fbpx
ಸಮಾಚಾರ

ಭಿಕ್ಷೆ ಬೇಡಿ ತನ್ನ ನಿಶ್ಶಕ್ತ ತಾಯಿಯನ್ನು ಆರೈಕೆ ಮಾಡುತ್ತಿದೆ 3 ವರ್ಷದ ಮಗು.

ಪುಟ್ಟ ಕಂದಮ್ಮಗಳನ್ನು ತಾಯಿ ಆರೈಕೆ ಮಾಡುವುದು ಸ್ವಾಭಾವಿಕ.. ಆದರೆ ಪ್ರಪಂಚದ ಪರಿವಿಯೇ ಇಲ್ಲದ 3 ವರ್ಷದ ಮಗುವೊಂದು ಭಿಕ್ಷೆ ಬೇಡಿ, ಕಂಡವರ ಬಳಿ ಆಹಾರ ಬೇಡಿ ಪಡೆದು ತನ್ನ ಅನಾರೋಗ್ಯ ತಾಯಿಯನ್ನು ಆರೈಕೆ ಮಾಡುತ್ತಿದೆ. ಕೊಪ್ಪಳದ ಜಿಲ್ಲಾಸ್ಪತ್ರೆಯಲ್ಲಿ ಕಳೆದ 4 ದಿನದಿಂದ ಈ ದೃಶ್ಯ ಅಲ್ಲಿದ್ದವರ ಮನಕಲಕುವಂತೆ ಮಾಡುತ್ತಿದೆ.

ಕಾರಟಗಿ ತಾಲೂಕಿನ ಸಿದ್ದಾಪುರದ ದುರ್ಗಮ್ಮ ಎಂಬುವರು ಕಳೆದ ನಾಲ್ಕು ದಿನಗಳ ಹಿಂದೆ ತಲೆ ನೋವು ಹಾಗೂ ಹೊಟ್ಟೆ ನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದರು. ದುರ್ಗಮ್ಮ ಅವರ ಪತಿ ಅರ್ಜುನ್ ತಮ್ಮ ಪತ್ನಿಯನ್ನು ಆಸ್ಪತ್ರೆಗೆ ಸೇರಿಸಿದ್ದರು. ನಾಳೆ ಬರುತ್ತೇನೆ ಎಂದು ಹೇಳಿ 3 ವರ್ಷದ ಮಗಳು ಭಾಗ್ಯಶ್ರೀಯನ್ನು ಜೊತೆಗೆ ಬಿಟ್ಟು ಹೋಗಿದ್ದನು. ಅದರೆ, ಆಸ್ಪತ್ರೆಯಲ್ಲಿ ಪತ್ನಿ, ಮಗಳನ್ನು ಬಿಟ್ಟು ಹೋದ ಅರ್ಜುನ್ ಮತ್ತೆ ವಾಪಸ್ಸು ಬರಲೇ ಇಲ್ಲ. ಹೀಗಾಗಿ ಅಸ್ವಸ್ಥ ತಾಯಿಗೆ ಬಾಲಕಿ ಭಾಗ್ಯಶ್ರೀ ಒಬ್ಬಂಟಿಯಾದ ಆಸರೆಯಾಗಿದ್ದಾಳೆ.

ಭಾಗ್ಯಶ್ರೀ ಆಸ್ಪತ್ರೆಯ ಆವರಣ ಸುತ್ತಮುತ್ತ ಭಿಕ್ಷೆ ಬೇಡುತ್ತಿದ್ದಾಳೆ. ಬಳಿಕ ಬಂದ ಹಣದಲ್ಲಿ ತಾಯಿಗೆ ಬೇಕಾದ ಎಳನೀರು, ಹಾಲು ಇನ್ನಿತರ ಪದಾರ್ಥಗಳನ್ನು ತಂದು ಕೊಡುತ್ತಿದ್ದಾಳೆ. ಊಟ ಮಾಡಿಸುವುದಲ್ಲದೇ ತಾಯಿಯ ತಲೆ ಬಾಚುವುದು, ಸ್ವಚ್ಛಗೊಳಿಸುವ ಕೆಲಸ ಕೂಡ ಭಾಗ್ಯಶ್ರೀ ಮಾಡುತ್ತಿದ್ದಾಳೆ. ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿರುವ ತನ್ನ ತಾಯಿಗೆ ಭಿಕ್ಷೆ ಬೇಡಿ ದಿನನಿತ್ಯ ಊಟ ಮಾಡಿಸುವ ದೃಶ್ಯ ನೋಡುಗರ ಕಣ್ಣಂಚಿನಲ್ಲಿ ನೀರು ತರಿಸುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top