fbpx
ಸಮಾಚಾರ

ಗೋಮೂತ್ರ ಮತ್ತು ಹರಿಶಿಣ ದಿಂದ ಹೀಗೆ ಮಾಡಿ

ನಿಮ್ಮ ಕುಟುಂಬದ ಜೊತೆಗೆ ಎಂದೆಂದಿಗೂ ಸಂತೋಷದಿಂದ ಬಾಳಬೇಕು ಎಂದರೆ ಗೋಮೂತ್ರದಲ್ಲಿ ಸ್ವಲ್ಪ ಅರಿಶಿಣವನ್ನು ಹಾಕಿ ಹೀಗೆ ಮಾಡಿ.

ಮನೆಯಲ್ಲಿ ಒಬ್ಬರ ಜಾತಕ ಒಂದೊಂದು ರೀತಿಯಲ್ಲಿ ಇರುತ್ತದೆ ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಾದರೂ ಸರಿಯೇ, ಜಾತಕಗಳು ಮಾತ್ರ ಬೇರೆ ಬೇರೆ ರೀತಿಯಲ್ಲಿ ಇರುತ್ತವೆ. ಯಾರ ಇಬ್ಬರ ಜಾತಕವೂ ಸಹ ಒಂದಾಗಿ ಇರುವುದಿಲ್ಲ .ಆದರೆ ಮನೆಯಲ್ಲಿ ವಾಸ ಮಾಡುವ ಯಾವುದೇ ಒಬ್ಬ ವ್ಯಕ್ತಿಯ ಜಾತಕ ಸರಿಯಾಗಿ ಇಲ್ಲವೆಂದರೆ ಆ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ಹೆಚ್ಚಾಗಿ ಇರುತ್ತವೆ ಎಂದು ಹಿರಿಯರು ಹೇಳುತ್ತಾರೆ.
ಇನ್ನು ಮನೆಯ ಯಜಮಾನನ ಜಾತಕದ ಗ್ರಹ ಸ್ಥಿತಿಗಳು ಸರಿಯಾಗಿ ಇಲ್ಲದಿದ್ದರೆ ಅವರು ಇನ್ನೂ ಹೆಚ್ಚಿನ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ.ತಿಳಿದೋ ತಿಳಿಯದೆಯೋ ಮಾಡಿರುವ ತಪ್ಪುಗಳು ತೊಲಗಿ ಹೋಗಿ ದೋಷಗಳು ದೂರವಾಗಬೇಕೆಂದರೆ ಏನು ಮಾಡಬೇಕೆಂದು ಈಗ ನಾವು ತಿಳಿದುಕೊಳ್ಳೋಣ.

 

 

ಒಂದು ಒಳ್ಳೆಯ ದಿನ ನೋಡಿಕೊಂಡು ಬೆಳಗಿನ ಜಾವ ಬೇಗನೆ ಎದ್ದು ತಲೆ ಸ್ನಾನವನ್ನು ಮಾಡಬೇಕು ಒಂದು ಲೋಟದಲ್ಲಿ ಗೋಮೂತ್ರವನ್ನು ತೆಗೆದುಕೊಳ್ಳಬೇಕು.ಸ್ವಲ್ಪ ಗೋಮೂತ್ರವನ್ನು ನೀರಿನಲ್ಲಿ ಮಿಶ್ರಣ ಮಾಡಬೇಕು. ಈ ಮಿಶ್ರಣದ ನೀರನ್ನು ಮನೆಯಲ್ಲಿ ಎಲ್ಲಾ ಮೂಲೆ ಮೂಲೆಗಳಿಗೂ ಪ್ರೋಕ್ಷಣೆ ಮಾಡಬೇಕು.

ಹೀಗೆ ಮಾಡಿದರೆ ನಿಮಗಿರುವ ಎಲ್ಲಾ ದೋಷಗಳು ದೂರವಾಗುತ್ತವೆ. ಹಾಗೆಯೇ ಆ ಮನೆಯಲ್ಲಿ ಸಿರಿ ಸಂಪತ್ತು ಸಹ ವೃದ್ಧಿಯಾಗುತ್ತದೆ.ಅರಿಶಿಣ ತುಂಬಾ ಶುಭಪ್ರದವಾಗಿದ್ದು ಹಾಗೆಯೇ ಲಕ್ಷ್ಮಿ ದೇವಿಗೆ ತುಂಬಾ ಇಷ್ಟವಾದದ್ದು. ಗೋಮೂತ್ರದಲ್ಲಿ ಸ್ವಲ್ಪ ಅರಿಶಿಣವನ್ನು ಮಿಶ್ರಣ ಮಾಡಿ ಮಂಗಳವಾರ ಮತ್ತು ಶುಕ್ರವಾರದ ದಿನಗಳಲ್ಲಿ ಮನೆಯನ್ನು ಸ್ವಚ್ಛ ಗೊಳಿಸಬೇಕು.ಈ ದಿನಗಳಲ್ಲಿ ಹೀಗೆ ಮಾಡುವುದರಿಂದ ಆರ್ಥಿಕ ಪರಿಸ್ಥಿತಿಗಳು ತುಂಬಾ ಉತ್ತಮವಾಗುತ್ತದೆ ಎಂದು ಪಂಡಿತರು ಹೇಳುತ್ತಾರೆ. ಗಂಗಾಜಲವನ್ನು ತೆಗೆದುಕೊಂಡು ಬಂದು ಆ ನೀರಿನಿಂದ ದೇವರ ಫೋಟೋ ಮತ್ತು ದೇವರ ವಿಗ್ರಹಗಳನ್ನು ಸ್ವಚ್ಛ ಮಾಡಿದರೆ ಮನೆಯಲ್ಲಿರುವ ದೋಷಗಳೆಲ್ಲ ದೂರವಾಗಿ ಮನೆಯಲ್ಲಿ ಸಕಲ ಸಂಪತ್ತನ್ನು ಹೆಚ್ಚಿಸಿ ಕೊಳ್ಳಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top