fbpx
ಸಮಾಚಾರ

ಅಪಘಾತಕ್ಕೀಡಾಗಿದ್ದ ಅಭಿಮಾನಿಯ ಚಿಕಿತ್ಸೆಗೆ ಸ್ಪಂದಿಸಿದ ದಾಸ ದರ್ಶನ್.

ಅಭಿಮಾನಿಗಳಿಗೆ ಚಾಲೆಂಜಿಂಗ್ ದರ್ಶನ್ ಅಂದರೆ ಪ್ರಾಣ. ಅದೇ ರೀತಿ ಅಭಿಮಾನಿಗಳ ಮೇಲೂ ದರ್ಶನ್ ಅವರಿಗೆ ಅಪಾರ ಪ್ರೀತಿ ಕಾಳಜಿಗಳಿವೆ. ಅವರದನ್ನು ತೋರಿಸಿಕೊಳ್ಳುವುದು ಕೆಲ ಸಂದರ್ಭಗಳಲ್ಲಿ ಮಾತ್ರ. ಗದರಿಕೆಯ ಮೂಲಕವೇ ಪ್ರೀತಿ ಸೂಸುವ ವಿಶಿಷ್ಟ ವ್ಯಕ್ತಿತ್ವದ ದರ್ಶನ್ ಅವರು ತಮ್ಮ ಅಭಿಮಾನಿಗಳ ಕಷ್ಟಕ್ಕೆ ಕಣ್ಣೀರಾದ, ಅದೆಷ್ಟೇ ಬ್ಯುಸಿಯಾಗಿದ್ದರೂ ಸಹಾಯಕ್ಕೆ ಧಾವಿಸಿದ ಅದೆಷ್ಟೋ ಉದಾಹರಣೆಗಳಿವೆ. ಇದೀಗ ಅಪಘಾತದಲ್ಲಿ ಗಾಯಗೊಂಡಿದ್ದ ಅಭಿಮಾನಿಯೊಬ್ಬನಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾನವೀಯತೆ ಮೆರೆದಿದ್ದಾರೆ.

ಅಪಘಾತಕ್ಕೀಡಾಗಿದ್ದ ಅಭಿಮಾನಿಗೆ ಸಹಾಯ ಮಾಡಿದ ದರ್ಶನ್:
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಉರಮಾರಕಸಲಗೆರೆ ಗ್ರಾಮದ ಅಭಿಮಾನಿ ಕಿರಣ್‍ಗೆ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಸಂದರ್ಭದಲ್ಲಿ ಸುಮಲತಾ ನ್ಯಾಮಿನೇಷನ್ ರ‍್ಯಾಲಿಗೆ ಬಂದು ವಾಪಸ್ಸಾಗುವಾಗ ಗಂಭೀರ ಗಾಯಗೊಂಡಿದ್ದರು. ಬಡ ಕುಟುಂಬವಾದ ಕಿರಣ್‍ಗೆ ಚಿಕಿತ್ಸೆ ಪಡೆಯಲು ಹಣದ ಅವಶ್ಯಕತೆ ಇತ್ತು. ಇದನ್ನು ಮನಗಂಡ ನಟ ದರ್ಶನ್ ತಮ್ಮ ಆಪ್ತ ಇಂಡುವಾಳು ಸಚ್ಚಿದಾನಂದ ಅವರ ಮೂಲಕ ಒಂದು ಲಕ್ಷ ರೂ. ಹಣವನ್ನು ಕಿರಣ್ ಕುಟುಂಬಕ್ಕೆ ತಲುಪಿಸಿದ್ದಾರೆ. ದರ್ಶನ್ ಅವರ ಈ ಸಹಾಯ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಕಿರಣ್ ಕುಟುಂಬಕ್ಕೆ 1 ಲಕ್ಷ ಆರ್ಥಿಕ ನೆರವು ನೀಡಿದ್ದಾರೆ. ದರ್ಶನ್ ಅವರ ಆಪ್ತ ಸಚ್ಚಿದಾನಂದ ಎನ್ನುವರ ಬಳಿ ನೆರವು ನೀಡಿದ್ದಾರೆ. ಬೆರೆಯವರ ಕಷ್ಟಕ್ಕೆ ಬಹುಬೇಗ ಸ್ಪಂದಿಸುವ ಡಿ ಬಾಸ್ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top