fbpx
ಸಮಾಚಾರ

“ನೆಹರೂ, ರಾಜೀವ್ ನಂತರ ಮೋದಿ ವರ್ಚಸ್ವಿ ನಾಯಕ” – ರಜನಿಕಾಂತ್

ಜವಹಾರ್‌ ಲಾಲ್‌ ನೆಹರು, ರಾಜೀವ್‌ ಗಾಂಧಿ ಬಳಿಕ ನರೇಂದ್ರ ಮೋದಿ ಭಾರತದ ಓರ್ವ ವರ್ಚಸ್ವಿ ನಾಯಕ ಎಂದು ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರು ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರಜನಿಕಾಂತ್‌, ಇದು ಬಿಜೆಪಿ ಜಯವಲ್ಲ. ಇದು ಮೋದಿ ಗೆಲುವು ಎಂದು ಲೋಕಸಭಾ ಚುನಾವಣೆ ಫಲಿತಾಂಶವನ್ನು ಬಣ್ಣಿಸಿದರು. ರಾಜೀವ್ ಗಾಂಧಿ, ನೆಹರೂ ರಂತಹ ನಾಯಕರ ಬಳಿಕ ಇದೀಗ ಮೋದಿ ಕೂಡ ತಮ್ಮದೇ ಆದ ವರ್ಚಸ್ಸಿನ ಮೂಲಕ ಮತದಾರರ ಮನ ಗೆದ್ದಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ಇದೇ ಮೇ 30 ರಂದು ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ನನಗೂ ಆಹ್ವಾನ ಬಂದಿದ್ದು, ನಾನೂ ಕೂಡ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಹಾಜರಾಗುತ್ತೇನೆ ಎಂದು ಹೇಳಿದ್ದಾರೆ.

ಬಿಜೆಪಿ ಪ್ರಣಾಳಿಕೆ ಮೆಚ್ಚಿರುವ ರಜನಿ
‘ನಾನು ಯಾವುದೇ ಪಕ್ಷವನ್ನು ಬೆಂಬಲಿಸುತ್ತಿಲ್ಲ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನದಿ ಜೋಡಣೆ ಬಗ್ಗೆ ಪ್ರಸ್ತಾಪಿಸಿದೆ. ಇದು ಅಗತ್ಯವಾಗಿದ್ದು, ಅಸಾಧ್ಯವಾದುದೇನು ಅಲ್ಲ, ಇದರಿಂದ ಅಂತಾರಾಜ್ಯ ನದಿ ನೀರು ಹಂಚಿಕೆ ಸಮಸ್ಯೆಗೂ ಪರಿಹಾರ ಸಿಗಲಿದೆ’ ಎಂದು ರಜನಿಕಾಂತ್ ಹೇಳಿದ್ದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top