fbpx
ಸಮಾಚಾರ

ನಿಖಿಲ್ ಸೋತಿದ್ದಕ್ಕೆ ಬೆರಳನ್ನೇ ಕತ್ತರಿಸಿಕೊಂಡ ಅಭಿಮಾನಿ? ಫೋಟೊ ವೈರಲ್‌.

ಹೈವೋಲ್ಟೇಜ್ ಕಣವಾಗಿ ಪರಿಣಮಿಸಿದ್ದ ಮಂಡ್ಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಗೆ ತೀವ್ರ ಹಿನ್ನಡೆಯುಂಟಾಗಿದ್ದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಗೆಲುವಿನ ನಗೆ ಬೀರಿದ್ದಾರೆ. ಸುಮಲತಾ ಅಂಬರೀಷ್‌ ಸುಮಾರು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಜಯ ಗಳಿಸಿ ನಿಖಿಲ್ ಗೆ ಸೋಲುಣಿಸಿದ್ದಾರೆ.. ಅತ್ತ ಮೊದಲ ಚುನಾವಣೆಯಲ್ಲಿಯೇ ಸೋಲಿನ ರುಚಿ ಕಂಡ ನಿಖಿಲ್​ ಕುಮಾರಸ್ವಾಮಿ ಸೋಲಿನ ಪರಾಮರ್ಶೆಯಲ್ಲಿದ್ದು, ಇತ್ತ ನಿಖಿಲ್ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಸೋಲಿನಿಂದ ಬೇಸರಗೊಂಡ ಅಂಧ ಅಭಿಮಾನಿಯೊಬ್ಬ ತನ್ನ ಕೈ ಬೆರಳನ್ನೇ ಕತ್ತರಿಸಿಕೊಂಡ ಘಟನೆ ಮದ್ದೂರಿನಲ್ಲಿ ನಡೆದಿದೆ. ಮದ್ದೂರು ತಾಲೂಕಿನ ಆಬಲವಾಡಿ ಗ್ರಾಮದ ಸುನೀಲ್ ಬೆರಳನ್ನು ಕತ್ತರಿಸಿಕೊಂಡ ಯುವಕ.

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸುನೀಲ್ ಜೆಡಿಎಸ್​ ಪಕ್ಷದ ಪಕ್ಕಾ ಅಭಿಮಾನಿ. ಚುನಾವಣೆ ಸಂದರ್ಭದಲ್ಲಿ ಈತ ನಿಖಿಲ್ ಗೆಲುವಿಗಾಗಿ ಮದ್ದೂರಿಗೆ ಬಂದು ಮತ ಚಲಾಯಿಸಿ ಹೋಗಿದ್ದ. ಆದರೆ ಚುನಾವಣೆಯಲ್ಲಿ ನಿಖಿಲ್ ಸೋಲನುಭವಿಸಿದ್ದರು. ಇದರಿಂದ ಮನನೊಂದ ಆತ ನಿಖಿಲ್ ಸೋತ ಮೇಲೆ ಮತ ಹಾಕಿದ ಬೆರಳು ಕೂಡ ಬೇಡ ಎಂದು ಕೈಗೆ ಶಾಯಿ ಹಾಕಿಸಿಕೊಂಡಿದ್ದ ಬೆರಳನ್ನೇ ಅಭಿಮಾನಿ ಕತ್ತರಿಸಿಕೊಂಡಿದ್ದಾನೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top