fbpx
ಸಮಾಚಾರ

“ಮೋದಿಯನ್ನು ಪ್ರಧಾನಿಯಾಗಿ ಪಡೆದಿರುವುದು ಭಾರತೀಯರ ಅದೃಷ್ಟ” ಡೊನಾಲ್ಡ್​ ಟ್ರಂಪ್​

ಲೋಕಸಭೆ ಚುನಾವಣೆಯಲ್ಲಿ ಎನ್ ಡಿಎ ಭರ್ಜರಿ ವಿಜಯ ಸಾಧಿಸಿದ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿ, ಹಾಡಿಹೊಗಳಿದ್ದಾರೆ. ಹಾಲಿ ಲೋಕಸಭಾ ಚುನಾವಣೆಯಲ್ಲಿ 303 ಸ್ಥಾನಗಳೊಂದಿಗೆ ಸತತ 2ನೇ ಬಾರಿಗೆ ಸ್ವಂತ ಬಲದ ಮೇಲೆ ಕೇಂದ್ರದಲ್ಲಿ ಅಧಿಕಾರಗ ಗದ್ದುಗೆ ಹಿಡಿಯುತ್ತಿರುವ ನರೇಂದ್ರ ಮೋದಿ ಅವರಿಗೆ ಇಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕರೆ ಮಾಡಿ ಶುಭ ಕೋರಿದ್ದಾರೆ.

ನರೇಂದ್ರ ಮೋದಿಯವರಂಥ ಪ್ರಧಾನಿಯವರನ್ನು ಪಡೆದಿದ್ದು ಭಾರತೀಯರ ಅದೃಷ್ಟ. ಮೋದಿ ಮಹಾನ್​ ಪುರುಷ ಹಾಗೂ ಅದ್ಭುತ ನಾಯಕ ಎಂದಿದ್ದಾರೆ. ಟ್ವೀಟ್​ ಮಾಡಿರುವ ಅವರು, ನಾನು ನರೇಂದ್ರ ಮೋದಿಯವರ ಜತೆ ಮಾತನಾಡಿದೆ. ಅಷ್ಟು ದೊಡ್ಡ ರಾಜಕೀಯ ಗೆಲುವು ಸಾಧಿಸಿದ ಅವರಿಗೆ ಅಭಿನಂದನೆ ಸಲ್ಲಿಸಿದ್ದೇನೆ. ಭಾರತದ ಜನರು ಅದೃಷ್ಟವಂತರು ಎಂದಿದ್ದಾರೆ.

ಅಂತೆಯೇ ಭಾರತದ ಯಾವುದೇ ಸಾಧನೆಗಳಿಗೆ ಬೆನ್ನೆಲುಬಾಗಿ ನಿಲ್ಲಲು ಅಮೆರಿಕ ಸಿದ್ದವಿದೆ ಎಂದು ವಿಶ್ವಾಸ ನೀಡಿರುವ ಟ್ರಂಪ್, ಜಪಾನ್ ನ ಒಸಾಕಾದಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಪರಸ್ಪರ ಭೇಟಿಯಾಗುವ ಕುರಿತು ಆಹ್ವಾನ ನೀಡಿದ್ದಾರೆ. ಇದಕ್ಕೆ ನರೇಂದ್ರ ಮೋದಿ ಅವರೂ ಕೂಡ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top