ್ ಆಯ್ಕೆ ಮಾಡಿತು. ಆದರೆ, ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ಎಡವಿದ ಪಾಕ್ 100 ರನ್ ಆಗುವ ಹೊತ್ತಿಗೆನೆ ಪ್ರಮುಖ 4 ವಿಕೆಟ್ ಕಳೆದುಕೊಂಡಿತು. ಅಂತಿಮವಾಗಿ ಪಾಕಿಸ್ತಾನ್ 47.5 ಓವರ್​ನಲ್ಲಿ 262 ರನ್​​ಗೆ ಆಲೌಟ್ ಆಯಿತು. ಅಫ್ಘಾನ್ ಪರ ಮೊಹಮ್ಮದ್ ನಬಿ 3 ವಿಕೆಟ್ ಕಿತ್ತರೆ, ರಶೀದ್ ಖಾನ್ ಹಾಗೂ ದವ್ಲತ್ ಜದ್ರನ್ ತಲಾ 2 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು.

 

 

ಪಾಕಿಸ್ತಾನ ನೀಡಿದ 263 ರನ್ ಗಳ ಸವಾಲಿನ ಗುರಿಯನ್ನು ಆಫ್ಘಾನಿಸ್ತಾನ ಹಷ್ಮತುಲ್ಲಾ ಶಾಹಿದ್ (ಅಜೇಯ 74 ರನ್) ಅವರ ಅಜೇಯ ಬ್ಯಾಟಿಂಗ್ ನೆರವಿನಿಂದಾಗಿ 49.4 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಆಫ್ಘಾನಿಸ್ತಾನಕ್ಕೆ ಮಧ್ಯಮ ಕ್ರಮಾಂಕದಲ್ಲಿ ಮೊಹಮದ್ ನಬಿ ಉತ್ತಮ ಸಾಥ್ ನೀಡಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದರು. ಆ ಮೂಲಕ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲೇ ಗೆಲುವು ಸಾಧಿಸಿ ತಾವು ಕೂಡ ಬಲಿಷ್ಠ ತಂಡ ತಮ್ಮನ್ನು ಕಡೆಗಣಿಸಬೇಡಿ ಎಂಬ ಸಂದೇಶವನ್ನು ರವಾನಿಸದೆ.

ಸಂಕ್ಷಿಪ್ತ ಸ್ಕೊರ್:
Pakistan Innings 262-10 (47.5)
ಬಾಬರ್ ಅಜಮ್ 112(108)
ಶೋಯೆಬ್ ಮಲಿಕ್ 44

AFG 263-7 (49.4 Ovs)
ಶಹೀದಿ 74*
ಹಜ್ರತ್ ಉಲ್ಲಾ 49

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top