fbpx
ಸಮಾಚಾರ

ವಿಭಿನ್ನವಾಗಿ ಗಿನ್ನಿಸ್ ದಾಖಲೆ ಬರೆದಳು ’ಗೀತಿ ಮೌಸವಿ’

ಸಾಧಿಸುವ ಛಲವೊಂದಿದ್ದರೆ ಸಾಮಾನ್ಯನೂ ಕೂಡ ಅಸಾಮಾನ್ಯವಾದುದನ್ನು ಸಾಧಿಸಬಲ್ಲ.

ನಿಖರ ಗುರಿ, ತಮ್ಮ ಕನಸಿನ ಬಗೆಗ ಅಪಾರ ಶ್ರದ್ಧೆ, ಪ್ರಾಮಾಣಿಕ ಪ್ರಯತ್ನಗಳು ಹೊಂದಿದವರು ಜಗತ್ತಿನ ಮಾತಿಗೆ ಕಿವಿ ಕೊಡದೆ ತಮ್ಮ ಆಂತರ್ಯವನ್ನು ಆಲಿಸುತ್ತ ಸಾಧನೆಯ ಶಿಖರದತ್ತ ಹೆಜ್ಜೆ ಹಾಕುತ್ತಾರೆ. ಸಾಧನೆಗೆ ವಯಸ್ಸಿನ ಇತಿ ಮಿತಿಯಾಗಲಿ ಹೆಣ್ಣು ಗಂಡು ಎಂಬ ಭೇದ ಭಾವವಾಗಲಿ ಇರುವುದಿಲ್ಲ ಎಂಬುದನ್ನ ಇಲ್ಲೊಬ್ಬ ಮಹಿಳೆ ಸಾಬೀತು ಪಡಿಸಿದ್ದಾರೆ.

ವೈಕಲ್ಯವಂಬುದು ದೇಹಕ್ಕೆ ಹೊರತು ಮನಸ್ಸಿಗಲ್ಲ ಪ್ರತಿಯೊಬ್ಬರು ತಮ್ಮದೇ ಹಾದಿಯಲ್ಲಿ ಸಾಧನೆಗಳನ್ನು ಮಾಡಲು ಇಚ್ಛಿಸುತ್ತಾರೆ. ತಮ್ಮ ಸಾಧನೆಗಳ ಮೂಲಕ ದಾಖಲೆ ಪುಟ ಸೇರಬೇಕೆಂಬ ಮಹದಾಸೆಯನ್ನೂ ಹೊಂದಿರುತ್ತಾರೆ. ಅಂಥಹದ್ದೇ ಮಹದಾಸೆ ಹೊಂದಿದ್ದ ಇರಾನ್ಮೂಲದ ಮಹಿಳೆಯೊಬ್ಬರು ಬರೋಬ್ಬರಿ 12 ಟನ್ನಷ್ಟು ತೂಕ ಇರುವ ಟ್ರಕ್ ಎಳೆದು ವರ್ಲ್ಡ್ ರೆಕಾರ್ಡ್ ಬರೆಯುವ ಮೂಲಕ ತಾವೂ ಕೂಡ ಯಾರಿಗಿಂತಲೂ ಕಡಿಮೆ ಇಲ್ಲ ಎಂಬುದನ್ನು ಪ್ರೂವ್ ಮಾಡಿದ್ದಾರೆ. 43 ವರ್ಷ ವಯಸ್ಸಿನ ’ಗೀತಿ ಮೌಸವಿ’ ಇಂಥದ್ದೊಂದು ಸಾಧನೆ ಮಾಡುವ ಮೂಲಕ ಗಿನ್ನಿಸ್ ದಾಖಲೆಯ ಪುಟ ಸೇರಿದ್ದಾರೆ. 2011ರಲ್ಲಿ ಆಸ್ಟ್ರೇಲಿಯಾದ ಮಹಿಳೆಯೊಬ್ಬರು 11 ಟನ್ ಟ್ರೈಲರ್ ಎಳೆದು ಮೂಲಕ ವಿಶ್ವ ದಾಖಲೆ ಬರೆದಿದ್ದರು. ಇದೀಗ ಗೀತಿ ಆ ದಾಖಲೆಯನ್ನು ಮುರಿದಿದ್ದು ಎಲ್ಲರ ಬೆರಗಾಗುವಂತೆ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top