fbpx
ಸಮಾಚಾರ

ಧರ್ಮಸ್ಥಳ ನಂತರ ಸಿದ್ದಗಂಗಾ ಮಠದಲ್ಲಿ ನೀರಿನ ಅಭಾವ: ಮಠದಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸ್ಥಗಿತ.

ಧರ್ಮಸ್ಥಳದ ನಂತರ ಇದೀಗ ತುಮಕೂರಿನ ಸಿದ್ದಗಂಗಾ ಮಠದಲ್ಲೂ ನೀರಿಗೆ ಬವಣೆ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಜೂನ್ ತಿಂಗಳಲ್ಲಿ ಮಳೆ ಬಾರದೇ ಇದ್ದರೆ ನೀರಿಗಾಗಿ ಪರದಾಟಪಡಬೇಕಾಗುತ್ತದೆ.

ಭವಿಷ್ಯದಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಸಿದ್ಧಗಂಗಾ ಮಠದ ವಸತಿ ಶಾಲೆಗೆ ವಿದ್ಯಾರ್ಥಿಗಳ ದಾಖಲಾತಿಯನ್ನು ಸ್ಥಗಿತಗೊಳಿಸಲಾಗಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಿದ್ದಗಂಗಾ ಮಠ ವಸತಿ ಶಾಲೆ ವಿದ್ಯಾರ್ಥಿಗಳ ಪ್ರವೇಶಾತಿ ನಿರಾಕರಿಸಿದೆ. ಸದ್ಯಕ್ಕಿರುವ ಮೂಲಭೂತ ಸೌಕರ್ಯದಲ್ಲಿ ಹೆತಚ್ಚಿನ ವಿದ್ಯಾರ್ಥಿಗಳು ದಾಖಲಾದರೇ, ಭಷ್ಯದಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂಬ ಕಾರಣಕ್ಕಾಗಿ ಸಿದ್ಧಗಂಗಾ ಮಠದ ವಸತಿ ಶಾಲೆಗೆ ವಿದ್ಯಾರ್ಥಿಗಳ ದಾಖಲಾತಿಯನ್ನು ಸ್ಥಗಿತಗೊಳಿಸಲಾಗಿದೆ

ಈಗಾಗಲೇ ನೀರಿನ ಸಮಸ್ಯೆ ಗಂಭೀರವಾಗಿದೆ. ಹೊಸದಾಗಿ ದಾಖಲಾಗಲು 8 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಇವರಲ್ಲಿ ಬಹುತೇಕರಿಗೆ ಪ್ರವೇಶ ದೊರೆಯಲಿದೆ. ಮತ್ತಷ್ಟು ಅರ್ಜಿಗಳು ಬಂದರೆ ಅವರನ್ನು ದಾಖಲಿಸಿಕೊಳ್ಳಬೇಕಾಗುತ್ತದೆ. ನೀರಿನ ಸಮಸ್ಯೆ ಕಾರಣಕ್ಕೆ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿ ಸಾಧ್ಯವಾಗುತ್ತಿಲ್ಲ. ಆದ್ದರಿಂದ 15 ದಿನ ಮುಂಚೆಯೇ ಅರ್ಜಿ ವಿತರಣೆ ಸ್ಥಗಿತಗೊಳಿಸಲಾಗಿದೆ’ ಎಂದು ಮಠದ ಆಡಳಿತಾಧಿಕಾರಿ ಎಸ್.ವಿಶ್ವನಾಥಯ್ಯ ತಿಳಿಸಿದ್ದಾರೆ.

ಸಿದ್ದಗಂಗಾ ಮಠ ನಗರದ ಹೊರವಲಯದಲ್ಲಿದೆ, ಮಠಕ್ಕೆ ಹೇಮಾವತಿ ನದಿ ನೀರು ನಿಯಮಿತವಾಗಿ ಸರಬರಾಜಾಗುತ್ತಿಲ್ಲ, ನಮ್ಮಲ್ಲಿ 30 ಕೊಳವೆ ಬಾವಿಗಳಿದ್ದು, 15 ಬತ್ತಿಹೋಗಿವೆ, ಹೀಗಾಗಿ ಭವಿಷ್ಯದಲ್ಲಿ ನೀರಿನ ಅಭಾವ ತಲೆದೋರುವ ಸಾಧ್ಯತೆಯಿದೆ. ಸುಮಾರು 30 ಬೋರ್‍ವೆಲ್‍ಗಳಿವೆ. ಅವುಗಳಲ್ಲಿ 5-6 ಬೋರ್ ವೆಲ್ ಕೈ ಕೊಟ್ಟಿವೆ. ಇನ್ನುಳಿದವುಗಳಲ್ಲಿ ಅಲ್ಪ ಸ್ವಲ್ಪ ನೀರು ಬರುತ್ತಿದೆ. ಈ ನೀರಿನಿಂದಲೇ ನಿತ್ಯದ ಕೆಲಸ ಸಾಗಿದೆ. ಮಹಾನಗರ ಪಾಲಿಕೆಯಿಂದ ನೀಡುತ್ತಿದ್ದ ಹೇಮಾವತಿ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಮೈದಾಳ ಕೆರೆಯಿಂದ ನೀರು ಹರಿಸುವ ಯೋಜನೆಯೂ ಸ್ಥಗಿತಗೊಂಡಿದೆ.” ಎಂದು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top