fbpx
ಸಮಾಚಾರ

ಅಂದು ಬೀದಿ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದ ಈತ ಇಂದು 30 ಕೋಟಿ ಮೌಲ್ಯದ ಕಂಪನಿಯ ಮಾಲೀಕ.

ಜೀವನದಲ್ಲಿ ಛಲವೊಂದಿದ್ದರೆ ಗೆಲವು ನಿಮ್ಮನ್ನ ಹಿಂಬಾಲಿಸುತ್ತದೆ ಎನ್ನುವುದಕ್ಕೆ ರೇಣುಕಾ ಆರಾಧ್ಯ ಅವರೇ ಉತ್ತಮ ಉದಾಹರಣೆ  ಒಂದು ಕಾಲದಲ್ಲಿ ಒಂದೊತ್ತಿನ ಊಟಕ್ಕೆ ಗತಿ ಇಲ್ಲದೆ ಬೀದಿ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದವರು ಇಂದು 30 ಕೋಟಿ ಮೌಲ್ಯದ ಕಂಪನಿಯ ಮಾಲೀಕ.

 

 

ರೇಣುಕಾ ಆರಾಧ್ಯ ಅವರದು ಬಡ ಕುಟುಂಬ.ಒಂದೊತ್ತಿನ ಊಟಕ್ಕೂ ಗತಿ ಇಲ್ಲದ ಕಡು ಬಡ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಅವರ ಊರಿನ ದೇವಸ್ಥಾನವೊಂದರಲ್ಲಿ ಅರ್ಚಕರಾಗಿದ್ದರು ಅಲ್ಲಿ ಬರುವ ಭಕ್ತರು ಹೆಚ್ಚು ಉಡುಗೊರೆಗಳನ್ನೇನು ಕೊಡುತ್ತಿರಲಿಲ್ಲ ಇದರಿಂದಾಗಿ ಅವರು ಬಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದರು.ಕೆಲವೊಮ್ಮೆ ರೇಣುಕ ಸಹ ತನ್ನ ತಂದೆ ಜೊತೆ ಬಿಕ್ಷೆಬೇಡಲು ಹೋಗುತ್ತಿದ್ದರು.ಭಿಕ್ಷೆ ಬೇಡುತ್ತಿದ್ದರೂ ಸಹ ರೇಣುಕ ಓದುವುದನ್ನು ಮಾತ್ರ ನಿಲ್ಲಿಸಲಿಲ್ಲ. ಅಲ್ಲಲ್ಲಿ ಸಣ್ಣ ಪುಟ್ಟ ಕೆಲಸಗಳನ್ನುಮಾಡಿ ವ್ಯಾಸಂಗವನ್ನು ಮುಂದುವರೆಸಿದ. ಆದರೆ 10ನೇ ತರಗತಿಗೆ ಬರುವಷ್ಟರಲ್ಲಿ ಅವನ ಕುಟುಂಬದ ಪರಿಸ್ಥಿತಿ ಬಹಳಷ್ಟು ಹದಗೆಟ್ಟಿತ್ತು. ಹೊಟ್ಟೆಗೆ ತಿನ್ನಲು ಒಂದೊತ್ತಿನ ಊಟವು ಇರುತ್ತಿರಲಿಲ್ಲ.ಇದರಿಂದಾಗಿ 10ನೇ ತರಗತಿಯಲ್ಲಿ ಫೇಲ್ ಆದರು. ನಂತರ ಕುಟುಂಬದ ಜವಾಬ್ದಾರಿಯ ಹೊರೆಯನ್ನು ತಾನೇ ಹೊತ್ತುಕೊಂಡನು.

 

 

ರೇಣುಕ ಆರಾಧ್ಯ ಕುಟುಂಬದ ಜವಾಬ್ದಾರಿಯಯನ್ನು ಹೊರುತ್ತಾ ಹಲವು ಪುಟ್ಟ ಸಂಸ್ಥೆಗಳಲ್ಲಿ ಕೆಲಸಮಾಡಿದ. ಅವರು ಕೊಡುತ್ತಿದ್ದ ಹಣ ಯಾವುದಕ್ಕೂ ಸಾಲದಾದಾಗ ಡ್ರೈವರ್ ಕೆಲಸ ಮಾಡಲಾರಂಭಿಸಿದ.ಇದಲ್ಲದೆ ಕೆಲವು ಸಂಸ್ಥೆಗಳಿಗೆ, ಶಾಲಾ ಕಾಲೇಜುಗಳಿಗೆ ತಿಂಗಳ ಬಾಡಿಗೆ ಆಧಾರದ ಮೇಲೆ ಬಸ್ಸುಗಳನ್ನು ಓಡಿಸತೊಡಗಿದ.ಡ್ರೈವರ್ ಕೆಲಸವನ್ನು ಮಾಡುತ್ತಿರುವಾಗಲೇ ಮದುವೆಯಾದರು. ದಂಪದಿಗಳಿಬ್ಬರೂ ಕೂಡಿ ದುಡಿದ ಹಣದಿಂದ “ಪ್ರವಾಸಿ ಕ್ಯಾಬ್ಸ್” ಎಂಬ ಹೆಸರಿನ ಸ್ವಂತ ಕಂಪನಿಯನ್ನು ಪ್ರಾರಂಭಿಸಿದನು.ಮೊದಲಿಗೆ 3 ಕಾರುಗಳು ಮಾತ್ರ ‘ಕ್ಯಾಬ್’ ಗಳಾಗಿದ್ದುವು.ಆದರೆ ಈಗ ಅವುಗಳ ಸಂಖ್ಯೆ 700 ಕ್ಕೇರಿದೆ. ಅವ್ರು ಸ್ಥಾಪಿಸಿದ ಆ ಕಂಪನಿ ಬಹಳ ಚನ್ನಾಗಿ ಅಭಿವೃದ್ಧಿಯಾಗುತ್ತದೆ. ಈಗ ಆತನ ವಾರ್ಷಿಕ ವಹಿವಾಟು ರೂ.30 ಕೋಟಿ ರೂಪಾಯಿಗಳಷ್ಟಾಗಿದೆ.

 

 

 

ಇಷ್ಟೆಲ್ಲಾ ದುಡ್ಡು ಸಂಪಾದನೆ ಮಾಡಿದ್ದರೂ ಇಂದಿಗೂ ಸಹ ಆರಾಧ್ಯ ತನ್ನ ಮೊದಲಿನ ವೃತ್ತಿಯಾದ ಡ್ರೈವರ್ ವೃತ್ತಿಯನ್ನೇ ಮುಂದುವರಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top