fbpx
ಸಮಾಚಾರ

ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಡಿಸ್ಕೊ ಶಾಂತಿ ಮಗ

ಒಂದು ಕಾಲದಲ್ಲಿ ಅದ್ಭುತ ನೃತ್ಯದ ಮೂಲಕ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ರಾಣಿಯಾಗಿ ಮೆರೆದ ಪ್ರತಿಭಾನ್ವಿತ ನಟಿ ಡಿಸ್ಕೊ ಶಾಂತಿ. ಕನ್ನಡ, ತಮಿಳು, ತೆಲುಗು, ಹಿಂದಿ ಎಲ್ಲ ಚಿತ್ರರಂಗದಲ್ಲಿಯೂ ಡಿಸ್ಕೋ ಶಾಂತಿ ವೈಯಾರ ತೋರಿಸಿದ್ದರು. ತೆಲುಗು ನಟ ಶ್ರೀಹರಿಯನ್ನು ಮದುವೆಯಾದ ನಂತರ ಡ್ಯಾನ್ಸ್ ಹಾಗೂ ನಟನೆಯಿಂದ ಸ್ವಲ್ಪ ದೂರವಾಗಿದ್ದರು.. ಇದೀಗ ಡಿಸ್ಕೋಶಾಂತಿಯ ಪುತ್ರ ಮೇಘಾಂಶ್ ಸಿನಿ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ.

ಡಿಸ್ಕೋ ಶಾಂತಿ ಪುತ್ರನ ಹೆಸರು ಮೇಘಾಂಶ್. ಈಗ ಇವರು ಚಿತ್ರರಂಗಕ್ಕೆ ಬರುವ ತಯಾರಿ ನಡೆಸಿದ್ದಾರೆ. ‘ರಾಜಧೂತ್’ ಎಂಬ ತೆಲುಗು ಸಿನಿಮಾದ ಮೂಲಕ ಮೇಘಾಂಶ್ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈ ಸಿನಿಮಾದಲ್ಲಿ ಲವರ್ ಬಾಯ್ ಗೆಟಪ್ ನಲ್ಲಿ ಮೇಘಾಂಶ್ ಕಾಣಿಸಿಕೊಳ್ಳುತ್ತಿದ್ದು ‘ರಾಜಧೂತ್’ ಮಾಸ್ ಹಾಗೂ ಸೆಂಟಿಮೆಂಟ್ ಅಂಶಗಳನ್ನು ಹೊಂದಿರುವ ಸಿನಿಮಾ ಆಗಿದೆ.

ಲಕ್ಷ್ಯ ಬ್ಯಾನರ್​ನಲ್ಲಿ ಸತ್ಯನಾರಾಯಣ ನಿರ್ಮಾಣದಲ್ಲಿ ರಾಜ್​ಧೂತ್ ಸಿನಿಮಾ ಸೆಟ್ಟೇರೆಲಿದ್ದು ಕಾರ್ತಿಕ್ ಮತ್ತು ಅರ್ಜುನ್ ಆ್ಯಕ್ಷನ್ ಕಟ್​ ಹೇಳಲಿದ್ದಾರೆ. ಬಾಲನಟನಾಗಿ ನೃತ್ಯ, ಡ್ಯಾನ್ಸ್​ ಕಲೆಯನ್ನು ಕರಗತ ಮಾಡಿಕೊಂಡಿರೋ ಮೇಘಾಂಶ್ ರಾಜಧೂತ್ ಹೇಗೆಲ್ಲ ಕಾಣಿಸಲಿದ್ದಾರೆ ಎಂಬುದು ಕಾದುನೋಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top