fbpx
ಸಮಾಚಾರ

“ನಾನು ಈಗಲೂ ನಟ ಪ್ರಕಾಶ್ ರೈ ಅಭಿಮಾನಿ,” ಪ್ರತಾಪ್ ಸಿಂಹ.

ಲೋಕಸಭೆ ಚುನಾವಣೆಗೆ ಮುನ್ನ ಪ್ರಕಾಶ್ ರೈ ಮತ್ತು ಪ್ರತಾಪ್ ಸಿಂಹ ನಡುವಿನ ವಾಗ್ಸಮರ ಸಾಕಷ್ಟು ಚರ್ಚೆ ಮತ್ತು ವಿವಾದಗಳಿಗೆ ಕಾರಣವಾಗಿತ್ತು. ಪ್ರತಾಪ್ ಸಿಂಹ ಅವರಂತೂ ವೈಯಕ್ತಿಕ ಟೀಕೆಯ ಮಟ್ಟಕ್ಕೂ ಹೋಗಿದ್ದರು.. ಮೈಸೂರಿನಲ್ಲಿ ಸತತ ಎರಡನೇ ಬಾರಿ ಸಂಸದರಾಗಿ ಚುನಾಯಿತರಾಗಿರುವ ಅವರು, ಪ್ರಕಾಶ್ ರೈ ಬಗ್ಗೆ ಸಹಾನುಭೂತಿಯ ಮಾತುಗಳನ್ನಾಡಿದ್ದಾರೆ.

ನಾನು ಪ್ರಕಾಶ್ ರಾಜ್ ಅಭಿಮಾನಿಯಾಗಿದ್ದು, ಎಲ್ಲರಿಗೂ ಸೋಲಿನ ನೋವು ಇರುತ್ತದೆ. ಪ್ರಕಾಶ್ ರಾಜ್ ಅವರಿಗೆ ಆಗಿರುವ ಸೋಲು ರಾಜಕೀಯ ಜೀವನಕ್ಕೆ ಹಿನ್ನಡೆ ಇರಬಹುದು ಎಂದು ಸಂಸದ ಪ್ರತಾಪ್ ಸಿಂಹ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು “ನಟನೆಯ ವಿಚಾರದಲ್ಲಿ ಅವರು ದೊಡ್ಡ ಸಾಧನೆ ಮಾಡಿದ್ದಾರೆ. ಅವರ ನಟನೆಗೆ ನಾನು ಅಭಿಮಾನಿಯಾಗಿದ್ದೇನೆ. ಆದರೆ ಅವರ ಸೈದ್ಧಾಂತಿಕ ವಿಚಾರಕ್ಕೆ ನಮ್ಮ ವಿರೋಧವಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಬಗ್ಗೆ ಸಭ್ಯತೆ ಮೀರಿ ಮಾತನಾಡಿದ್ದರು. ಆಗ ನಾನು ಕಟುವಾಗಿ ಟೀಕಿಸಿದ್ದೆ. ಇದನ್ನು ಹೊರತು ಪಡಿಸಿದರೆ ನಮ್ಮ ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಆ ಅಭಿಮಾನ ನನಗಿದೆ” ಎಂದರು.

“ಎಲ್ಲರೂ ಚುನಾವಣೆಗೆ ಗೆಲ್ಲಬೇಕು ಎಂಬ ಆಸೆಯಿಂದ ನಿಲ್ಲುತ್ತಾರೆ. ಪ್ರಕಾಶ್ ರಾಜ್ ಈಗ ಅವರು ಚುನಾವಣೆ ನಿಂತು ಸೋತಿದ್ದಾರೆ. ಅವರ ಸೋಲಿನ ನೋವು ಅವರಿಗೆ ಮಾತ್ರ ಗೊತ್ತಿರುತ್ತದೆ. ಪ್ರಕಾಶ್ ರಾಜ್ ಅವರಿಗೆ ರಾಜಕೀಯ ಜೀವನಕ್ಕೆ ಹಿನ್ನಡೆ ಆಗಿರಬಹುದು. ಹೀಗಾಗಿ ಈ ಸಂದರ್ಭದಲ್ಲಿ ಅವರ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸುತ್ತೇನೆ ” ಎಂದು ಪ್ರತಾಪ್ ಸಿಂಹ ಹೇಳಿದರು.,

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top