fbpx
ಸಮಾಚಾರ

ಕೆರೆಯಲ್ಲಿ ನಿಂತು ಟಿಕ್‍ಟಾಕ್ ಮಾಡಲು ಹೋದ ಯುವಕ ಸಾವು!

ಟಿಕ್ ಟಿಕ್ ಕ್ರೇಜ್‌ಗೆ ಮತ್ತೋರ್ವ ಯುವಕ ಬಲಿಯಾಗಿರುವ ದಾರುಣ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಜುಲೈ 9ರಂದು ಸಹೋದರ ಸಂಬಂಧಿ ಜತೆ ಕೊಳದಲ್ಲಿ ಸ್ನಾನ ಮಾಡುತ್ತಾ ಟಿಕ್ ಟಾಕ್ ವೀಡಿಯೋ ಮಾಡಲು ಹೋದ ಯುವಕ, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ನರಸಿಂಹ ಎಂಬ ಮೃತ ಯುವಕ. ನರಸಿಂಹ ತನ್ನ ಸ್ನೇಹಿತ ಪ್ರಶಾಂತ್‍ನೊಂದಿಗೆ ದುಲಪಲ್ಲಿ ಕೆರೆಯಲ್ಲಿ ಈಜಲು ಹೋಗಿದ್ದನು. ನಂತರ ಇಬ್ಬರು ಟಿಕ್‍ಟಾಕ್ ವಿಡಿಯೋಗೆ ಪೋಸ್ ನೀಡಲು ಕೆರೆಗೆ ಇಳಿದಿದ್ದರು. ಬಳಿಕ ಪ್ರಶಾಂತ್‍ನೊಂದಿಗೆ ನೀರಿನಲ್ಲಿ ನಿಂತು ನರಸಿಂಹ ಸಿನಿಮಾ ಹಾಡುಗಳಿಗೆ ಡ್ಯಾನ್ಸ್ ಮಾಡುತ್ತಿದ್ದನು. ಈ ವೇಳೆ ನೀರಿನಲ್ಲಿ ಮುಳುಗಿ ನರಸಿಂಹಲು ಎಂಬ ಯುವಕ ಪ್ರಾಣ ಕಳೆದು ಕೊಂಡಿದ್ದಾನೆಂದು ಪೊಲೀಸ್ ಇನ್ಸ್‌ಪೆಕ್ಟರ್ ಎಂ ಮಹೇಶ್ ತಿಳಿಸಿದ್ದಾರೆ.

ನರಸಿಂಹನ ಸ್ನೇಹಿತ ಪ್ರಶಾಂತ್ ಮೊಬೈಲ್ ಫೋನ್‍ನಲ್ಲಿ ಟಿಕ್‍ಟಾಕ್ ರೆಕಾರ್ಡ್ ಮಾಡುತ್ತಿದ್ದನು. ಈ ವೇಳೆ ನರಸಿಂಹ ಪ್ರಶಾಂತ್‍ನಿಂದ ದೂರ ಹೋಗಿ ವಿಡಿಯೋಗೆ ಪೋಸ್ ನೀಡಿದ್ದಾನೆ. ಆಗ ನರಸಿಂಹ ಆಕಸ್ಮಿಕವಾಗಿ ನೀರು ಆಳವಾಗಿದ್ದ ಸ್ಥಳದಲ್ಲಿ ಜಾರಿ ಬಿದ್ದಿದ್ದು, ಈಜು ಬಾರದೆ ನೀರಿನಲ್ಲಿ ಮುಳುಗಿದ್ದಾನೆ. ತಕ್ಷಣ ಪ್ರಶಾಂತ್ ರಕ್ಷಣೆಗಾಗಿ ಕೂಗಿಕೊಂಡಿದ್ದಾನೆ. ಆದರೆ ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ನರಸಿಂಹನನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದು ಗುರುವಾರ ಮೃತದೇಹವನ್ನು ಮೇಲೆತ್ತಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top