fbpx
ಸಮಾಚಾರ

ಸಾಲಿಗ್ರಾಮ ಎಂದರೇನು ? ಅದು ಎಲ್ಲಿ ಸಿಗುತ್ತದೆ ? ಸಾಲಿಗ್ರಾಮವನ್ನು ಪೂಜಿಸಿದರೆ ಏನು ಫಲ ?

ಸಾಲಿಗ್ರಾಮ ಎಂದರೇನು ?

ಸಾಲಿಗ್ರಾಮ ಎಂಬುದು ಒಂದು ಶಿಲೆ. ಭೂಮಿಯ ಮೇಲೆ ಕೋಟ್ಯಾಂತರ ವರ್ಷಗಳ ಹಿಂದಿನಿಂದಲೇ ಸಾಲಿಗ್ರಾಮ ಇದೆ.ಶಿಲಾ ರೂಪದ ವಿಷ್ಣುವೇ . ಒಂದು ಸಾಲಿಗ್ರಾಮ ಶಿಲೆಯನ್ನು ಪೂಜಿಸಿದರೆ ನೂರು ಶಿವಲಿಂಗಗಳ ದರ್ಶನ ಹಾಗೂ ಪೂಜೆಗೆ ಸಮಾನ ಎನ್ನುವ ನಂಬಿಕೆ ಇದೆ.

ಸಾಲಿಗ್ರಾಮ ಶಿಲೆ ಸಿಗುವುದು ಎಲ್ಲಿ ?

ನೇಪಾಳದ ಮಸ್ತಾನ್, ಹಿಮಾಲಯ ಪರ್ವತದ ತಪ್ಪಲಿನಲ್ಲಿ ಹರಿಯುವ ಕಾಳಿ, ಗಂಡಕಿ ನದಿ ಸಮೀಪ ಶಾಲಗ್ರಾಮ ಎಂಬ ಸ್ಥಳವಿದೆ. ಅಲ್ಲಿ ಕಲ್ಲು ಸಾಲಿಗ್ರಾಮ ರೂಪ ಪಡೆಯುತ್ತದೆ.ಹೀಗಾಗಿ ಆ ಪ್ರದೇಶವನ್ನು ಶಾಲಗ್ರಾಮ ಶಿಲಾಗ್ರಾಮ ಎಂದು ಕರೆಯುತ್ತಾರೆ. ಗಂಡಕಿ ನದಿಯ ಗರ್ಭದಲ್ಲಿ ಸಾಲಿಗ್ರಾಮ ಶಿಲೆ ಯಥೇಚ್ಛವಾಗಿ ದೊರೆಯುತ್ತವೆ.

ಇಂದೂಗಳ ಸಂಪ್ರದಾಯದಂತೆ ಈ ಕಲ್ಲು ವಜ್ರ ಕೀಟ ಎಂಬ ಹುಳುವಿನ ಆಶ್ರಯತಾಣ. ವಜ್ರದ ಹಲ್ಲು ಹೊಂದಿರುವ ಈ ಹುಳ ಕಲ್ಲಿಗೆ ಒಂದು ಸಣ್ಣ ರಂಧ್ರ ಕೊರೆದು ಒಳ ಸೇರುತ್ತದೆ.ಒಳಗೆ ತನ್ನ ಹಲ್ಲುಗಳಿಂದ ಕೊರೆಯುವುದರಿಂದ ಚಕ್ರದ ರೀತಿ ಕೆತ್ತನೆ ಮೂಡುತ್ತದೆ. ಈ ಕೀಟ ಸ್ರವಿಸುವ ದ್ರವದಿಂದ ಚಿನ್ನ ಉತ್ಪತ್ತಿಯಾಗುತ್ತದೆ ಅದುವೇ ಅಸಲಿ ಸಾಲಿಗ್ರಾಮ.

ಸಾಲಿಗ್ರಾಮವನ್ನು ಪೂಜಿಸಿದರೆ ಏನೆಲ್ಲ ಪಲಗಳು ಲಭಿಸುತ್ತವೆ ?

ಸ್ಕಂದ ಮತ್ತು ಪದ್ಮ ಪುರಾಣದ ಪ್ರಕಾರ ಸಾಲಿಗ್ರಾಮವನ್ನು ಪೂಜಿಸಿದರೆ ಇಷ್ಟಾರ್ಥ ಸಿದ್ಧಿಸುತ್ತದೆ. ಒಳ್ಳೆಯ ಮಕ್ಕಳು, ಆರೋಗ್ಯ ಭಾಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿ ಜೀವನದಲ್ಲಿ ಪ್ರಾಪ್ತಿಯಾಗುತ್ತದೆ.
ಇದರ ನೀರಿನ ಸ್ಪರ್ಶದಿಂದ ಚಿಂತೆ ಒತ್ತಡ ಕಡಿಮೆಯಾಗುತ್ತದೆ. ಸಕಲ ಇಚ್ಛೆಗಳು ಪೂರೈಸುತ್ತದೆ. ಸಾಲಿಗ್ರಾಮದಲ್ಲಿ ದಿವ್ಯ ಶಕ್ತಿ ಇದ್ದು ಇದಕ್ಕೆ ಅಭಿಷೇಕ ಮಾಡಿದ ಹಾಲು, ಮೊಸರು, ನೀರು ಸೇವಿಸಿದರೆ ಆರೋಗ್ಯ ವೃದ್ಧಿಯಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top