fbpx
ಸಮಾಚಾರ

ಗೆಳತಿಯ ಜೊತೆ ಸಾಂಸಾರಿಕ ಜೀವನಕ್ಕೆ ಕಾಲಿಟ್ಟ ಪುಟ್ಟಗೌರಿ ಮಹೇಶ

`ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಪುಟ್ಟಗೌರಿ ಮದುವೆ’ ಧಾರಾವಾಹಿಯಲ್ಲಿ ಮಹೇಶ್ ಪಾತ್ರವನ್ನು ಮಾಡಿದ್ದ ನಟ ರಕ್ಷ್ ತಮ್ಮ ಗೆಳತಿಯ ಜೊತೆ ಸಪ್ತಪದಿ ತುಳಿದಿದ್ದಾರೆ. ನಟ ರಕ್ಷ್ ತಮ್ಮ ಗೆಳತಿ ಅನುಷಾ ಅವರನ್ನು ಮದುವೆಯಾಗಿದ್ದಾರೆ. ದಿನಾಂಕ 26 ರಂದು ಬೆಂಗಳೂರು ಅರಮನೆ ಮೈದಾನದ ಶೀಶ್ ಮಹಲ್‍ನಲ್ಲಿ ರಕ್ಷ್ ಮತ್ತು ಅನುಷಾ ಅವರು ಕುಟುಂಬದವರ ಸಮ್ಮಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮದುವೆ ಕಾರ್ಯಕ್ರಮಕ್ಕೆ ಕಿರುತೆರೆ ನಟಿ ರಂಜನಿ ರಾಘವನ್, ಅನುಪಮಾ ಗೌಡ ಸೇರಿದಂತೆ ಅನೇಕರು ಬಂದು ನವಜೋಡಿಗೆ ಹಾರೈಸಿದ್ದಾರೆ. ಇದೀಗ ಇವರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ತಾವು ಮದುವೆಯಾಗುತ್ತಿರುವ ವಿಚಾರವನ್ನು ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ಪೋಸ್ಟ್ ಮಾಡುವ ಮೂಲಕ ರಕ್ಷ್ ಅಭಿಮಾನಿಗಳಿಗೆ ತಿಳಿಸಿದ್ದರು. “ನಾನು ಮದುವೆಯಾಗುತ್ತಿದ್ದೇವೆ. ಇದು ನನ್ನ ಪ್ರೀತಿಯ ಜನರಿಗೆ ಮದುವೆಯ ಆಮಂತ್ರಣ ಪತ್ರಿಕೆಯಾಗಿದೆ. ಇದೇ ತಿಂಗಳ ದಿನಾಂಕ 26ರಂದು ನನ್ನ ವಿವಾಹ ಇದೆ. ನೀವೆಲ್ಲರೂ ಬಂದು ಆಶೀರ್ವಾದಿಸಬೇಕು” ಎಂದು ರಕ್ಷ್ ಬರೆದುಕೊಂಡಿದ್ದರು.

ಅಂದಹಾಗೆ ಕೆಲವು ದಿನಗಳ ಹಿಂದೆ ರಕ್ಷಿತ್ ಎಂಬ ಹೆಸರನ್ನು ‘ರಕ್ಷ್’ ಎಂದು ಬದಲಾಯಿಸಿಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top