fbpx
ಸಮಾಚಾರ

ರಾಜ್ಯದಲ್ಲಿ ಟಿಕ್‍ಟಾಕ್‍ಗೆ ಮತ್ತೊಂದು ಬಲಿ- ಟಿಕ್‌ಟಾಕ್‌ ವಿಡಿಯೋ ಚಿತ್ರೀಕರಿಸಲು ಹೋಗಿ ಕೃಷಿ ಹೊಂಡಕ್ಕೆ ಬಿದ್ದು ವಿದ್ಯಾರ್ಥಿನಿ ಸಾವು.

ಇತ್ತೀಚೆಗಷ್ಟೇ ಯುವಕನೊಬ್ಬ ಸ್ಟಂಟ್ ಮಾಡಲು ಹೋಗಿ ಕುತ್ತಿಗೆ ಮೂಳೆ ಮುರಿದುಕೊಂಡು ಮೃತಪಟ್ಟಿದ್ದನು. ಇದೀಗ ವಿದ್ಯಾರ್ಥಿನಿಯೊಬ್ಬಳು ಟಿಕ್‍ಟಾಕ್ ವಿಡಿಯೋ ಮಾಡಲು ಹೋಗಿ ಮೃತಪಟ್ಟಿರುವ ಘಟನೆ ಕೋಲಾರ ತಾಲೂಕಿನ ವಡಗೇರಿ ಗ್ರಾಮದಲ್ಲಿ ನಡೆದಿದೆ.

ಕೋಲಾರದ ಸರಕಾರಿ ಮಹಿಳಾ ಕಾಲೇಜಿನಲ್ಲಿ ಮಾಲಾ ಬಿಎ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿದ್ದಳು. ಕೃಷಿ ಹೊಂಡದ ಬಳಿ ಟಿಕ್‌ ಟಾಕ್ ವೀಡಿಯೋ ಚಿತ್ರೀಕರಿಸೋ ವೇಳೆ ವಿದ್ಯಾರ್ಥಿನಿ ಕೃಷಿ ಹೊಂಡಕ್ಕೆ ಬಿದ್ದುದ್ದಾಳೆ. ಈ ವೇಳೆ ಮಾಲಾ ಮೊಬೈಲ್ ಸಮೇತ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ. ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ಆಕೆಯನ್ನು ಕಾಪಾಡಲು ಸಾಧ್ಯವಾಗಿಲ್ಲ.

ಕೊನೆಗೆ ಹೊಲಕ್ಕೆ ಹೋಗಿ ತುಂಬಾ ಸಮಯವಾಗಿದೆ. ಇನ್ನೂ ಯಾಕೆ ಮಾಲಾ ಮನೆಗೆ ಬಂದಿಲ್ಲ ಎಂದು ಪೋಷಕರು ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಂದಹಾಗೆ ಟಿಕ್ ಟಾಕ್ ಗೆ ಇದು ರಾಜ್ಯದಲ್ಲಿ ಎರಡನೇ ಬಲಿಯಾಗಿದ್ದು ಇದಕ್ಕೂ ಮುನ್ನ ಜೂನ್ 19ರಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಗೋಡೆಕೆರೆ ಗ್ರಾಮದಲ್ಲಿ ವೀಡಿಯೋ ಸ್ಟಂಟ್‌ ಮಾಡಲು ಹೋಗಿದ್ದ ಕುಮಾರ್‌ ಎಂಬವರು ಕತ್ತು, ಬೆನ್ನು ಮೂಳೆ ಮುರಿದುಕೊಂಡು ಆಸ್ಪತ್ರೆ ಸೇರಿದ್ದರು. ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top