fbpx
ಸಮಾಚಾರ

ಉತ್ತರ ಪ್ರದೇಶದಲ್ಲೂ KGF ಹವಾ- ಅಲ್ಲಿನ ಟ್ರಾಫಿಕ್ ಪೊಲೀಸರು ಬಿಟ್ಟ ಅಸ್ತ್ರ ನೋಡಿದ್ರಾ?

2018ರಲ್ಲಿ ಬಿಡುಗಡೆಯಾಗಿದ್ದ ಕೆಜಿಎಫ್ ಚಾಪ್ಟರ್ 1 ಚಿತ್ರ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ಮಾಡಿತ್ತು. ಕೆಜಿಎಫ್-2 ಚಿತ್ರತಂಡ ಸರಳವಾಗಿ ಮುಹೂರ್ತ ಮಾಡಿಕೊಂಡು ಚಿತ್ರೀಕರಣವನ್ನು ಆರಂಭಿಸಿದೆ. ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಕೆಜಿಎಫ್-2 ಚಿತ್ರದ ಶೂಟಿಂಗ್ ಸೆಟ್ ಫೋಟೋಗಳು ಸದ್ದು ಮಾಡಿದ್ದವು. ಕೆಜಿಎಫ್ ನಿರೀಕ್ಷೆಗಳ ಪರ್ವತವನ್ನೇ ಹುಟ್ಟಿಸಿದ್ದು, ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇದೀಗ ಕೆಜಿಎಫ್ 2ಗಾಗಿ ದೇಶವೇ ಎದುರು ನೋಡುತ್ತಿದೆ.

 

 

ಕೆಜಿಎಫ್ ಚಾಪ್ಟರ್-2. ತಾರಾಗಣ ಹಾಗೂ ಮೇಕಿಂಗ್ ನಿಂದಾಗಿ ಚಿತ್ರ ಗಮನ ಸೆಳೆದಿದ್ದು ಜೊತೆಗೆ ಅಧೀರ ಸಂಜಯ್ ದತ್ ಎಂಟ್ರಿ ಚಿತ್ರಕ್ಕೆ ಮತ್ತಷ್ಟು ಆನೆ ಬಲ ತಂದಿದೆ. ಸದ್ಯ ಇದೀಗ ಕೆಜಿಎಫ್ ಕ್ರೇಜ್ ಉತ್ತರ ಪ್ರದೇಶ ಟ್ರಾಫಿಕ್​​ಗೂ ತಗುಲಿದೇ.

ಹೌದು ಉತ್ತರ ಪ್ರದೇಶ ಪೊಲೀಸರು ಕೆಜಿಎಫ್ ಅನ್ನೋ ಟೈಟಲ್‍ನ್ನೇ ತಮ್ಮ ಜಾಗೃತಿ ಸಂದೇಶಕ್ಕೆ ಕ್ರಿಯೇಟಿವ್ ಆಗಿ ಬಳಸಿಕೊಂಡಿದ್ದಾರೆ.
K ಅಂದ್ರೆ Know the rules (ನಿಯಮ ತಿಳಿದುಕೊಳ್ಳಿ) ಎಂದು
G ಅಂದ್ರೆ, Grip well (ಹಿಡಿತವಿರಲಿ) ಎಂದು ಹಾಗೂ
F ಅಂದ್ರೆ, Focus (ಕಣ್ಣು, ಮನಸ್ಸು ಒಂದೇ ಕಡೆ ಇರಲಿ) ಎಂಬರ್ಥ ಬರುವಂತೆ ಬೋರ್ಡ್ ಮಾಡಿ ಜಾಗೃತಿ ಮೂಡಿಸುತ್ತಿದ್ದಾರೆ.

ಸದ್ಯ ಕೆಜಿಎಫ್ ಟೈಟಲ್ ಕ್ರೇಜ್ ಟ್ರಾಫಿಕ್​​ಗೂ ಬಂದಿದ್ದು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top