fbpx
ಸಮಾಚಾರ

“ನನ್ನ ಕೊನೆ ಉಸಿರು ಇರುವವರೆಗೂ ಹೋರಾಡುತ್ತೇನೆ” ರವೀಂದ್ರ ಜಡೇಜಾ ಭಾವನಾತ್ಮಕ ಸಂದೇಶ!

ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್‍ನಲ್ಲಿ ಸೋತ ಭಾರತ ವಿಶ್ವಕಪ್‍ನಿಂದ ಹೊರಬಿದ್ದಿದೆ. ಸೆಮಿಫೈನಲ್‍ನಲ್ಲಿ ಭಾರತದ ಪರ ಉತ್ತಮ ಬ್ಯಾಟಿಂಗ್ ಮಾಡಿದ ಆಲ್‍ರೌಂಡರ್ ರವೀಂದ್ರ ಜಡೇಜಾ ಪ್ರತಿ ಸೋಲಿನ ನಂತರ ಗೆಲ್ಲುವುದನ್ನು ನನಗೆ ಕ್ರಿಕೆಟ್ ಕಲಿಸಿಕೊಟ್ಟಿದೆ ಎಂದು ಹೇಳಿದ್ದಾರೆ.

 

 

ಸೆಮಿಫೈನಲ್ ಸೋಲಿನ ಬಳಿಕ ಟ್ವೀಟ್ ಮಾಡಿರುವ ಜಡೇಜಾ, ‘ಕೆಳಗೆ ಬಿದ್ದಾಗೆಲ್ಲ ಎದ್ದು ನಿಲ್ಲೋದನ್ನು, ಯಾವತ್ತಿಗೂ ಹೋರಾಟ ನಿಲ್ಲಿಸದಿರೋದನ್ನು ಕ್ರೀಡೆ ನನಗೆ ಕಲಿಸಿಕೊಟ್ಟಿದೆ. ನನ್ನ ಸ್ಫೂರ್ತಿಯ ಮೂಲವಾಗಿರುವ ಪ್ರತೀ ಅಭಿಮಾನಿಗಳಿಗೂ ಅವರ ಬೆಂಬಲಕ್ಕೆ ತಕ್ಕ ಧನ್ಯವಾದ ಸಲ್ಲಿಸುತ್ತೇನೆ ಎಂದು ಭಾವಿಸಲಾರೆ. ಬೆಂಬಲಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಹೀಗೆ ಸ್ಫೂರ್ತಿ ತುಂಬುತ್ತಲೇ ಇರಿ; ನನ್ನ ಕೊನೇ ಉಸಿರು ಇರೋವರೆಗೂ ನನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತಲೇ ಇರುತ್ತೇನೆ. ಲವ್ ಯೂ ಆಲ್’ ಎಂದು ಬರೆದುಕೊಂಡಿದ್ದಾರೆ.

ಅಂದಹಾಗೆ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ 240 ರನ್ ಟಾರ್ಗೆಟ್ ನೀಡಿತ್ತು. ರೋಹಿತ್ ಶರ್ಮಾ, ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕೇವಲ 1 ರನ್ ಸಿಡಿಸಿ ಔಟಾದರು. ಇನ್ನು ರಿಷಬ್ ಪಂತ್ ಅಲ್ಪ ಹೋರಾಟ ನೀಡಿದರೆ, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ ಅಬ್ಬರಿಸಿಲ್ಲ. ರವೀಂದ್ರ ಜಡೇಜಾ ಹಾಗೂ ಎಂ.ಎಸ್.ಧೋನಿ ಹೋರಾಟದಿಂದ ಭಾರತ ಭರ್ಜರಿ ಕಮ್‌ಬ್ಯಾಕ್ ಮಾಡಿತು. ಜಡೇಜಾ 77 ರನ್ ಸಿಡಿಸಿದರೆ, ಧೋನಿ 50 ರನ್ ಸಿಡಿಸಿದರು. ಭಾರತ 18 ರನ್ ವಿರೋಚಿತ ಸೋಲು ಕಂಡಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top