fbpx
ಸಮಾಚಾರ

ಹಿಂದಿ ಟಿವಿ ಹಕ್ಕು ಮಾರಾಟ ವಿಷಯದಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಪೈಲ್ವಾನ್.

ಅಭಿನಯ ಚಕ್ರವರ್ತಿ ಬಾದ್ ಷಾ ಕಿಚ್ಚ ಸುದೀಪ್ ಅವರ ಮುಖ್ಯಭೂಮಿಕೆಯಲ್ಲಿ ಮೂಡಿಬರುತ್ತಿಯುವ ಬಹುನಿರೀಕ್ಷಿತ ಪೈಲ್ವಾನ್ ಚಿತ್ರದ ಮೇಲಿನ ಕುತೂಹಲ ದಿನೇ ದಿನೇ ಹೆಚ್ಚುತ್ತಲೇ ಇದೆ. ಕನ್ನಡವೂ ಸೇರಿ ಒಟ್ಟು 5 ಭಾಷೆಗಳಲ್ಲಿ ತಯಾರಾಗುತ್ತಿರುವ ಈ ಸಿನಿಮಾ ಬಗ್ಗೆ ಸ್ವತಃ ಕಿಚ್ಚನ ಅಭಿಮಾನಿಗಳು ತಲೆಕೆಡಿಸಿಕೊಂಡು ಕೂತಿದ್ದರೇ ಮಾಮೂಲಿ ಪ್ರೇಕ್ಷಕರಲ್ಲೂ ವಿಭಿನ್ನ ಕ್ರೇಜ್ ಹುಟ್ಟುಹಾಕುತ್ತಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿರುವ ಚಿತ್ರದ ಮೇಕಿಂಗ್ ಸ್ಟಿಲ್ಲುಗಳೇ ಪ್ರೇಕ್ಷಕರನ್ನು ರೋಮಾಂಚನಗೊಳಿಸುತ್ತಿದೆ.

14 ಕೋಟಿಗೆ ಹಿಂದಿ ಸ್ಯಾಟಲೈಟ್ಸ್:
ಇಂಥಾ ಪೈಲ್ವಾನ್ ಚಿತ್ರ ಬಾಲಿವುಡ್ ನೆಲದಲ್ಲಿ ದಾಖಲೆ ಬರೆದಿದೆ. ಹೌದು, ಪೈಲ್ವಾನ್ ಚಿತ್ರದ ಸ್ಯಾಟಲೈಟ್ ಹಕ್ಕಿಗೆ ಹಿಂದಿಯಲ್ಲಿ 14 ಕೋಟಿಗಳ ಭಾರಿ ಮೊತ್ತದ ಆಫರ್ ಬಂದಿದೆ.. ಆದರೆ ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆಯನ್ನು ಹೊಂದಿರುವ ನಿರ್ಮಾಪಕರು ಈ ಆಫರ್ ಅನ್ನು ಈಗಲೂ ಕ್ಯೂನಲ್ಲಿಯೇ ಇಟ್ಟಿದ್ದಾರಂತೆ.. ಹಿಂದಿಗೆ ಡಬ್ ಆದ ಕನ್ನಡ ಚಿತ್ರವೊಂದಕ್ಕೆ ಬಂದಿರುವ ಅತಿ ದೊಡ್ಡ ಸ್ಯಾಟಲೈಟ್ ಆಫರ್ ಇದಾಗಿದೆ.. ಈ ಹಿಂದೆ ಮುನಿರತ್ನ ಕುರುಕ್ಷೇತ್ರ ಚಿತ್ರಕ್ಕೆ 9.5 ಕೋಟಿ ಆಫರ್ ಬಂದಿದ್ದಾಗಿ ಸ್ವತಃ ಮುನಿರತ್ನ ಅವರೇ ಹೇಳಿಕೊಂಡಿದ್ದರು. ಉಳಿದಂತೆ ಉಳಿದ ನಾಲ್ಕು ಭಾಷೆಯ ಸ್ಯಾಟಲೈಟ್ಸ್ ಮತ್ತು ಆಡಿಯೋ ಹಕ್ಕುಗಳಿಗೂ ಭರ್ಜರಿ ಆಫರ್ ಬರುತ್ತಿವೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.

ಪೈಲ್ವಾನ್ ಬಗ್ಗೆ:
ಪೈಲ್ವಾನ್ ಚಿತ್ರದ ಬಗ್ಗೆ ಹೇಳಬೇಕೆಂದರೆ ಮುಂಬೈ ಬೆಡಗಿ ಆಕಾಂಕ್ಷ ಸಿಂಗ್ ಸುದೀಪ್’ಗೆ ನಾಯಕಿಯಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಬಾಲಿವುಡ್ ನಟ ಸುನಿಲ್ ಶೆಟ್ಟಿ, ಕರುಣ್ ದುಹಾನ್ ಸಿಂಗ್, ಸುಶಾಂತ್ ಸಿಂಗ್, ಅವಿನಾಶ್ ಸೇರಿದಂತೆ ಹಲವಾರು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. RRR ಮೋಶನ್ ಪಿಕ್ಚರ್ಸ್ ಬ್ಯಾನರ್ ನಲ್ಲಿ ತಯಾರಾಗುತ್ತಿರುವ ಪೈಲ್ವಾನ್ ಚಿತ್ರವನ್ನು ನಿರ್ದೇಶಕ ಕೃಷ್ಣಾ ಅವರ ಪತ್ನಿ ಸ್ವಪ್ನ ಕೃಷ್ಣಾ ನಿರ್ಮಾಣ ಮಾಡುತ್ತಿದ್ದು ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮತ್ತು ಕರುಣಾಕರ್ ಅವರ ಕ್ಯಾಮೆರಾ ಕೈಚಳಕ ಚಿತ್ರಕ್ಕಿರಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top