fbpx
ಸಮಾಚಾರ

ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ ಲೀಲಾವತಿ, ವಿನೋದ್ ರಾಜ್- ಜಾನುವಾರುಗಳಿಗೆ ಮೇವು ರವಾನೆ.

ವಿಪರೀತ ಮಳೆ ಮತ್ತು ಭೀಕರ ಭೂಕುಸಿತದಿಂದಾಗಿ ಕಣ್ಣ ಎದುರೇ ಕುಸಿದು ಹೋದ ಉತ್ತರಕ ಕರ್ನಾಟಕ ಜನರ ಕಷ್ಟದ ಬಗ್ಗೆ ಎಂಥವರಿಗಾದರೂ ಕರುಣೆ ಹುಟ್ಟುತ್ತದೆ. ಇಡೀ ಕರ್ನಾಟಕದ ಎಲ್ಲ ಕಡೆಗಳಿಂದಲೂ ಉತ್ತರಕ ಕರ್ನಾಟಕ ಸಂತ್ರಸ್ತರಿಗೆ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಪ್ರಕೃತಿ ಸೃಷ್ಟಿಸಿದ ಈ ದಾರುಣಕ್ಕೆ ಕನ್ನಡ ಚಿತ್ರರಂಗ ಕೂಡ ಸ್ಪಂದಿಸಿದ್ದು ಅನೇಕ ಕಲಾವಿದರು ಆಹಾರ,ಹಣ ಮತ್ತು ಅಗತ್ಯ ವಸ್ತುಗಳನ್ನು ನೀಡಿ ಒಂದೊಂದು ರೀತಿಯಲ್ಲಿ ನೆರೆ ಸಂತ್ರಸ್ತರಿಗೆ ನೆರವಾಗುತ್ತಿದ್ದಾರೆ.

ನೆರೆ ಸಂತ್ರಸ್ತರ ನೋವಿಗೆ ಸ್ಯಾಂಡಲ್‍ವುಡ್ ಹಿರಿಯ ನಟಿ ಡಾ. ಲೀಲಾವತಿ ಹಾಗೂ ಪುತ್ರ ವಿನೋದ್ ರಾಜ್ ಸ್ಪಂದಿಸಿದ್ದಾರೆ. ತಾವೇ ಸ್ವತಃ ಮುಸುಕಿನ ಜೋಳದ ಮೇವನ್ನು ಖರೀದಿಸಿ ಪ್ರವಾಹ ಪೀಡಿತ ಪ್ರದೇಶದ ಜಾನುವಾರುಗಳಿಗೆ ನೀಡಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಲೀಲಾವತಿ ನೆಲೆಸಿರುವ ಸೋಲದೇವನಹಳ್ಳಿ ಗ್ರಾಮದ ಬಳಿ ರೈತರಿಂದ ಮೇವು ಖರೀದಿ ಮಾಡಿದ್ದಾರೆ. ಅಲ್ಲದೆ ಪ್ರವಾಹ ಪೀಡಿತ ಜನರ ಸಹಾಯ ಮಾಡಲು ಲೀಲಾವತಿ ಅವರ ಕುಟುಂಬ ಮುಂದಾಗಿದೆ.

ನೆರೆ ಪ್ರದೇಶಗಳಲ್ಲಿ ಪ್ರಾಣಿಗಳ ಮೂಕರೋಧನೆ ನೋಡಲಾರದೇ, ಜಾನುವಾರುಗಳಿಗೆ ಒಂದು ಲೋಡ್ ಮುಸುಕಿನ ಜೋಳದ ಮೇವು ಸ್ವತಃ ಲಾರಿಗೆ ತುಂಬವ ಮೂಲಕ ನೆರವಾಗಿದ್ದಾರೆ. ಅಮ್ಮನಿಗೆ ಮಗ ವಿನೋದ್ ರಾಜ್ ಸಾಥ್ ನೀಡಿದ್ದಾರೆ. ಸ್ವತಹ ಲೀಲಾವತಿ ಕುಟುಂಬ ಜೋಳವನ್ನು ಕೊಂಡು ಕಟಾವು ಮಾಡಿಸಿ ರವಾನಿಸಿದ್ದಾರೆ. ಸ್ವತಹ ಪ್ರಾಣಿ ಪ್ರೀಯರಾಗಿರುವ ಹಿರಿಯ ನಟಿ ಡಾ.ಲೀಲಾವತಿರ ನೆರವು ಇತರಿರಿಗೂ ಮಾದರಿಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top