fbpx
ಸಮಾಚಾರ

ಭಾರತದ ಫೀಲ್ಡಿಂಗ್ ಕೋಚ್ ಆಗಲಿದ್ದಾರೆ ಸಾರ್ವಕಾಲಿಕ ದಿಗ್ಗಜ ಜಾಂಟಿ ರೋಡ್ಸ್?

ಭಾರತೀಯ ಕ್ರಿಕೆಟ್‌ ಮಂಡಳಿ (ಬಿಸಿಸಿಐ) ತಂಡದ ಪ್ರಧಾನ ಕೋಚ್‌ ಸೇರಿದಂತೆ ಫೀಲ್ಡಿಂಗ್‌, ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಕೋಚ್‌ನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಫೀಲ್ಡಿಂಗ್‌ ಕೋಚ್‌ ಹುದ್ದೆಗೆ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ, ವಿಶ್ವ ಕಂಡ ಶ್ರೇಷ್ಠ ಕ್ಷೇತ್ರರಕ್ಷಕರಲ್ಲಿ ಒಬ್ಬರಾದ ಜಾಂಟಿ ರೋಡ್ಸ್‌ ಅರ್ಜಿ ಸಲ್ಲಿಸಿದ್ದಾರೆ.

ಸ್ವತಃ ಜಾಂಟಿ ರೋಡ್ಸ್‌ ಈ ವಿಷಯವನ್ನು ಖಚಿತ ಪಡಿಸಿದ್ದು, ‘ಟೀಂ ಇಂಡಿಯಾದ ಫೀಲ್ಡಿಂಗ್‌ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿದ್ದೇನೆ. ನಾನು ಹಾಗೂ ನನ್ನ ಪತ್ನಿ ಭಾರತವನ್ನು ಪ್ರೀತಿಸುತ್ತೇವೆ. ಈ ದೇಶ ನನಗೆ ಸಾಕಷ್ಟು ನೀಡಿದೆ. 2 ಮಕ್ಕಳಿಗೂ ನನ್ನ ಹೆಂಡತಿ ಇಲ್ಲೇ ಜನ್ಮ ನೀಡಿದ್ದಾಳೆ’ ಎಂದು ಹೇಳಿದ್ದಾರೆ.

ಸಾರ್ವಕಾಲಿಕ ಶ್ರೇಷ್ಠ ಫೀಲ್ಡರ್ ಎಂದೆನಿಸಿಕೊಂಡಿರುವ ಜಾಂಟಿ ರೋಡ್ಸ್ ಅವರನ್ನು ಫೀಲ್ಡಿಂಗ್ ಕೌಶಲ್ಯದಲ್ಲಿ ಮೀರಿಸುವವರು ಇನ್ನು ಯಾರೂ ಬಂದಿಲ್ಲ. 1992ರ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಇನ್ಜಾಮಾಮ್ ಉಲ್ ಹಕ್ ಅವರನ್ನು ಔಟ್ ಮಾಡಿರುವ ರೀತಿಯೂ ಈಗಲೂ ಅಚ್ಚಳಿಯದೇ ಉಳಿದಿದೆ. ಅಲ್ಲಿಂದ ಬಳಿಕ ವಿಶ್ವ ಫೀಲ್ಡಿಂಗ್ ಗುಣಮಟ್ಟವನ್ನೇ ಬದಲಾಯಿಸಿದ್ದರು.

ಕ್ಷೇತ್ರ ರಕ್ಷಣೆ ಮೂಲಕವೂ ಪಂದ್ಯ ಗೆಲ್ಲಬಹುದು ಎಂಬುದನ್ನು ಕ್ರಿಕೆಟ್‌ ಜಗತ್ತಿಗೆ ತೋರಿಸಿಕೊಟ್ಟ ಮೊತ್ತ ಮೊದಲ ಆಟಗಾರ ರೋಡ್ಸ್‌. ಒಂದು ಕಾಲದಲ್ಲಿ ಫೀಲ್ಡಿಂಗ್‌ ಮಾಡಿದರೆ ರೋಡ್ಸ್‌ ರೀತಿಯಲ್ಲಿ ಮಾಡಬೇಕು ಎಂದೇ ಹೇಳಲಾಗುತ್ತಿತ್ತು ಅಷ್ಟರ ಮಟ್ಟಿಗೆ ಕ್ಷೇತ್ರ ರಕ್ಷಣೆಯ ವಿಚಾರದಲ್ಲಿ ರೋಡ್ಸ್‌ ತಮ್ಮ ಛಾಪನ್ನು ಮೂಡಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top