fbpx
ಸಮಾಚಾರ

“ದೇವೇಗೌಡ ಸೋಲಲು ನಿಖಿಲ್ ಕಾರಣ” ಕೆ.ಎನ್.ರಾಜಣ್ಣ ಸ್ಫೋಟಕ ಹೇಳಿಕೆ

ತುಮಕೂರಿನಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಎಚ್.ಡಿ. ದೇವೇಗೌಡ ಗೆಲ್ಲಬೇಕಿತ್ತು. ಆದರೆ ಇಲ್ಲಿ ಹೀನಾಯ ಸೋಲಿಗೆ ಅವರ ಮೊಮ್ಮಗ ನಿಖಿಲ್ ಕೂಡ ಒಂದು ಕಾರಣ ಎಂದು ಕಾಂಗ್ರೆಸ್‌ ಮಾಜಿ ಶಾಸಕ ಕೆ.ಎನ್‌. ರಾಜಣ್ಣ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಸಜ್ಜನ ರಾಜಕಾರಣಿ ಎಂದೇ ಹೆಸರಾಗಿದ್ದ ಮುದ್ದಹನುಮೇಗೌಡರಿಗೆ ದೇವೇಗೌಡರಿಂದ ಟಿಕೆಟ್ ತಪ್ಪಿತು. ಅವರೇನೂ ಒಕ್ಕಲಿಗರಲ್ಲವೇ, ದೇವೇಗೌಡ್ರು ಮಾತ್ರ ಒಕ್ಕಲಿಗರಾ ಎಂದು ಖಾರವಾಗಿ ಪ್ರಶ್ನಿಸಿದ ಕೆ ಎನ್ ರಾಜಣ್ಣ, ಅವರ ವಿರುದ್ದ ನಾವೇನು ಪ್ರಚಾರವನ್ನೂ ಮಾಡಲಿಲ್ಲ, ಅವರ ಪರವಾಗಿ ಕ್ಯಾಂಪೇನಿಗೂ ಹೋಗಿಲ್ಲ. ಅವರ ಮೊಮ್ಮಗ ನಿಖಿಲ್ ಕುಮಾರಸ್ವಾಮಿಯಿಂದಾಗಿ, ಮಧುಗಿರಿಯಲ್ಲಿ ಜೆಡಿಎಸ್ಸಿಗೆ ಹಿನ್ನಡೆಯಾಯಿತು ಎಂದು ರಾಜಣ್ಣ ಹೇಳಿದ್ದಾರೆ.

 

 

ದೇವೇಗೌಡರ ಸೋಲಿಗೆ ನಿಖಿಲ್ ಕಾರಣ:
“ನಿಖಿಲ್ ಕುಮಾರಸ್ವಾಮಿ ಕುಂಚಿಟಿಗರ ಹೆಣ್ಣು ಮಗಳನ್ನು ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಆ ಯುವತಿಯನ್ನು ವಿವಾಹ ಮಾಡಿಕೊಳ್ಳಲಿಲ್ಲ. ಇದು ಆ ಸಮುದಾಯದ ಜನರಲ್ಲಿ ಬೇಸರಕ್ಕೆ ಕಾರಣವಾಗಿತ್ತು. ದೇವೇಗೌಡರ ವಿರುದ್ಧ ಮತ ಚಲಾಯಿಸಿದರು. ಇದನ್ನು ನನ್ನ ಬಹಳಷ್ಟು ಸ್ನೇಹಿತರು ನನಗೆ ತಿಳಿಸಿದರು” ಎಂದು ರಾಜಣ್ಣ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top