fbpx
ಸಮಾಚಾರ

“ಮಂಡ್ಯ ಜನಕ್ಕೆ ಪ್ರೀತಿ ಕೊಡೋದು ಗೊತ್ತು, ವಾಪಸ್​ ಕಿತ್ಕೊಳೋದು ಗೊತ್ತು” ನಿಖಿಲ್​ ಸೋಲಿನ ಬಗ್ಗೆ ಚಲುವರಾಯಸ್ವಾಮಿ ಹೇಳಿಕೆ.

“ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದೆ ಸುಮಲತಾ ಗೆಲ್ಲಲು ಕಾರಣ” ಎಂದು ಹೇಳಿದ್ದ ಚೆಲುವರಾಯ ಸ್ವಾಮಿ ಇದೀಗ ಮತ್ತೊಮ್ಮೆ ನಿಖಿಲ್ ಸೋಲಿನ ಬಗ್ಗೆ ಮಾತನಾಡಿದ್ದಾರೆ.

“ಮಂಡ್ಯ ಜನಕ್ಕೆ ಪ್ರೀತಿ ಕೊಡೋದು ಗೊತ್ತು, ವಾಪಸ್​ ಕಿತ್ಕೊಳೋದು ಗೊತ್ತು. ಜಿಲ್ಲೆಯ ಜನರು ಕೊಟ್ಟ ಪ್ರೀತಿಯನ್ನು ಸಿಎಂ ಕುಮಾರಸ್ವಾಮಿ ಉಳಿಸಿಕೊಳ್ಳಲಿಲ್ಲ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದಿದ್ದರೆ ಹೀಗೆ ಆಗುತ್ತಿರಲಿಲ್ಲ ಎಂದು ಮಂಡ್ಯ ಫಲಿತಾಂಶದ ಬಗ್ಗೆ ಕಾಂಗ್ರೆಸ್ ನಾಯಕ ಎನ್ ಚಲುವರಾಯಸ್ವಾಮಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಮಂಡ್ಯದ ಜನರು ತುಂಬಾ ಪ್ರಜ್ಞಾವಂತರು,ಗಾಸಿಪ್​ಗಳಿಗೆ ಹೆಚ್ಚು ಸಮಯ ಕೊಡುವುದಿಲ್ಲ.. ಪ್ರೀತಿ ಕೊಡ್ತಾರೆ, ಹಾಗೆಯೇ ವಾಪಸ್ ಕೂಡ ಪಡೀತಾರೆ. ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಅಂದು ನಿರ್ಧರಿಸಿದ್ದರು. ಹಾಗಾಗಿಯೇ ಅವರಿಗೆ ಮತ ಹಾಕಿದ್ದರು.. ಅಂದು ಇಷ್ಟಪಟ್ಟದ್ದರು ಇಂದು ಅವರನ್ನೂ ತಿರಸ್ಕರಿಸಿದ್ದಾರೆ” ಎಂದು ಹೇಳಿದ್ದಾರೆ.

“ಸೋತಿರೋರನ್ನ ಯಾಕೆ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಅಂದಿದ್ರು, ಮೇ 23ಕ್ಕೆ ಉತ್ತರ ಕೊಡ್ತೀನಿ ಅಂದ್ರು, ಕೊಟ್ಟಿದ್ದಾರಾ?” ಎಂದು ಚೆಲುವರಾಯ ಸ್ವಾಮಿ ಪ್ರಶ್ನೆ ಮಾಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top