fbpx
ಸಮಾಚಾರ

ಎರಡು ವರ್ಷಗಳ ಸುದೀರ್ಘ ಸಮಸ್ಯೆಗೆ ಭರ್ಜರಿ ಶತಕದ ಮೂಲಕ ಉತ್ತರ ಕೊಟ್ಟ ಕನ್ನಡಿಗ ರಾಹುಲ್.

ಏಕದಿನ ವಿಶ್ವಕಪ್‌ ಆರಂಭಕ್ಕಿನ್ನು ಒಂದೇ ದಿನ ಮಾತ್ರ ಬಾಕಿ ಉಳಿದಿರುವಂತೆಯೇ ದೊಡ್ಡ ಸಮಸ್ಯೆಗೆ ಭಾರತ ಉತ್ತರ ಕಂಡುಹುಡುಕಿದೆ. ಕೊನೆಗೂ ಎರಡು ವರ್ಷಗಳ ಸುದೀರ್ಘ ಸಮಸ್ಯೆಗೆ ಉತ್ತರ ದೊರಕಿದೆ. ಎರಡು ವರ್ಷಗಳಿಂದಲೂ ಭಾರಿ ಚರ್ಚೆಗೆ ಕಾರಣವಾಗುತ್ತಿದ್ದ ನಾಲ್ಕನೇ ಕ್ರಮಾಂಕಕ್ಕೆ ರಾಹುಲ್ ತಮ್ಮ ಶತಕ ಮೂಲಕ ಉತ್ತರ ನೀಡಿದ್ದಾರೆ.

ಐಸಿಸಿ 2019 ಏಕದಿನ ವಿಶ್ವಕಪ್‌ಗೂ ಮೊದಲು ಬಾಂಗ್ಲಾದೇಶ ವಿರುದ್ದ ನಡೆದ ಕೊನೆಯ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿರುವ ಕರ್ನಾಟಕದ ಕೆಎಲ್ ರಾಹುಲ್, ನಾಲ್ಕನೇ ಕ್ರಮಾಂಕದಲ್ಲಿ ಆಡಲು ತಾವೇ ಸೂಕ್ತ ಬ್ಯಾಟ್ಸ್‌ಮನ್ ಎಂಬದನ್ನು ಸಾಬೀತು ಮಾಡಿದ್ದಾರೆ.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಅಗ್ರ ಮೂರು ಕ್ರಮಾಂಕಗಳಲ್ಲಿ ಭದ್ರವಾದರೆ ನಾಲ್ಕನೇ ಕ್ರಮಾಂಕದಲ್ಲಿ ಯಾರು ಆಡಲಿದ್ದಾರೆ ಎಂಬುದು ಸಾಕಷ್ಟು ಗೊಂದಲಕ್ಕೀಡು ಮಾಡಿತ್ತು. ಇವೆಲ್ಲದಕ್ಕೂ ಉತ್ತರವಾಗಿ ಕೆಎಲ್ ರಾಹುಲ್ ಅಮೋಘ ಶತಕದ ಮೂಲಕ ಉತ್ತರ ನೀಡಿದ್ದರು. ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ, ಶಿಖರ್ ಧವನ್ ವೈಫಲ್ಯದ ನಡುವೆಯೇ ಮಾಜಿ ನಾಯಕ ಧೋನಿ ಜೊತೆಗೂಡಿ 164 ರನ್ ಜೊತೆಯಾಟ ನಿಭಾಯಿಸಿದ್ದು ಅಲ್ಲದೇ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಭರ್ಜರಿ ಶತಕ ಬಾರಿಸುವ ಮೂಲಕ ರಾಹುಲ್ ತಮ್ಮ ಪ್ರತಿಭೆ ಮೆರೆದಿದ್ದಾರೆ.

ಪಂದ್ಯದ ನಂತರ ನಾಯಕ ಕೊಹ್ಲಿ ಹೇಳಿದ ಮಾತುಗಳಲ್ಲಿ ಕೆಎಲ್ ರಾಹುಲ್ ನಾಲ್ಕನೇ ಕ್ರಮಾಂಕದಲ್ಲಿ ಆಡಿಸಲು ಇಂಗಿತ ವ್ಯಕ್ತಪಡಿಸಿದರು. “ಆತ (ಕೆಎಲ್ ರಾಹುಲ್) ಆಡಿದ ರೀತಿ ಅದ್ಭುತ. ನಾಲ್ಕನೇ ಕ್ರಮಾಂಕದ ನಮ್ಮ ಗೊಂದಲಗಳಿಗೆ ಈ ಅದ್ಭುತ ಆಟಗಾರ ಉತ್ತರ ನೀಡಿದ್ದಾನೆ.” ಎಂದು ಕೊಹ್ಲಿ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top