fbpx
ಸಮಾಚಾರ

“ಶಾಸಕರ ರಾಜೀನಾಮೆ ಅಂಗೀಕರಿಸುವಂತೆ ಇಲ್ಲ, ಅನರ್ಹಗೊಳಿಸುವಂತೆಯೂ ಇಲ್ಲ ” ಸುಪ್ರೀಂ ಆದೇಶ.

ಅಳಿವು-ಉಳಿವಿನ ಅಂಚಿನಲ್ಲಿ ಹೋರಾಡುತ್ತಿರುವ ಮೈತ್ರಿ ಸರ್ಕಾರ ಮತ್ತಷ್ಟು ನಾಟಕೀಯ ಬೆಳವಣಿಗೆಗಳು ನಡೆಯುವ ನಿರೀಕ್ಷೆಯಿದೆ. ಇಂದಿನಿಂದ ಮಳೆಗಾಲದ ಅಧಿವೇಶನ ನಡೆಯಲಿದ್ದು, ಈಗಾಗಲೇ ಕಾಂಗ್ರೆಸ್​- ಜೆಡಿಎಸ್​ ಅತೃಪ್ತರ ಶಾಸಕರಿಗೆ ವಿಪ್ ಜಾರಿಗೊಳಿಸಲಾಗಿದೆ.

ಅತೃಪ್ತರು ಸ್ಪೀಕರ್ ವಿರುದ್ಧ ನೀಡಿರುವ ದೂರಿನ ವಿಚಾರಣೆ ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್​ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದೆ. ಈ ಮೂಲಕ ಅತೃಪ್ತ ಶಾಸಕರ ರಾಜೀನಾಮೆಯೂ ಅಂಗೀಕರಸಿವುಂತೆಯೂ ಇಲ್ಲ, ಶಾಸಕರನ್ನು ಅನರ್ಹಗೊಳಿಸುವಂತೆಯೂ ಇಲ್ಲ ಎಂಬ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯ್​ ಒಳಗೊಂಡ ಪೀಠ ನೀಡಿದೆ. ಹಾಗಾಗಿ ಅತೃಪ್ತರ ರಾಜೀನಾಮೆ ಅಂಗೀಕರಿಸುವಂತಿಲ್ಲ. ಅನರ್ಹತೆ ಮಾಡುವಂತಿಲ್ಲ. ‘ಕೆಲ ಮಹತ್ವದ ಸಾಂವಿಧಾನಿಕ ವಿಚಾರಗಳನ್ನು ಮೊದಲು ಇತ್ಯರ್ಥ ಪಡಿಸಬೇಕಿದೆ’ ಎಂದು ಸುಪ್ರೀಂಕೋರ್ಟ್‌.

ವಿಧಾನಸಭೆ ಅಧಿವೇಶನ ಕೂಡ ನಡೆಯುತ್ತಿರುವುದರಿಂದ ಮತ್ತಷ್ಟು ಬೆಳವಣಿಗೆಗಳು ನಡೆಯಲಿವೆ. ನಿನ್ನೆ ಸ್ಪೀಕರ್ ಮುಂದೆ ಹಾಜರಾಗಿದ್ದ ಶಾಸಕರು ಮತ್ತೆ ಮುಂಬೈಗೆ ಹಾರಿದ್ದಾರೆ. ಕಲಾಪಕ್ಕೆ ಹಾಜರಾಗುವಂತೆ ವಿಪ್ ಜಾರಿ ಮಾಡಿರುವುದರಿಂದ ಗೈರು ಹಾಜರಾಗಲಿರುವ ಶಾಸಕರು ಅನರ್ಹಗೊಳ್ಳುತ್ತಾರೆಯೇ? ಈ ಬಗ್ಗೆ ದೋಸ್ತಿ ಸರ್ಕಾರ ಯಾವ ನಡೆ ಅನುಸರಿಸಲಿದೆ ಎಂಬ ಕುತೂಹಲ ಮೂಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top