fbpx
ಸಮಾಚಾರ

ಸಮಂತಾ ಜಾಗಕ್ಕೆ ಕನ್ನಡತಿ ಶ್ರದ್ಧಾ ಶ್ರೀನಾಥ್.

ಯೂ-ಟರ್ನ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದ ಶ್ರದ್ಧಾ ಶ್ರೀನಾಥ್ ಇಲ್ಲಿಯವರೆಗೆ ನಟಿಸಿದ್ದು ಕೇವಲ ಬೆರಳೆಣಿಕೆ ಸಿನಿಮಾಗಳಾದರೂ, ಒಂದು ಸಿನಿಮಾದಿಂದ ಮತ್ತೊಂದು ಸಿನಿಮಾಕ್ಕೆ ತನ್ನ ಡಿಮ್ಯಾಂಡ್ ಮತ್ತು ಸ್ಟಾರ್ ವ್ಯಾಲ್ಯೂ ಎರಡನ್ನು ಹೆಚ್ಚಿಸಿಕೊಂಡ ಬುದ್ಧಿವಂತ ನಟಿ. ಸದ್ಯಕ್ಕೆ ಕನ್ನಡಕ್ಕಿಂತ ತಮಿಳು, ತೆಲುಗು ಸಿನಿಮಾಗಳಲ್ಲಿ ಮಿಂಚುತ್ತಿರುವ ಶ್ರದ್ಧಾ ಕುರಿತು ಈ ಮಧ್ಯೆ ತಮಿಳು ಚಿತ್ರರಂಗದಲ್ಲಿ ಹೊಸದೊಂದು ಸುದ್ದಿ ಹರಿದಾಡಿದೆ.

ಹರಿದಾಡುತ್ತಿರೋ ಸುದ್ದಿಯೊಂದನ್ನು ಆಧರಿಸಿ ಹೇಳೋದಾದರೆ ಶ್ರದ್ಧಾ ವಿಶಾಲ್ ನಟನೆಯ ಚಿತ್ರವೊಂದಕ್ಕೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ವಿಶಾಲ್ ಈ ಹಿಂದೆ ಅಭಿಮನ್ಯುಡು ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದರು. ಅಭಿಮನ್ಯುಡು ಎಂಬ ಆ ಚಿತ್ರ ಹಿಟ್ ಆಗಿತ್ತು. ಇದೀಗ ಆ ಚಿತ್ರದ ಎರಡನೇ ಭಾಗಕ್ಕೆ ತಯಾರಿ ಆರಂಭವಾಗಿದೆ. ಮೊದಲ ಭಾಗದಲ್ಲಿ ವಿಶಾಲ್ ಗೆ ಜೋಡಿಯಾಗಿ ಸಮಂತಾ ನಟಿಸಿದ್ದರು. ಆದರೆ ಈಗ ಶ್ರದ್ಧಾ ಸಮಂತಾ ಜಾಗವನ್ನು ಆವರಿಸಿಕೊಂಡಿದ್ದಾರೆ.

ಅಭಿಮನ್ಯುಡು ಸಿನಿಮಾವನ್ನು ನಿರ್ದೇಶಿಸಿದ್ದ ಪಿ.ಎಸ್. ಮಿತ್ರನ್ ಈ ಬಾರಿ ಆ್ಯಕ್ಷನ್ ಕಟ್ ಹೇಳುತ್ತಿಲ್ಲ. ಹೊಸಬರಾದ ಆನಂದ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಪಂದೆಂಕೋಡಿ 2 ಚಿತ್ರದಲ್ಲಿ ಮೀರಾ ಜಾಸ್ಮಿನ್ ಸ್ಥಾನಕ್ಕೆ ಕೀರ್ತಿ ಸುರೇಶ್‍ರನ್ನು ತೆಗೆದುಕೊಂಡಿದ್ದರು. ಈಗ ಅಭಿಮನ್ಯುಡು 2 ಸಿನಿಮಾಗೆ ಸಮಂತಾ ಸ್ಥಾನಕ್ಕೆ ಶ್ರದ್ಧಾ ಶ್ರೀನಾಥ್ ಬಂದಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾಗೆ ಸಂಭಂಧಿಸಿದ ಇನ್ನಷ್ಟು ವಿವರಗಳು ಹೊರಬೀಳಲಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top