fbpx
ಸಮಾಚಾರ

ಸದನದಲ್ಲಿ ಅರವಿಂದ್ ಲಿಂಬಾವಳಿಯಿಂದ ಅಂತರ ಕಾಯ್ದುಕೊಂಡ ಬಿಜೆಪಿ ಶಾಸಕರು.

ಅರವಿಂದ ಲಿಂಬಾವಳಿ ಅವರು ಸದನದಲ್ಲಿ ಒಂಟಿಯಾಗಿ ಕುಳಿತು ಗಮನ ಸೆಳೆದಿದ್ದಾರೆ. ಯಾವೊಬ್ಬ ಬಿಜೆಪಿ ಶಾಸಕರು ಕೂಡ ಅರವಿಂದ ಲಿಂಬಾವಳಿ ಅವರ ಅಕ್ಕ ಪಕ್ಕದಲ್ಲಿ ಕೂರಲು ಹಿಂದೇಟು ಹಾಕಿದ್ದಾರೆ.

ಕಣ್ಣೀರು ಹಾಕಿದ ಲಿಂಬಾವಳಿ:
ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸದನದಲ್ಲಿ ಕಣ್ಣೀರು ಹಾಕಿದ್ದಾರೆ. ತಮ್ಮ ಮನದಲ್ಲಿನ ನೋವನ್ನು ತೋಡಿಕೊಂಡಿದ್ದಾರೆ. ನನ್ನ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದ್ದು ಈ ಬಗ್ಗೆ ತನಿಖೆಯಾಗಬೇಕು ಎನ್ನುತ್ತಲೇ ನನ್ನ ಮಾನ ಹರಾಜು ಮಾಡಲು ಕೆಲವು ಷಡ್ಯಂತ್ರ ನಡೆಸಿದ್ದಾರೆ. ಇಂದು ನನ್ನ ಬಗ್ಗೆ ಆಗಿದೆ. ನಾಳೆ ನಿಮ್ಮ ಬಗ್ಗೆಯೂ ಈ ರೀತಿಯ ಅಪಪ್ರಚಾರ ಆಗುತ್ತದೆ ಎಂದು ಭಾವುಕರಾಗಿ ಕಣ್ಣೀರು ಹಾಕಿದರು..

ಅವಮಾನವನ್ನು ಅನುಭವಿಸಿದವನಿಗೆ ಅದರ ನಿಜವಾದ ತಿವಿತದ ನೋವು ಗೊತ್ತಾಗುತ್ತದೆ. ನನ್ನ ಬಗ್ಗೆ ಯಾರು ಅಪಪ್ರಚಾರ ಮಾಡಿದರೋ ಗೊತ್ತಿಲ್ಲ. ಈ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯ ಮಾಡಿದರು. ಮಧ್ಯ ಪ್ರವೇಶ ಮಾಡಿದ ಸ್ಪೀಕರ್ ರಮೇಶ್ ಕುಮಾರ್, ನೀವು ಬಹಳ ಕಾಲದಿಂದ ಸದನದಲ್ಲಿ ಇದ್ದವರು.. ದಯವಿಟ್ಟು ಕುಳಿತುಕೊಳ್ಳಿ ಎಂದು ಮನವಿ ಮಾಡಿಕೊಂಡರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top