fbpx
ಸಮಾಚಾರ

ಆಗಸ್ಟ್ 03- ನಾಳೆಯ ಪಂಚಾಂಗ ಮತ್ತು ದಿನಭವಿಷ್ಯ.

ಸ್ಥಳ- ಬೆಂಗಳೂರು.
ಶನಿವಾರ, ಆಗಸ್ಟ್ 03 2019
ಸೂರ್ಯೋದಯ : 6:05 am
ಸೂರ್ಯಾಸ್ತ: 6:46 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು :ಶ್ರಾವಣ
ಪಕ್ಷ : ಶುಕ್ಲಪಕ್ಷ
ತಿಥಿ :ತೃತೀಯಾ 22:05
ನಕ್ಷತ್ರ:ಮಖ 06:44
ಯೋಗ : ವರಿಘ 07:16
ಕರಣ: ತೈತುಲ 11:49 ಗರಿಜ 22:05

ಅಭಿಜಿತ್ ಮುಹುರ್ತ: 12:00 pm – 12:50 pm
ಅಮೃತಕಾಲ :10:24 pm – 11:50 pm

ರಾಹುಕಾಲ- 9:17 am – 10:51 am
ಯಮಗಂಡ ಕಾಲ- 1:59 pm – 3:34 pm
ಗುಳಿಕ ಕಾಲ- 6:09 am – 7:43 am

 

 

ಮೇಷ (Mesha)

 

ಇಂದಿನ ದಿನದಲ್ಲಿ ನಿಮಗೆ ನಿಮ್ಮ ಸ್ನೇಹಿತರು ಸಹಾಯ ಹಸ್ತ ನೀಡುವರು. ಹಾಗಾಗಿ ಈ ದಿನ ಗೆಳೆಯರೇ ನಿಜವಾದ ಆಸ್ತಿ ಎನಿಸಿಕೊಳ್ಳುವರು. ಉದಾಸೀನ ಪ್ರವೃತ್ತಿಯನ್ನು ಬಿಟ್ಟರೆ ಒಳ್ಳೆಯದು.

ವೃಷಭ (Vrushabh)


ಧನ ಸಂಪಾದನೆಗಾಗಿ ವಿವಿಧ ಬಗೆಯ ಕಾರ್ಯಕ್ರಮಗಳನ್ನು ಇಂದು ರೂಪಿಸಿಕೊಳ್ಳುವಿರಿ ಮತ್ತು ಆ ನಿಟ್ಟಿನಲ್ಲಿ ಯಶಸ್ಸು ಹೊಂದುವಿರಿ. ಗುರು ಹಿರಿಯರ ಸಂಗಡ ಉತ್ತಮ ಸೌಹಾರ್ದತೆಯನ್ನು ಇಟ್ಟುಕೊಳ್ಳಿರಿ.

ಮಿಥುನ (Mithuna)


ಆಸ್ತಿ ಖರೀದಿಯ ಬಗ್ಗೆ ಮರು ಪರೀಶಿಲನೆ ನಡೆಸುವುದರಿಂದ ಅನುಕೂಲವಾಗುವುದು. ನಿಮ್ಮ ಮನದ ಇಷ್ಟದಂತೆ ಕಾರ್ಯಗಳು ಕೈಗೂಡುವುದರಿಂದ ಈ ದಿನ ಮಾನಸಿಕ ನೆಮ್ಮದಿಯನ್ನು ಹೊಂದುವಿರಿ.

ಕರ್ಕ (Karka)


ಹಿಂದಿನಿಂದಲೂ ಬಂದ ಕುಟುಂಬದ ಸಂಪ್ರದಾಯ ವಿಧಾನಗಳನ್ನು ನಾಜೂಕಾಗಿ ನಿರ್ವಹಿಸಿರಿ. ಒತ್ತಡಗಳಿಗೆ ಅಲ್ಪ ವಿರಾಮ ದೊರೆಯಲಿದೆ. ನಿಮಗೆ ಬರಬೇಕಾಗಿದ್ದ ಹಣವು ಈದಿನ ನಿಮ್ಮ ಕೈ ಸೇರುವುದು.

ಸಿಂಹ (Simha)


ಅನೇಕ ದಿನಗಳ ಸ್ನೇಹವನ್ನು ಒಂದೇ ಒಂದು ಮಾತು ಹಾಳು ಮಾಡುವ ಸಾಧ್ಯತೆ ಉಂಟಾಗುವುದು. ಹಾಗಾಗಿ ಮಾತನಾಡುವಾಗ ಆದಷ್ಟು ಎಚ್ಚರವಹಿಸಿರಿ. ಹಣಕಾಸಿನ ಪರಿಸ್ಥಿತಿಯಲ್ಲಿ ಚೇತರಿಕೆ ಕಂಡು ಬರುವುದು.

ಕನ್ಯಾರಾಶಿ (Kanya)


ಕುಟುಂಬದಲ್ಲಿನ ಸೌಹಾರ್ದತೆಯನ್ನು ಉಳಿಸಿಕೊಳ್ಳಿರಿ. ಸಿಟ್ಟಿನಿಂದ ನಿಮ್ಮ ಸುತ್ತಮುತ್ತಲಿನ ಪರಿಸರ ಹಾನಿಯಾಗುವುದು ಮತ್ತು ಇದರಿಂದ ಪತಿ-ಪತ್ನಿಯರಲ್ಲಿ ಕೆಲ ಸಮಯ ವಿರಸ ಉಂಟಾಗುವುದು.

ತುಲಾ (Tula)


ನಿಮ್ಮ ಜವಾಬ್ದಾರಿಯ ಪಾಲು ದೊಡ್ಡದೇ ಇದೆ. ನಿಮ್ಮ ಮನಸ್ಸಿಗೆ ಒಪ್ಪದ ಕೆಲಸಗಳ ಬಗ್ಗೆ ಚಿಂತಿಸುವುದು ತರವಲ್ಲ ಮತ್ತು ನಿಮಗೆ ಸಂಬಂಧಪಡದ ವಿಷಯಗಳಲ್ಲಿ ಮೂಗು ತೂರಿಸದಿರಿ.

ವೃಶ್ಚಿಕ (Vrushchika)


ನಿಮ್ಮ ಪ್ರತಿಯೊಂದು ಚಲನ-ವಲನವನ್ನು ಕುತೂಹಲದಿಂದ ವೀಕ್ಷಿಸುವ ಜನರಿರುತ್ತಾರೆ. ಹಾಗಾಗಿ ಮಹತ್ತರ ಕೆಲಸಗಳ ಸಾಧ್ಯಸಾಧ್ಯತೆಯ ಬಗ್ಗೆ ಇತರರೊಡನೆ ಚರ್ಚಿಸದಿರಿ.

ಧನು ರಾಶಿ (Dhanu)


ಸ್ನೇಹಿತರು ಸಹಾಯ ಕೋರಿ ಬರಲಿದ್ದು, ಅವರಿಗೆ ಸಾಧ್ಯವಾದಷ್ಟು ಮಟ್ಟಿಗೆ ನೆರವು ನೀಡಿರಿ. ನಿರುದ್ಯೋಗಿ ಮಗನಿಗೆ ಸಾಧಾರಣ ವೇತನದ ನೌಕರಿಯು ದೊರೆಯುವ ಸಾಧ್ಯತೆ ಇರುತ್ತದೆ. ಮಿತಿಮೀರುತ್ತಿರುವ ಖರ್ಚುಗಳಿಗೆ ಕಡಿವಾಣ ಹಾಕಿರಿ.

ಮಕರ (Makara)


ಸ್ವತಂತ್ರವಾಗಿ ಬಂಡವಾಳ ಹೂಡಿ ವ್ಯವಹಾರ ಆರಂಭಿಸಲು ಇಂದು ಸಕಾಲವಲ್ಲ. ಮತ್ತೊಬ್ಬರ ಪಾಲುಗಾರಿಕೆಯೊಂದಿಗೆ ಆರಂಭಿಸುವುದು ಉತ್ತಮ. ಎಲ್ಲರ ಸಲಹೆಗಳನ್ನು ಸ್ವೀಕರಿಸಿ ಆದರೆ ನಿಮ್ಮ ಯೋಜನೆಯಂತೆ ಕಾರ್ಯರೂಪಕ್ಕೆ ತನ್ನಿರಿ.

ಕುಂಭರಾಶಿ (Kumbha)


ಅನೇಕ ಸಮಸ್ಯೆಗಳಿದ ಗೊಂದಲದ ಗೂಡಾಗಿದ್ದ ಕುಟುಂಬದಲ್ಲಿ ನೆಮ್ಮದಿ ಕಾಣಲು ಆರಂಭವಾಗಿದೆ. ಆರ್ಥಿಕ ಸಮಸ್ಯೆಗಳು ಆದಾಯದಿಂದ ಸುಧಾರಿಸಲಿವೆ. ಮಾವನ ಮನೆಯಿಂದ ಬರಲಿರುವ ಎಲ್ಲ ರೀತಿಯ ಸಹಾಯಗಳನ್ನು ಸ್ವೀಕರಿಸಿರಿ.

ಮೀನರಾಶಿ (Meena)


ಹೊಸ ಕೆಲಸಗಳನ್ನು ಹುಡುಕುವವರಿಗೆ ಹೇರಳ ಅವಕಾಶಗಳು ದೊರೆಯಲಿವೆ. ಸದ್ಯಕ್ಕೆ ವ್ಯಯ ಸ್ಥಾನದಲ್ಲಿದ್ದು, ಶನಿಯು ವಕ್ರವಾಗಿ ಲಾಭ ಸ್ಥಾನದಲ್ಲಿ ಸಂಚರಿಸುವ ಮೂಲಕ ಶುಭ ಫಲವನ್ನುಂಟು ಮಾಡುವರು. ಹಣಕಾಸಿನ ಸ್ಥಿತಿಯೂ ಉತ್ತಮಗೊಳ್ಳುವುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top