fbpx
ಸಮಾಚಾರ

30 ವರ್ಷದ ಹಿಂದೆ ಪಡೆದಿದ್ದ 200 ರೂ. ಸಾಲ ತಿರಿಸೋಕೆ ಭಾರತಕ್ಕೆ ಬಂದ ಕೀನ್ಯಾ ಸಂಸದ

ಒಬ್ಬ ವ್ಯಕ್ತಿಗೆ ಅಗತ್ಯವಿದ್ದಾಗ ನೀಡಿದ ಸಾಲವನ್ನು ಹಿಂತಿರುಗಿಸುವ ಮಂದಿ ಬಲು ಅಪರೂಪ. ಆದರೆ ಇಲ್ಲೊಬ್ಬರು 30 ವರ್ಷಗಳ ಹಿಂದೆ ಕೊಟ್ಟ 200 ರೂಪಾಯಿ ಸಾಲವನ್ನು ಹಿಂತಿರುಗಿಸಲು ಕೀನ್ಯಾದಿಂದ ವ್ಯಕ್ತಿ ಔರಂಗಾಬಾದ್ ನ ತನ್ನ ಮನೆಗೆ ಬಂದಾಗ ಕಾಶಿನಾಥ್ ಗಾವ್ಲಿ ಎಂಬ ಈ ಹಿರಿಯಜ್ಜನಿಗೆ ನಿಜಕ್ಕೂ ಅಚ್ಚರಿಯಾಯಿತು. ಅದು ಕೂಡ ಬಂದ ವ್ಯಕ್ತಿ ಕೇನ್ಯಾ ಸಂಸದನಾಗಿದ್ದ.

ಪೂರ್ವ ಆಫ್ರಿಕಾದ ಕೀನ್ಯಾ ದೇಶದ ಸಂಸದರಾಗಿರುವ ರಿಚರ್ಡ್ ತಾಂಗ್, ಅವರು ತಾನು ವಿದ್ಯಾರ್ಥಿಯಾಗಿದ್ದಾಗ ಔರಂಗಬಾದ್‍ನ ಕಿರಾಣಿ ಅಂಗಡಿಯೊಂದರಲ್ಲಿ ಮಾಡಿದ ಸಾಲವನ್ನು ತೀರಿಸಲು 30 ವರ್ಷಗಳ ನಂತರ ಮಹಾರಾಷ್ಟ್ರದ ಔರಂಗಬಾದ್‍ಗೆ ಆಗಮಿಸಿ ಹುಬ್ಬೇರಿಸುವಂತೆ ಮಾಡಿದ್ದಾರೆ.

ತಾಂಗ್ ಔರಂಗಬಾದ್‌ನ ಕಾಲೇಜೊಂದರಲ್ಲಿ 1985-89ರಲ್ಲಿ ಮ್ಯಾನೇಜ್‌ಮೆಂಟ್‌ ವ್ಯಾಸಂಗ ಮಾಡಿದ್ದರು. ಕೀನ್ಯಾಕ್ಕೆ ಮರಳಿದಾಗ ಅವರು 200 ರೂ. ಸಾಲ ಹೊಂದಿದ್ದರು. ಇತ್ತೀಚೆಗೆ ಇದ್ದಕ್ಕಿದ್ದ ಹಾಗೆ ಅವರಿಗೆ ಗೌಲಿಗೆ ನೀಡಬೇಕಾದ ಸಾಲ ನೆನಪಿಗೆ ಬಂದಿತ್ತು. ಕೂಡಲೇ ಅವರು ತಮ್ಮ ಪತ್ನಿಯನ್ನು ಕರೆದುಕೊಂಡು ಸೀದಾ ಔರಂಗಬಾದ್‌ಗೆ ಬಂದಿದ್ದಾರೆ..ಪ್ರಾರಂಭದಲ್ಲಿ ರಿಚರ್ಡ್ ಅವರನ್ನು ಪತ್ತೆ ಹಚ್ಚಲು ಕಿರಾಣಿ ಅಂಗಡಿ ಮಾಲೀಕ ಗ್ವಾಲಿಗೆ ಸಾಧ್ಯವಾಗಿಲ್ಲ. ನಂತರ ಸಂಸದ ರೀಚರ್ಡ್ ಅವರೇ ಗಾವ್ಲಿಯನ್ನು ಗುರುತಿಸಿ ಮಾತನಾಡಿಸಿದ್ದಾರೆ.

ಮೂವತ್ತು ವರ್ಷದ ಹಿಂದಿನ 200 ರೂಪಾಯಿ ಎಂದರೆ ಕಡಿಮೆ ಮೌಲ್ಯದ್ದೇನಲ್ಲ ಹಾಗಿದ್ದರೂ ಹಣದ ಮುಖ ನೋಡದೆ ವಿದೇಶಿಯನೊಬ್ಬನಿಗೆ ನೆರವು ನೀಡಿದ ಕಾಶಿನಾಥ್, ಅದನ್ನು ಇಂದಿನವರೆಗೂ ನೆನಪಿಟ್ಟುಕೊಂಡು ಮರುಪಾವತಿಸಲು ಅಷ್ಟು ದೂರದಿಂದ ಬಂದ ರಿಚರ್ಡ್ ರಂಥವರು ಮಾನವೀಯತೆ, ಪ್ರಾಮಾಣಿಕತೆಯ ಅಸ್ತಿತ್ವವನ್ನು ಸಾಬೀತುಪಡಿಸಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top