fbpx
ಸಮಾಚಾರ

ಕರ್ನಾಟಕ ಬ್ಯಾಂಕ್‌ನಲ್ಲಿ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಅಹ್ವಾನ.

ಕರ್ಣಾಟಕ ಬ್ಯಾಂಕ್ ದೇಶಾದ್ಯಂತ ಇರುವ ತನ್ನ ಶಾಖೆಗೆ ಕ್ಲರ್ಕ್ ಗಳ ನೇಮಕ ಮಾಡಿಕೊಳ್ಳಲು ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಜುಲೈ 20ರೊಳಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಸುಮಾರು 60 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಜುಲೈ 10 ರಿಂದ 20ರೊಳಗೆ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕಿದೆ.

ವಿದ್ಯಾರ್ಹತೆ:
ಯುಜಿಸಿ ಮಾನ್ಯ ಮಾಡಿರುವ ವಿಶ್ವವಿದ್ಯಾಲಯದಿಂದ ಪದವಿ[ ಕನಿಷ್ಠ. 60% ಫಲಿತಾಂಶ ಪಡೆದಿರಬೇಕು]. 01-07-2019 ಅಂದರೆ ಜುಲೈ 01 ರೊಳಗಾಗಿ ಪದವಿ ಮುಗಿಸಿರಬೇಕು. ಪದವಿ ಫಲಿತಾಂಶಕ್ಕೆ ಕಾಯುತ್ತಿರುವವರು ಅರ್ಜಿ ಸಲ್ಲಿಸಲು ಅವಕಾಶ ಇಲ್ಲ.

ವಯೋಮಿತಿ:
01-07-2019 ಕೊನೆಗೊಂಡಂತೆ ಗರಿಷ್ಠ 26 ವರ್ಷದವರಿಗೆ ಮಾತ್ರ ಅವಕಾಶ. ಎಸ್ ಸಿ ಮತ್ತು ಎಸ್ ಟಿ ಕ್ಯಾಂಡಿಡೇಟ್ ಗಳಿಗೆ 5 ವರ್ಷ ವಿನಾಯಿತಿ ಇದೆ.

ಅರ್ಜಿ ಶುಲ್ಕ:
ಎಸ್ ಸಿ ಮತ್ತು ಎಸ್ ಟಿ ಕ್ಯಾಂಡಿಡೇಟ್ ಗಳಿಗೆ ಅರ್ಜಿ ಶುಲ್ಕ 500ರೂ. ಉಳಿದವರಿಗೆ 600 ರೂ.

ಲಿಖಿತ ಪರೀಕ್ಷೆ : ಆಗಸ್ಟ್‌ 8, 2019ರಂದು ಆನ್‌ಲೈನ್‌ನಲ್ಲಿ ಪರೀಕ್ಷೆ ನಡೆಯಲಿದೆ.

ವೇತನ ಶ್ರೇಣಿ:
ಆಯ್ಕೆಯಾಗುವ ಅಭ್ಯರ್ಥಿಗಳಿಗೆ 37 ಸಾವಿರ ರೂ. ವೇತನ ನಿಗದಿ ಮಾಡಲಾಗಿದೆ.

ಹೆಚ್ಚಿನ ಮಾಹಿತಿಗೆ ಬ್ಯಾಂಕ್ ವೆಬ್ ಸೈಟ್ ಗೆ ಭೇಟಿ ನೀಡಬಹುದು, ಇಲ್ಲಿ ಕ್ಲಿಕ್ ಮಾಡಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top