fbpx
ಸಮಾಚಾರ

ತಮ್ಮ ಹುದ್ದೆಗೆ ಕೊನೆಗೂ ರಾಜೀನಾಮೆ ನೀಡಿದ ಅಣ್ಣಾಮಲೈ- ದಿಡೀರ್ ರಾಜಿನಾಮೆಗೆ ಕಾರಣವೇನು?

ಧಕ್ಷ, ಪ್ರಾಮಾಣಿಕ, ಖಡಕ್​ ಐಪಿಎಸ್​ ಅಧಿಕಾರಿ ಎಂದೇ ಖ್ಯಾತರಾಗಿರುವ ಅಣ್ಣಾಮಲೈ ಕಡೆಗೂ ತಾವು ನಿರ್ಧರಿಸಿದಂತೆಯೇ ನಾಗರಿಕ ಸೇವೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇಂದು ಬೆಳಗ್ಗೆ ಪತ್ರಮುಖೇನ ರಾಜ್ಯ ಪೊಲೀಸ್​ ಮಹಾ ನಿರ್ದೇಶಕಿ ನೀಲ್ಮಣಿ ಎನ್​ ರಾಜು ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಈ ಮೂಲಕ ಹತ್ತು ವರ್ಷಗಳ ಪ್ರಾಮಾಣಿಕ ಸೇವೆಗೆ ಅಣ್ಣಾಮಲೈ ಅಂತಿಮ ವಿದಾಯ ಹೇಳಿದ್ದಾರೆ.

ತಮ್ಮ ರಾಜೀನಾಮೆಗೆ ಇದುವರೆಗೂ ನಿಖರ ಕಾರಣವನ್ನು ಅಣ್ಣಾಮಲೈ ಹೇಳದಿದ್ದರೂ ಮುಂದಿನ ದಿನಗಳಲ್ಲಿ ಹೇಳುತ್ತೇನೆ ಎಂಬ ಭರವಸೆ ನೀಡಿದ್ದಾರೆ. ನನಗೆ ಯಾವುದೇ ಒತ್ತಡ ಇಲ್ಲ. ನನ್ನ ರಾಜೀನಾಮೆ ವಿಷಯ ಹೊರಬಂದ ತಕ್ಷಣ ಹಲವು ಕರೆಗಳು ಬರುತ್ತಿವೆ. ಇಲ್ಲಿನ ರಾಜಕೀಯ ಪಕ್ಷಗಳ ನಾಯಕರು ಕೂಡ ಕರೆ ಮಾಡಿದರು. ಎಲ್ಲಾ ಪಾರ್ಟಿಯ ಹಲವು ಪ್ರಮುಖರು ಕರೆ ಮಾಡಿ ಮಾತನಾಡಿದರು. ನಿಮಗೆ ಏನಾದ್ರು ಸಮಸ್ಯೆ ಇದ್ದರೆ ಹೇಳಿ, ಪೋಸ್ಟಿಂಗ್ ಎಲ್ಲಿಗೆ ಬೇಕಾದ್ರು ಕೇಳಿ, ನೀವು ಕರ್ತವ್ಯದಲ್ಲಿ ಮುಂದುವರಿಯಿರಿ ಎಂದು ಸಲಹೆ ನೀಡಿದರು. ನಿಜಕ್ಕೂ ನನಗೆ ಎಲ್ಲರ ಮಾತು ಕೇಳಿ ಸಂತಸ ತಂದಿದೆ. ಆದರೂ ನಾನು ರಾಜೀನಾಮೆ ನೀಡುವುದು ಖಚಿತ. ನನ್ನ ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ. ನಾನು ಯಾವುದೇ ರಾಜಕೀಯಕ್ಕೆ ಸದ್ಯದ ಮಟ್ಟಿಗೆ ಹೋಗಲ್ಲ.” ಎಂದು ಅಣ್ಣಾ ಮಲೈ ಹೇಳಿದ್ದಾರೆ.

2011ನೇ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಅಣ್ಣಾಮಲೈ ಅವರು ಕಾರ್ಕಳ, ಚಿಕ್ಕಮಗಳೂರು ಎಸ್ಪಿಯಾಗಿ ಕಾರ್ಯ ನಿರ್ವಹಿಸಿದ್ದರು. ಅಣ್ಣಾಮಲೈ ಅವರ ರಾಜೀನಾಮೆ ಬಗ್ಗೆ ಸೋಮವಾರ ರಾತ್ರಿಯಿಂದ ಸುದ್ದಿ ವಾಹಿನಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಬರುತ್ತಿದ್ದಂತೆ, ಅಭಿಮಾನಿಗಳು ಅಣ್ಣಾಮಲೈ ಕಚೇರಿಯತ್ತ ಧಾವಿಸಿ, ರಾಜೀನಾಮೆ ನೀಡದಂತೆ ಒತ್ತಾಯಿಸುತ್ತಿದ್ದರು. ಕೊಯಮತ್ತೂರು ಮೂಲದವರಾದ ಅಣ್ಣಾಮಲೈ ಅವರು ಪೊಲೀಸ್ ಹುದ್ದೆ ತೊರೆದ ಬಳಿಕ ಸ್ವಗ್ರಾಮಕ್ಕೆ ತೆರಳಲಿದ್ದಾರಂತೆ.

ಇತ್ತೀಚೆಗೆ ಅಣ್ಣಾಮಲೈ ರಾಜಕೀಯ ಪ್ರವೇಶ ಮಾಡಲಿದ್ದಾರೆ. ಹೀಗಾಗಿ ರಾಜೀನಾಮೆ ನೀಡ್ತಾರೆ ಅಂತ ಸುದ್ದಿಯಾಗಿತ್ತು. ಆದ್ರೆ ಅಣ್ಣಾಮಲೈ ಈಗ ಪತ್ರದ ಮೂಲಕ ತಮ್ಮ ರಾಜೀನಾಮೆಗೆ ಫ್ಯಾಮಿಲಿ, ತಂದೆ-ತಾಯಿ ಹಾಗೂ ವೈಯಕ್ತಿಕ ಜೀವನದ ಕಾರಣ ಕೊಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top