fbpx
ಸಮಾಚಾರ

2 ವಾರಗಳ ಸೇನಾ ಸೇವೆ ಪೂರೈಸಿ ಮನೆಗೆ ಮರಳಿದ ಕರ್ನಲ್ ಧೋನಿ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ಎರಡು ವಾರದ ಸೇನಾ ಕರ್ತವ್ಯವನ್ನು ಪೂರೈಸಿದ್ದು, ಶನಿವಾರ ಲೇಹ್ ವಿಮಾನ ನಿಲ್ದಾಣದಿಂದ ಹೊರಟು ದೆಹಲಿಗೆ ಆಗಮಿಸಿದ್ದಾರೆ.

ಟೆರಿಟೊರಿಯಲ್ ಆರ್ಮಿ 106 ಬೆಟಾಲಿಯನ್ ಫೋರ್ಸ್‌ನಲ್ಲಿ ಸೈನಿಕರ ಜೊತೆ ಧೋನಿ ಜಮ್ಮು ಕಾಶ್ಮೀರದ ಕಣಿವೆ ರಾಜ್ಯದಲ್ಲಿ ಸೇವೆ ಸಲ್ಲಿಸಿದ್ದರು. ಸೇವೆ ಮುಗಿಸಿ ತವರಿಗೆ ವಾಪಾಸ್ಸಾಗುವು ವೇಳೆ ಧೋನಿ, ಲೇಹ್ ವಿಮಾನ ನಿಲ್ದಾಣದಲ್ಲಿ ಕ್ಯಾಮರ ಕಣ್ಣಿಗೆ ಕಾಣಿಸಿಕೊಂಡರು.

ದೆಹಲಿಗೆ ತೆರಳುವ ಸಂದರ್ಭದಲ್ಲಿ ಸೇನೆಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆ ಹೊಂದಿರುವ ಧೋನಿ, ಲಡಾಖ್‌ನ ಲೇಹ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಧೋನಿ ಭಾರತೀಯ ಸೇನೆಯ 106 ಟಿಎ ಪ್ಯಾರಾ ಬೆಟಾಲಿಯನ್‌ ನಲ್ಲಿ 15 ದಿನಗಳ ಕಾಲ ಸೇವೆ ಸಲ್ಲಿಸಿದರು. ಜುಲೈ 30ರಿಂದ ಸೇನಾ ಬೆಟಾಲಿಯನ್‌ ತರಬೇತಿ ಪಡೆಯುವ ಮೂಲಕ ಅಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಸೇನೆಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆ ಹೊಂದಿರುವ ಧೋನಿ, ಯೋಧರೊಂದಿಗೆ ಕೆಲಕಾಲ ಕರ್ತವ್ಯ ನಿರ್ವಹಿಸಲು ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳದೆ ಭಾರತೀಯ ತಂಡದಿಂದ ದೂರ ಉಳಿದಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top