fbpx
ಸಮಾಚಾರ

ನಟ ಅಜಯ್ ದೇವಗನ್ ತಂದೆ ವೀರು ದೇವಗನ್ ನಿಧನ.

ಬಾಲಿವುಡ್ ನಟ ಅಜಯ್ ದೇವಗನ್ ತಂದೆ ಹಿರಿಯ ಸಾಹಸ ನಿರ್ದೇಶಕ, ಚಿತ್ರ ನಿರ್ಮಾಪಕ ವೀರು ದೇವಗನ್ ನಿಧನ ಹೊಂದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ವೀರೂ ದೇವಗನ್ ಮುಂಬಯಿ ಸಾಂತಾಕ್ರೂಸ್‌ನ ಸೂರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೀರೂ ಅವರು ಸೋಮವಾರ ಮುಂಜಾನೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ವೀರೂ ಅವರ ಅಂತ್ಯಕ್ರಿಯೆಗಳು ಸೋಮವಾರ ಸಂಜೆ ವಿಲೆ ಪಾರ್ಲೆ ಪಶ್ಚಿಮ ಚಿತಾಗಾರದಲಿ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ. ತಂದೆ ಅನಾರೋಗ್ಯಕ್ಕೆ ತುತ್ತಾಗಿದ್ದ ಕಾರಣ ಅಜಯ್ ದೇವಗನ್ 15 ದಿನಗಳ ಹಿಂದೆಯೇ ಎಲ್ಲ ಕೆಲಸಗಳನ್ನು ಬಿಟ್ಟು ತಮ್ಮ ತಂದೆಯನ್ನು ನೋಡಿಕೊಳ್ಳುತ್ತಿದ್ದರು.

 

 

ಸುಮಾರು 80ಕ್ಕೂ ಅಧಿಕ ಚಿತ್ರಗಳಿಗೆ ಸಾಹಸಮಯ ದೃಶ್ಯಗಳನ್ನು ಮಾಡಿರುವ ವೀರು ದೇವಗನ್ ಅಜಯ್ ದೇವಗನ್, ಅಮಿತಾಬ್ ಬಚ್ಚನ್, ಮನಿಷಾ ಕೋಯಿರಾಲ ಮತ್ತು ಸುಷ್ಮಿತಾ ಸೇನ್ ತಾರಾಗಣದ ‘ಹಿಂದೂಸ್ಥಾನ್ ಕಿ ಕಸಮ್’ (1999) ಚಿತ್ರದ ಮೂಲಕ ನಿರ್ದೇಶಕರಾಗಿ ಪರಿಚಿತರಾಗಿದ್ದರು ವೀರು ದೇವಗನ್. ದಿಲ್‍ವಾಲೆ (1994), ಹಿಮ್ಮತ್‌ವಾಲಾ (1983), ಶಹನ್‌ಶಾಹ್ (1988) ಚಿತ್ರಗಳು ಅವರ ಸಾಹಸ ನಿರ್ದೇಶನದಲ್ಲಿ ಮೂಡಿಬಂದಿರುವ ಪ್ರಮುಖ ಸಿನಿಮಾಗಳು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top