fbpx
ಸಮಾಚಾರ

ಜುಲೈ 28- ನಾಳೆಯ ಪಂಚಾಂಗ ಮತ್ತು ದಿನಭವಿಷ್ಯ.

ಸ್ಥಳ- ಬೆಂಗಳೂರು.
ಭಾನುವಾರ, ಜುಲೈ 28 2019
ಸೂರ್ಯೋದಯ : 6:04 am
ಸೂರ್ಯಾಸ್ತ: 6:47 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು :ಆಷಾಡ
ಪಕ್ಷ : ಕೃಷ್ಣಪಕ್ಷ
ತಿಥಿ :ಏಕಾದಶೀ 18:49
ನಕ್ಷತ್ರ:ರೋಹಿಣಿ 19:18
ಯೋಗ :ವೃದ್ಹಿ 06:29
ಕರಣ:ಬಾವ 07:23 ಬಾಲವ 18:49

ಅಭಿಜಿತ್ ಮುಹುರ್ತ:12:00 pm – 12:51 pm
ಅಮೃತಕಾಲ : 4:08 pm – 5:43 pm

ರಾಹುಕಾಲ- 5:09 pm – 6:44 pm
ಯಮಗಂಡ ಕಾಲ-12:26 pm – 2:00 pm
ಗುಳಿಕ ಕಾಲ- 3:35 pm – 5:09 pm

 

 

ಮೇಷ (Mesha)

ಮಕ್ಕಳು ನಿಮ್ಮ ಸಹಾಯಕ್ಕೆ ಧಾವಿಸುವ ತವಕ ತೋರುತ್ತಾರೆ. ಅವರನ್ನು ಅಧೀರರನ್ನಾಗಿಸಬೇಡಿ. ಒಳಿತಿಗೆ ದಾರಿ.

ವೃಷಭ (Vrushabh)


ಆರೋಗ್ಯದ ಬಗೆಗೂ ಯೋಚಿಸುವ ವಿಚಾರ ಅಲಕ್ಷ್ಯ್ಕೆ ಒಳಗಾಗದಿರಲಿ. ಇದರಿಂದ ಹೆಚ್ಚಿನ ದಕ್ಷತೆಗೆ ದಾರಿ ಇದೆ.

ಮಿಥುನ (Mithuna)


ಹೊಸ ವಿಚಾರವೊಂದನ್ನು ರ್ಚಚಿಸಲು ಅವಸರ ಮಾಡದಿರಿ. ಕೈಯಲ್ಲಿರುವ ಕೆಲಸ ಮುಗಿಸಲು ಯತ್ನಿಸಿ. ಸಿದ್ಧಿ ಇದೆ.

ಕರ್ಕ (Karka)


ಖರ್ಚುವೆಚ್ಚಗಳನ್ನು ನಿಭಾಯಿಸುವುದು ಕಷ್ಟದ ವಿಷಯವೇ ಆಗಿರುತ್ತದೆ. ಕೆಲವು ವಿಚಾರಗಳಿಗೆ ಕತ್ತರಿ ಇಡಿ.

ಸಿಂಹ (Simha)


ಬಹಳ ದಿನಗಳಿಂದಲೂ ಉದ್ಭವಿಸುತ್ತಿರುವ ಸಂಕಟಗಳನ್ನು ಆಲಿಸಲು ಹಿರಿಯ ವ್ಯಕ್ತಿಗಳೊಬ್ಬರು ಸಿಗಲಿದ್ದಾರೆ.

ಕನ್ಯಾರಾಶಿ (Kanya)


ದೂರದ ಪ್ರವಾಸಗಳನ್ನು ಮಾಡುವುದು ಸೂಕ್ತವಾಗಿದೆಯಾದರೂ ಆರೋಗ್ಯದ ಬಗೆಗೆ ಎಚ್ಚರ ಇದ್ದೇ ಇರಲಿ.

ತುಲಾ (Tula)


ನಿಮ್ಮ ಕೆಲಸದ ಸ್ಥಳದಲ್ಲಿ ಅನಪೇಕ್ಷಿತವಾದ ಕಲಹವೊಂದು ಉದ್ಭವಿಸಬಹುದಾಗಿದೆ. ಆದಷ್ಟು ಜಾಗ್ರತರಾಗಿರಿ.

ವೃಶ್ಚಿಕ (Vrushchika)


ಬಹಳ ದಿನಗಳಿಂದಲೂ ಕಾಲು ಕೆದರಿ ಜಗಳ ಮಾಡುವ ಯೋಚನೆ ಹಾಕಿರುವ ಜನರನ್ನು ಮೌನದಿಂದ ಸಾಗಹಾಕಿ.

ಧನು ರಾಶಿ (Dhanu)


ಅಜ್ಞಾನವನ್ನು ನೀಗಿಸುವ ನಿಮ್ಮ ಕ್ರಿಯಾಶೀಲತೆಯು ನಿಮ್ಮ ಬೆಳವಣಿಗೆಗೆ ಸಾರ್ಥಕ ಕಾಣಿಕೆಯೊಂದನ್ನು ನೀಡಲಿದೆ.

ಮಕರ (Makara)


ಮಾತುಗಳು ನಿಮ್ಮ ಜೀವಂತಿಕೆಯೇ ಆಗಿದೆಯಾದರೂ, ಕೃತಘ್ನರು ಮಾತಿನಿಂದ ನಿಮಗೆ ಪೇಚು ತಂದಾರು.

ಕುಂಭರಾಶಿ (Kumbha)


ಹೊಸ ರೀತಿಯ ಬದಲಾವಣೆಗಳಿಗಾಗಿ ಈಗ ಯೋಚಿಸಬಹುದಾಗಿದೆ. ನಿಮ್ಮ ಚಾತುರ್ಯಕ್ಕೆ ಗೆಲುವು ಲಭ್ಯ.

ಮೀನರಾಶಿ (Meena)


ವಸತಿಯ ಸ್ಥಳದ ಬದಲಾವಣೆಗಾಗಿ ಬೆಳವಣಿಗೆಯೊಂದು ತೀರ ಅನಿರೀಕ್ಷಿತವಾಗಿ ಎದುರಾಗಬಹುದಾಗಿದೆ. .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top