fbpx
ಸಮಾಚಾರ

ನೀರು ಕುಡಿಯಲು ಹೋಗಿ ಟ್ಯಾಂಕಿನಲ್ಲಿ ಬಿದ್ದು ಕೋತಿಗಳ ಸಾವು- ಇಡೀ ಊರಿನ ಜನರಿಗೆ ವಾಂತಿ ಭೇದಿ.

ಬೇಸಿಗೆಯಿಂದಾಗಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬರ ವ್ಯಾಪಿಸಿದ್ದು, ಪ್ರಾಣಿಗಳಿಗೂ ಕುಡಿಯುವ ನೀರು ಸಿಗದೇ ಪರದಾಡುತ್ತಿವೆ. ಇಡೀ ಊರಿಗೆ ಕುಡಿಯುವ ನೀರು ಒದಗಿಸುವ ದೊಡ್ಡ ಟ್ಯಾಂಕ್‌ನಲ್ಲಿ ನಾಲ್ಕು ಕೋತಿಗಳು ಬಿದ್ದು ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಜೆ ಮಲ್ಲಾಪುರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಬೀಸಿಲಿನ ಝಳಕ್ಕೆ ಬಾಯಾರಿಕೆಯಾಗಿ ಜೆ ಮಲ್ಲಾಪುರ ಗ್ರಾಮದಲ್ಲಿ ಇದ್ದ ಕುಡಿಯುವ ನೀರಿನ ಟ್ಯಾಂಕಿನಲ್ಲಿ ಕೋತಿಗಳು ಇಳಿದಿವೆ. ನೀರು ಕುಡಿಯಲು ಒಟ್ಟು 10 ಕೋತಿಗಳು ಟ್ಯಾಂಕಿನಲ್ಲಿ ಇಳಿದಿದ್ದವು, ಆದರೆ ಅದರಲ್ಲಿ ನಾಲ್ಕು ಕೋತಿಗಳು ಸಾವನ್ನಪ್ಪಿವೆ. ಈ ವಿಷಯ ಊರಿನ ಜನಕ್ಕೆ ತಿಳಿದಿರಲಿಲ್ಲ.

ಕೋತಿಗಳು ಸತ್ತ ಅರಿವಿಲ್ಲದೆ ನೀರು ಕುಡಿದ ಗ್ರಾಮಸ್ಥರಿಗೆ ಕಳೆದೆರಡು ದಿನಗಳಿಂದ ವಾಂತಿ ಬೇಧಿ ಕಾಣಿಸಿಕೊಂಡಿತ್ತು. ಊರಿನ ಬಹುತೇಕ ಜನರಿಗೆ ಈ ಸಮಸ್ಯೆ ಕಾಣುತ್ತಿದ್ದಂತೆ ಅನುಮಾನಗೊಂಡ ಗ್ರಾಮಸ್ಥರು ನೀರಿನ ಟ್ಯಾಂಕ್ ಪರಿಶೀಲಿಸಿದಾಗ ಅದರಲ್ಲಿ ನಾಲ್ಕು ಕೋತಿಗಳ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗ್ರಾಮಸ್ಥರು ಕೋತಿಗಳನ್ನು ಹೊರ ತೆಗೆದು ಟ್ಯಾಂಕ್ ಅನ್ನು ಸ್ವಚ್ಛಗೊಳಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top