fbpx
ಸಮಾಚಾರ

“ರೇವಣ್ಣ ಅವರ ನಿಂಬೆಹಣ್ಣು ಕೊಳೆತೋಗಿದೆ, ಅದಕ್ಕೆ ದೇವೇಗೌಡರೇ ಬಲಿಯಾಗಿದ್ದಾರೆ”

ಲೋಕೋಪಯೋಗಿ ಸಚಿವ ರೇವಣ್ಣ ಭವಾನಿ ರೇವಣ್ಣ ನಿಂಬೆಹಣ್ಣು ಮಂತ್ರ ಮಾಡಿಸಿ ಪಾಪ ದೇವೇಗೌಡರನ್ನೆ ಬಲಿ ತೆಗೆದುಕೊಂಡರು. ನಿಂಬೆಹಣ್ಣು ಕೊಳೆತು ಹೋಗಿದೆ. ರೇವಣ್ಣ ಅವರ ಆ ನಿಂಬೆಹಣ್ಣಿಗೆ ದೇವೇಗೌಡರೇ ಬಲಿಯಾಗಿ ಸೋತಿದ್ದಾರೆ. ಸಿದ್ದರಾಮಯ್ಯಗೆ ಸ್ವಾಭಿಮಾನ ಇದ್ದರೆ ಜೆಡಿಎಸ್ ಗೆ ನೀಡಿರೋ ಬೆಂಬಲ ವಾಪಸ್ ಪಡೆಯಲಿ ಎಂದು ಮಾಜಿ ಸಚಿವ ರೇಣುಕಾಚಾರ್ಯ ಸವಾಲೆಸೆದಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೇನೂ ಆಪರೇಶನ್ ಕಮಲ ಮಾಡಲ್ಲ. ಸರ್ಕಾರವೇ ಬೀಳುತ್ತದೆ. ಯಡಿಯೂರಪ್ಪ ದೈವ ಭಕ್ತರು. ನಾಡಿಗೆ ಒಳ್ಳೆಯದಾಗಲಿ ಎಂದು ಹೋಮ ಹವನ ಮಾಡಿಸಿದ್ದರು. ಅದಕ್ಕೆ ಬಿಜೆಪಿಗೆ 25 ಸೀಟು ಬಂತು. ಜೆಡಿಎಸ್ ನವರು, ದೇವೇಗೌಡರ ಕುಟುಂಬದವರು ಜ್ಯೋತಿಷಿಗಳು, ಮಾಟ ಮಂತ್ರದ ಬೆನ್ನು ಹತ್ತಿದ್ದರು. ಅದಕ್ಕೆ ಹೀಗಾಯ್ತು, ರೇವಣ್ಣ, ಭವಾನಿ ರೇವಣ್ಣ ನಿಂಬೆಹಣ್ಣು ಮಂತ್ರ ಮಾಡಿಸಿ ಪಾಪ ದೇವೇಗೌಡರನ್ನೇ ಬಲಿ ತೆಗೆದುಕೊಂಡರು ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಅಧಿಕಾರದಲ್ಲಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಕಂಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು .ಕಾಂಗ್ರೆಸ್ ಶಾಸಕರನ್ನು ಅತೃಪ್ತರು ಎನ್ನುವುದು ಸರಿಯಲ್ಲ.ಅವರೆಲ್ಲಾ ಗೌರವಾನ್ವಿತ ಶಾಸಕರು. ಅವರಿಗೆ ಕೆಲವರಿಗೆ ಸಚಿವ ಸ್ಥಾನ ತಪ್ಪಿಸಲಾಗಿತ್ತು. ಕ್ಷೇತ್ರಕ್ಕೆ ಅನುದಾನ ಸಿಗದಂತೆ ಮಾಡಲಾಗಿತ್ತು. ಈ ಕಾರಣದಿಂದ ಅವರು ಸಿಡಿದು ಹೊರಗೆ ಬರುತ್ತಾರೆ, ಮೈತ್ರಿ ಸರ್ಕಾರ ತಾನಾಗಿಯೇ ಪತನವಾಗುತ್ತದೆ. ಬಿಜೆಪಿ ಸರ್ಕಾರ ರಚನೆ ಮಾಡುವ ಒಳ್ಳೆಯ ಅವಕಾಶಗಳು ತಾನಾಗಿಯೇ ಒದಗಿ ಬರಲಿದೆ ಎಂದು ರೇಣುಕಾಚಾರ್ಯ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top