fbpx
ಸಮಾಚಾರ

ಕಿರುತೆರೆಗೆ ಬಂದೇ ಬಿಡ್ತು ದರ್ಶನ್ ನಟನೆಯ ‘ಯಜಮಾನ’ ಸಿನಿಮಾ

ದರ್ಶನ್ ಅಭಿನಯದ ‘ಯಜಮಾನ’ ಸಿನಿಮಾ ಚಿತ್ರಮಂದಿರದಲ್ಲಿ ಶತದಿನೋತ್ಸವವನ್ನು ಆಚರಿಸಿಕೊಂಡಿತ್ತು, ಇದೀಗ ನಿಮ್ಮ ಮನೆಯಂಗಳಕ್ಕೆ ಲಗ್ಗೆ ಇಡುತ್ತಿದ್ದು ಕಿರುತೆರೆಯಲ್ಲಿ ಪ್ರಸಾರವಾಗಲು ರೆಡಿಯಾಗಿದೆ. ಚಿತ್ರ ರಿಲೀಸ್ ಆಗಿ ಮೂರ್ನಾಲ್ಕು ತಿಂಗಳುಗಳಷ್ಟೇ ಆಗಿದ್ದು ಆಗಲೇ ಕಿರುತೆರೆಗೆ ಲಗ್ಗೆಯಿಡುತ್ತಿದೆ. ಚಿತ್ರದ ಸ್ಯಾಟಲೈಟ್ ಹಕ್ಕುಗಳನ್ನು ಖರೀಧಿಸಿದ್ದ ಸ್ಟಾರ್ ಸುವರ್ಣ ಸಿನಿಮಾವನ್ನು ಕಿರುತೆರೆಯಲ್ಲಿ ಪ್ರಸಾರ ಮಾಡಲಿದೆ. ಹಾಗಾಗಿ ಥಿಯೇಟರ್ ನಲ್ಲಿ ಚಿತ್ರವನ್ನು ನೋಡಲು ಮಿಸ್ ಮಾಡಿಕೊಂಡವರಿಗೆ ಚಿತ್ರವನ್ನು ನೋಡಲು ಒಳ್ಳೆಯ ಅವಕಾಶ ಸಿಗುತ್ತಿದೆ.

 

 

ಚಿತ್ರದ ಪ್ರೊಮೋಗಳನ್ನು ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಪ್ರಸಾರದ ಸುದ್ದಿಯನ್ನು ಸ್ಟಾರ್ ಸುವರ್ಣ ವಾಹಿನಿ ತಿಳಿಸಿದೆ. ಸದ್ಯಕ್ಕೆ ಪ್ರಸಾರ ದಿನಾಂಕವನ್ನು ಗುಪ್ತವಾಗಿ ಇಟ್ಟಿರುವ ವಾಹಿನಿ ಶೀಘ್ರದಲ್ಲಿ ಸಿನಿಮಾ ತೋರಿಸುವುದಾಗಿ ತಿಳಿಸಿದೆ.

‘ಯಜಮಾನ’ ಚಿತ್ರ ಅತಿ ಶೀಘ್ರದಲ್ಲಿ ಪ್ರಸಾರವಾಗಲಿದೆ ಎಂದು ಅತಿ ಶೀಘ್ರದಲ್ಲಿ ನಿಮ್ಮ ಮುಂದೆ ಎಂಬ ಪ್ರೋಮೋಗಳನ್ನ ಸುವರ್ಣ ಟಿವಿ ಪ್ರಸಾರ ಮಾಡುತ್ತಿದೆ. ಇನ್ನೂ ದಿನಾಂಕ ಹಾಗೂ ಸಮಯವನ್ನು ಚಾನೆಲ್ ಬಹಿರಂಗಗೊಳಿಸಿಲ್ಲ. ಆದ್ರೆ, ಮೂಲಗಳ ಪ್ರಕಾರ ಆಗಸ್ಟ್ ಮೊದಲ ವಾರದಲ್ಲಿ ಅಂದರೆ ವರಮಹಾಲಕ್ಷ್ಮಿ ಹಬ್ಬಕ್ಕೆ ಪ್ರಸಾರವಾಗಲಿದೆಯಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top