fbpx
ಸಮಾಚಾರ

120 ಎಸೆತಗಳಲ್ಲಿ 276 ರನ್: ಯೂನಿವರ್ಸಲ್​ ಬಾಸ್ ಘರ್ಜನೆಗೆ ದಂಗಾದ ಎದುರಾಳಿ: ವಿಡಿಯೋ

ಕೆನಡಾದಲ್ಲಿ ನಡೆಯುತ್ತಿರುವ ಗ್ಲೋಬಾಲ್ ಟಿ-20 ಲೀಗ್​ನಲ್ಲಿ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ಆರ್ಭಟಿಸುತ್ತಿದ್ದಾರೆ. ವ್ಯಾಂಕೋವರ್ ನೈಟ್ಸ್ ತಂಡದ ನಾಯಕನಾಗಿರುವ ಗೇಲ್ ನಿನ್ನೆ ನಡೆದ ಮೊಂಟ್ರೆಲ್ ಟೈಗರ್ಸ್​ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ. ತಮ್ಮಲ್ಲಿ ಇನ್ನು ಕ್ರಿಕೆಟ್ ಬಾಕಿ ಉಳಿದಿದೆ ಎಂಬುದನ್ನು ಸಾಬೀತು ಮಾಡಿರುವ ವೆಸ್ಟ್‌ಇಂಡೀಸ್‌ನ ದೈತ್ಯ ಕ್ರಿಸ್ ಗೇಲ್ ಕೇವಲ 54 ಎಸೆತಗಳಲ್ಲಿ 122 ರನ್‌ಗಳನ್ನು ಚಚ್ಚುವ ಮೂಲಕ ಗಮನ ಸೆಳೆದಿದ್ದಾರೆ.

 

 

ಗೇಲ್​ ಅಬ್ಬರದ ನೆರವಿನಿಂದ ನೈಟ್ಸ್ ತಂಡ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 276 ರನ್​ ಕಲೆಹಾಕಿತು. ಈ ಸ್ಕೋರ್​ ಟಿ20 ಕ್ರಿಕೆಟ್​ ಇತಿಹಾಸದಲ್ಲಿ ಎರಡನೇ ಅತ್ಯಧಿಕ ಗುರಿಯಾಗಿದೆ. ಇದು ಗೇಲ್ ಬ್ಯಾಟ್‌ನಿಂದ ಸಿಡಿದ 22ನೇ ಟಿ20 ಶತಕವಾಗಿದೆ. ಗೇಲ್​ ಅವರ ಇನ್ನಿಂಗ್ಸ್ ನಲ್ಲಿ 7 ಬೌಂಡರಿ ಹಾಗೂ 12 ಸಿಕ್ಸರ್ ಒಳಗೊಂಡಿತ್ತು.

ಆದರೆ, ಈ ಗುರಿಯನ್ನು ಬೆನ್ನಟ್ಟಲು ಮೊಂಟ್ರೆಲ್ ಟೈಗರ್ಸ್​ ತಂಡಕ್ಕೆ ಭಾಗ್ಯವೇ ಸಿಗಲಿಲ್ಲ. ವ್ಯಾಂಕೋವರ್ ನೈಟ್ಸ್ ತಂಡದ ಇನ್ನಿಂಗ್ಸ್​ ಕೊನೆಯಾದಾಗ ಜೋರಾಗಿ ಮಳೆ ಸುರಿದಿದ್ದು, ವರುಣನ ಕಾಟದಿಂದ ಕೊನೆಯದಾಗಿ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top