fbpx
ಸಮಾಚಾರ

‘ಪುಟ್ಟಗೌರಿ’ ಮಹೇಶ ಖ್ಯಾತಿಯ ನಟನಿಗೆ ಕೂಡಿ ಬಂತು ಕಂಕಣ ಭಾಗ್ಯ.

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಪುಟ್ಟಗೌರಿ ಮದುವೆ’ ಧಾರಾವಾಹಿಯಲ್ಲಿ ಮಹೇಶ್ ಪಾತ್ರವನ್ನು ಮಾಡಿದ್ದ ನಟ ರಕ್ಷ್ ಅವರಿಗೆ ಕಂಕಣ ಭಾಗ್ಯ ಕೂಡಿಬಂದಿದೆ. ರಕ್ಷ್ ಅವರು ಇದೇ 26 ರಂದು ಅಂದರೆ ಭಾನುವಾರ ಅನುಷಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ತಾವು ಮದುವೆಯಾಗುತ್ತಿರುವ ವಿಚಾರವನ್ನು ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ಪೋಸ್ಟ್ ಮಾಡುವ ಮೂಲಕ ರಕ್ಷ್ ಅಭಿಮಾನಿಗಳಿಗೆ ತಿಳಿಸಿದ್ದಾರೆ. “ನಾನು ಮದುವೆಯಾಗುತ್ತಿದ್ದೇವೆ. ಇದು ನನ್ನ ಪ್ರೀತಿಯ ಜನರಿಗೆ ಮದುವೆಯ ಆಮಂತ್ರಣ ಪತ್ರಿಕೆಯಾಗಿದೆ. ಇದೇ ತಿಂಗಳ ದಿನಾಂಕ 26ರಂದು ನನ್ನ ವಿವಾಹ ಇದೆ. ನೀವೆಲ್ಲರೂ ಬಂದು ಆಶೀರ್ವಾದಿಸಬೇಕು” ಎಂದು ರಕ್ಷ್ ಬರೆದುಕೊಂಡಿದ್ದಾರೆ.

 

 

ರಕ್ಷ್ ಮದುವೆ ಬೆಂಗಳೂರು ಅರಮನೆ ಮೈದಾನದ ಶೀಶ್ ಮಹಲ್‍ನಲ್ಲಿ ನಡೆಯಲಿದೆ. ಆದರೆ ರಕ್ಷ್ ಹುಡುಗಿಯ ಹೆಸರು ‘ಅನುಷಾ’ ಎಂದು ತಿಳಿಸಿದ್ದು, ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಸಿಲ್ಲ.. ಅಂದಹಾಗೆ ಕೆಲವು ದಿನಗಳ ಹಿಂದೆ ರಕ್ಷಿತ್ ಎಂಬ ಹೆಸರನ್ನು ‘ರಕ್ಷ್’ ಎಂದು ಬದಲಾಯಿಸಿಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top