fbpx
ಸಮಾಚಾರ

ಅರಳಿ ಮರಕ್ಕೆ ಈ 3 ವಸ್ತುಗಳಿಂದ ಪೂಜಿಸಿದರೆ ಯಾವುದೇ ಸಮಸ್ಯೆ ಇದ್ದರೂ ನಿವಾರಣೆಯಾಗುತ್ತದೆ

ಅಮಾವಾಸ್ಯೆಯ ಒಂದು ದಿನ ನಮ್ಮ ಹಿಂದೂ ಧರ್ಮದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಈ ದಿನಗಳಲ್ಲಿ ಅನೇಕ ಆಚರಣೆಗಳು ನಡೆಯುತ್ತವೆ. ಅಮಾವಾಸ್ಯೆಯ ದಿನದಂದು ಅರಳಿ ಮರವನ್ನು ಪೂಜಿಸುವುದರಿಂದ ಎಲ್ಲಾ ರೀತಿಯ ವೈಯಕ್ತಿಕ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ ಎಂದು ಅನಾದಿ ಕಾಲದಿಂದಲೂ ನಂಬಿದ್ದೇವೆ. ಇಂದೂ ಪುರಾಣ ಹಾಗೂ ಸಂಪ್ರದಾಯಗಳ ಪ್ರಕಾರ ಅರಳಿ ಮರವನ್ನು ಪವಿತ್ರವೆಂದು ನಂಬಲಾಗಿದೆ.
108 ಬಾರಿ ಈ ಪವಿತ್ರ ವೃಕ್ಷದ ಸುತ್ತ ಸುತ್ತುವುದರಿಂದ ಉತ್ತಮ ಫಲಗಳು ಲಭಿಸುತ್ತವೆ.ಹಾಲು, ಶ್ರೀಗಂಧ, ಚಂದನ, ಹೂವುಗಳನ್ನು ಅರ್ಪಿಸಿ ಮಂತ್ರವನ್ನು ಪಠಿಸುವ ಮೂಲಕ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು ತೃಪ್ತಿಪಡಿಸಬಹುದು ಎಂದು ನಂಬಲಾಗಿದೆ. ಅರಳಿ ಮರದಲ್ಲಿ ಮಹಾನ ದೇವತೆಗಳು ವಾಸಿಸುತ್ತಿದ್ದಾರೆ ಎಂದು ನಂಬಲಾಗಿದೆ. ಬೇರುಗಳಲ್ಲಿ ಬ್ರಹ್ಮದೇವ, ಕಾಂಡದಲ್ಲಿ ವಿಷ್ಣುದೇವ, ಎಲೆಗಳಲ್ಲಿ ಶಿವ ನೆಲೆಸಿದ್ದಾನೆ. ಇನ್ನುಳಿದ ದೇವತೆಗಳು ಈ ಮರದ ಕೆಳಗೆ ಅವರ ಜಾಗವನ್ನು ಹಿಡಿದಿಟ್ಟುಕೊಂಡಿದ್ದಾರೆ ಎಂದು ಹೇಳಲಾಗುತ್ತದೆ. ಆದ್ದರಿಂದ ಆಧ್ಯಾತ್ಮಿಕ ತಿಳುವಳಿಕೆಗೆ ಸಂಬಂಧಿಸಿದೆ.

 

 

ಅರಳಿಮರ ಕೃಷ್ಣನೊಂದಿಗೆ ಕೂಡ ನಿಕಟ ಸಂಬಂಧವನ್ನು ಹೊಂದಿದೆ ಎಂದು ಭಗವದ್ಗೀತೆ ಹೇಳುತ್ತದೆ. ಅರಳಿ ಮರದ ಆರಾಧನೆಯಿಂದ ಯಾವ ಯಾವ ಫಲಗಳು ಸಿಗುತ್ತವೆ ಎಂಬುದನ್ನು ನೋಡೋಣ ಬನ್ನಿ. ಆಲೋಚನೆಗಳು ಮತ್ತು ಕಾರ್ಯಗಳನ್ನು ಸ್ಥಿರಗೊಳಿಸುತ್ತದೆ. ಸಕಾಲಿಕ ಮದುವೆಯನ್ನು ಖಚಿತಪಡಿಸುತ್ತದೆ, ಮದುವೆಯಲ್ಲಿ ಅಡೆತಡೆಗಳು ಇದ್ದರೆ ಅವುಗಳನ್ನು ನಿವಾರಿಸುತ್ತದೆ. ಮಗುವಿನ ಜನನದಲ್ಲಿ ತೊಂದರೆ ಉಂಟಾಗುವುದನ್ನು ತಡೆಯುತ್ತದೆ, ಜೀವನದಲ್ಲಿ ಧಾರ್ಮಿಕ ಆಲೋಚನೆಗಳನ್ನು ಹೆಚ್ಚಿಸುತ್ತದೆ, ಆದಾಯ ನಿರಂತರವಾಗಿ ಹರಿಯುವಂತೆ ಮಾಡುತ್ತದೆ.

ಆದಾಯ ಬಹುಬೇಗ ಬಹು ಮೂಲಗಳಿಂದ ಒದಗಿ ಬರುವ ಹಾಗೆ ಮಾಡುತ್ತದೆ. ಶನಿ ಸಾಡೆ ಸಾತಿಯ ಪರಿಣಾಮಗಳನ್ನು ಕಡಿಮೆಗೊಳಿಸುತ್ತದೆ. ಜೀವನದಲ್ಲಿ ಆರೋಗ್ಯ, ಸಂಪತ್ತು ಹಾಗೂ ಸಮೃದ್ಧಿಯನ್ನು ಹೆಚ್ಚಿಸುತ್ತದೆ. ನವಗ್ರಹ ದೋಷಗಳನ್ನು ಕಡಿಮೆಗೊಳಿಸುತ್ತದೆ, ಎಲ್ಲಾ ವಿಧದ ಭಯ ಹಿಂಜರಿಕೆಗಳನ್ನು ಹೋಗಲಾಡಿಸುತ್ತದೆ, ಮಂಗಳ ಗ್ರಹದ ಪರಿಣಾಮವನ್ನು ಕಡಿಮೆಗೊಳಿಸುತ್ತದೆ, ಎಲ್ಲಾ ನೋವು ಹಾಗೂ ಮತ್ತು ಸಮಸ್ಯೆಗಳನ್ನು ತೊಡೆದು ಹಾಕುತ್ತದೆ ಬಡತನವನ್ನು ನಿವಾರಿಸುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top