fbpx
ಸಮಾಚಾರ

ಐಎಎಸ್ ಅಧಿಕಾರಿ ಮಣಿವಣ್ಣನ್ ಶಿಫಾರಸ್ಸು ಮಾಡಿದ್ದ ಬಾಲಕನಿಗೆ ಸಿಕ್ತು ಪ್ರಶಸ್ತಿ.

ಕನ್ನಡದ ಖಡಕ್ ಐಎಎಸ್ ಅಧಿಕಾರಿ ಕ್ಯಾಪ್ಟನ್ ಮಣಿವಣ್ಣನ್ ಅವರು ಶಿಫಾರಸ್ಸು ಮಾಡಿದ್ದ ಬಾಲಕನಿಗೆ ಸಾಹಸ ಸೇವಾ ಪ್ರಶಸ್ತಿ ದೊರೆತಿದೆ.. ಇತ್ತೀಚಿಗೆ ಕೃಷ್ಣಾ ನದಿ ಪ್ರವಾಹದ ವೇಳೆ ಅಂಬುಲೆನ್ಸ್‌ಗೆ ದಾರಿ ತೋರಿಸಿ ಸಾಹಸ ಮೆರೆದ ಬಾಲಕನಿಗೆ ರಾಯಚೂರು ಜಿಲ್ಲಾಡಳಿತ ಸಾಹಸ ಸೇವಾ ಪ್ರಶಸ್ತಿ ನೀಡಿ ಗೌರವಿಸಿದೆ. ರಾಯಚೂರಿನ ಪೊಲೀಸ್ ಕವಾಯತ್ ಮೈದಾನದಲ್ಲಿ ಗುರುವಾರ ನಡೆದ ಧ್ವಜಾರೋಹಣದ ವೇಳೆ ಬಾಲಕ ವೆಂಕಟೇಶ್ ನಿಗೆ ಜಿಲ್ಲಾಧಿಕಾರಿ ಶರತ್.ಬಿ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಿದ್ದಾರೆ.

 

 

ಕೃಷ್ಣಾ ನದಿಯಿಂದ ಉಂಟಾದ ಪ್ರವಾಹಕ್ಕೆ ಹಿರೇರಾಯಕುಂಪಿ- ಗೂಗಲ್ ಸೇತುವೆ ಮುಳುಗಡೆ ಆಗಿತ್ತು. ಈ ವೇಳೆ ಮುಳುಗಡೆಯಾದ ಸೇತುವೆಯಲ್ಲಿ ಮೃತದೇಹ ಹೊತ್ತು ಬರುತ್ತಿದ್ದ ಅಂಬುಲೆನ್ಸ್‌ ಚಾಲಕನಿಗೆ ರಸ್ತೆ ಎಲ್ಲಿದೆ ಎಂಬುದು ಗೊತ್ತಾಗುತ್ತಿರಲಿಲ್ಲ. ಆಗ ಬಾಲಕ ವೆಂಕಟೇಶ್ ನೀರಿನಲ್ಲಿ ನಡೆದು ದಾರಿ ತೋರಿಸುವ ಮೂಲಕ ಸಹಾಯ ಮಾಡಿದ್ದನು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

 

 


ಈ ವಿಡಿಯೋವನ್ನು ಗಮನಿಸಿದ್ದ ಐಎಎಸ್ ಅಧಿಕಾರಿ ಮಣಿವಣ್ಣನ್ ಈ ಬಾಲಕನಿಗೆ ಸಾಹಸ ಸೇವಾ ಪ್ರಶಸ್ತಿ ನೀಡಬೇಕು ಎಂದು ಶಿಫಾರಸ್ಸು ಮಾಡಿದ್ದರು.. ಈಗ ಆ ಬಾಲಕನಿಗೆ ರಾಯಚೂರು ಜಿಲ್ಲಾಡಳಿತ ಸಾಹಸ ಸೇವಾ ಪ್ರಶಸ್ತಿ ನೀಡಿ ಗೌರವಿಸಿದೆ. ಚಿಕ್ಕವಯಸ್ಸಿನ ವೆಂಕಟೇಶ್ ಸಾಹಸಕ್ಕೆ ಜಿಲ್ಲಾಡಳಿತ ಮೆಚ್ಚುಗೆ ವ್ಯಕ್ತಪಡಿಸಿದೆ. ರಾಯಚೂರಿನ ಪೊಲೀಸ್ ಕವಾಯತ್ ಮೈದಾನದಲ್ಲಿ ನೆನ್ನೆ ನಡೆದ ಸ್ವಾತಂತ್ರೋತ್ಸವದ ಧ್ವಜಾರೋಹಣದ ವೇಳೆ ಜಿಲ್ಲಾಡಳಿತ ಬಾಲಕನಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಿದೆ.

ತಾವು ಶಿಫಾರಸ್ಸು ಮಾಡಿದ್ದ ಬಾಲಕನಿಗೆ ಪ್ರಶಸ್ತಿ ಸಿಕ್ಕಿರುವುದಕ್ಕೆ ಮಣಿವಣ್ಣನ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top