fbpx
ಸಮಾಚಾರ

‘ಅಮರ್’ ಸಿನಿಮಾದ ಒಂದು ಟಿಕೆಟ್‍ಗೆ 1 ಲಕ್ಷ ಕೊಟ್ಟ ಅಭಿಮಾನಿ.

ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅಮರ್ ಸಿನಿಮಾ ಬಿಡುಗಡೆಗೂ ಮುನ್ನವೇ ಭಾರೀ ಕುತೂಹಲ ಮೂಡಿಸಿದೆ. ಸಿನಿಮಾದ ಟೀಸರ್ ಸಿಕ್ಕಾಪಟ್ಟೆ ಸದ್ದು ಮಾಡಿದೆ. ‘ಅಮರ್’ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಮಧ್ಯೆ ಅಭಿಮಾನಿಯೊಬ್ಬರು ‘ಅಮರ’ ಸಿನಿಮಾದ ಮೊದಲ ಟಿಕೆಟ್‍ಗಾಗಿ ಬರೋಬ್ಬರಿ 1 ಲಕ್ಷ ಹಣ ನೀಡಿದ್ದಾರೆ.

ದಾವಣಗೆರೆ ಮೂಲದವರಾದ ಮಂಜುನಾಥ್ ‘ಅಮರ್’ ಸಿನಿಮಾ ಟಿಕೆಟ್‍ಗಾಗಿ 1 ಲಕ್ಷಣ ಹಣ ನೀಡಿದ್ದಾರೆ. ಇವರು ಹಿರಿಯ ನಟ ಅಂಬರೀಶ್ ಅವರ ದೊಡ್ಡ ಅಭಿಮಾನಿಯಾಗಿದ್ದಾರೆ. ಹೀಗಾಗಿ ಅವರ ಮಗ ಅಭಿಷೇಕ್ ಸಿನಿಮಾವನ್ನು ಫಸ್ಟ್ ಡೇ ಫಸ್ಟ್ ಶೋ ನೋಡಲು 1 ಲಕ್ಷ ಚೆಕ್ ನೀಡಿದ್ದಾರೆ. ‘ಅಮರ್’ ಸಿನಿಮಾ ನಿರ್ದೇಶಕರಾದ ಸಂದೇಶ್ ನಾಗರಾಜ್ ಅವರಿಗೆ ಮಂಜುನಾಥ್ ಅವರು ಚೆಕ್ ನೀಡಿದ್ದಾರೆ.

ಅಮರ್ ಚಿತ್ರ ಮೇ 31 ಕ್ಕೆ ರಿಲೀಸಾಗುತ್ತಿದ್ದು ಅಭಿಷೇಕ್ ಅಂಬರೀಶ್ ಹಾಗೂ ತಾನ್ಯಾ ಹೋಪ್ ನಟಿಸಿದ್ದಾರೆ. ನಾಗಶೇಖರ್ ನಿರ್ದೇಶನ ಮಾಡಿದ್ದು ಸಂದೇಶ್ ನಾಗರಾಜ್ ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ‘ಅಮರ್’ ಚಿತ್ರಕ್ಕೆ ಯಾವುದೇ ಕತ್ತರಿ ಹಾಕದೆ ಸೆನ್ಸಾರ್ ಮಂಡಳಿ ಯು/ಎ ಸರ್ಕಿಫಿಕೇಟ್ ನೀಡಲಾಗಿದೆ. ವಿಶೇಷ ಅಂದ್ರೆ ‘ಅಮರ್’ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಚಿತಾ ರಾಮ್ ಮತ್ತು ನಟ ನಿರೂಪ್ ಭಂಡಾರಿ ಒಂದು ಹಾಡಿನಲ್ಲಿ ಮಿಂಚಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top