fbpx
ಸಮಾಚಾರ

ಉದ್ಘಾಟನೆಯಾದ ಹತ್ತು ತಿಂಗಳಲ್ಲೇ ಬೆಂಗಳೂರಿನ ಹೆದ್ದಾರಿಯ ಫ್ಲೈ ಓವರ್ ಕುಸಿತ.

ಕೇವಲ ಹತ್ತು ತಿಂಗಳ ಹಿಂದೆಯಷ್ಟೇ ಉದ್ಘಾಟನೆಗೊಂಡಿದ್ದ ಬೆಂಗಳೂರು-ದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿಯ ಬಾಶೆಟ್ಟಿ ಹಳ್ಳಿ ಬಳಿ ರೈಲ್ವೇ ಹಳಿಯ ಮೇಲೆ ನಿರ್ಮಾಣವಾಗಿದ್ದ ಬೃಹತ್ ಮೇಲ್ಸೇತುವೆ ಶುಕ್ರವಾರ ದಿಢೀರ್ ಕುಸಿದಿದ್ದು, ವಾಹನ ಸಂಚಾರಕ್ಕೆ ಭಾರಿ ಅಡಚಣೆ ಉಂಟಾಗಿದೆ.

ಶುಕ್ರವಾರ ಮಧ್ಯಾಹ್ನ ಮೇಲ್ಸೇತುವೆ ಕುಸಿದ ಪರಿಣಾಮ ಸೇತುವೆ ಕಂಪಿಸುವ ಅನುಭವ ವಾಹನ ಸವಾರರಿಗೆ ಆಗಿದೆ. ವಿಷಯ ತಿಳಿದ ತಕ್ಷ ಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಮುಜಾಗ್ರತ ಕ್ರಮವಾಗಿ ವಾಹನ ಸಂಚಾರವನ್ನು ಮೇಲ್ಸೇತುವೆಯ ಮತ್ತೊಂದು ಏಕ ಮುಖ ರಸ್ತೆಗೆ ಶಿಫ್ಟ್‌ ಮಾಡಿದರು.

ಸೇತುವೆ ಮೇಲೆ ವಾಹನ ಸಂಚಾರ ಬಂದ್ ಮಾಡಲಾಗಿದ್ದು ಸೇತುವೆ ಒಂದು ಬದಿಯಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೃಹತ್ ಲಾರಿಗಳಿಗೆ ಪರ್ಯಾಯ ಮಾರ್ಗವನ್ನು ಕಲ್ಪಿಸಲಾಗಿದೆ. ಕಳಪೆ ಕಾಮಗಾರಿಯೇ ಸೇತುವೆಯ ಗೋಡೆ ಕುಸಿತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಸೇತುವೆಯ ಗೋಡೆ ಕುಸಿದಿರುವ ಸಮೀಪದಲ್ಲೇ ರೈಲ್ವೆ ಹಳಿ ಸಹ ಇರುವುದು ಅಧಿಕಾರಿಗಳಲ್ಲಿ ಆತಂಕವನ್ನು ಮೂಡಿಸಿದೆ.

“ಕೇಂದ್ರ ಸರ್ಕಾರದ ರೈಲ್ವೆ ಇಲಾಖೆ ನಿರ್ಮಾಣ ಮಾಡಿರುವ ಕಾಮಗಾರಿಯಾದ್ದರಿಂದ ಇದಕ್ಕೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಆದರೂ ಸ್ಥಳೀಯ ಶಾಸಕನಾಗಿ ಈ ಸಂಬಂಧ ದುರಸ್ತಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಶನಿವಾರ ನಾನು ಸಹ ಸ್ಥಳಕ್ಕೆ ಬೇಟಿ ನೀಡಲಿದ್ದೇನೆ.” ಎಂದು ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top