fbpx
ಸಮಾಚಾರ

ಮುನಿರತ್ನ ಕುರುಕ್ಷೇತ್ರ ಪೂರ್ತಿ ಸಿನಿಮಾವನ್ನು ಆನ್‍‍ಲೈನ್‍‍ನಲ್ಲಿ ಲೀಕ್ ಮಾಡಿದ ತಮಿಳ್ ರಾಕರ್ಸ್.

‘ಮುನಿರತ್ನ ಕುರುಕ್ಷೇತ್ರ’ ಸಿನಿಮಾ ಕಳೆದ ಶುಕ್ರವಾರ ವಿಶ್ವದ್ಯಾಂತ 500 ಕ್ಕಿಂತ ಹೆಚ್ಚಿನ ಸ್ಕ್ರೀನ್ ಗಳಲ್ಲಿ ಅದ್ಧೂರಿಯಾಗಿ ತೆರೆಕಂಡು ಸಿನಿಮಾ ಜಗತ್ತಿನಲ್ಲೇ ಹೊಸ ದಾಖಲೆಯನ್ನು ಸೃಷ್ಟಿಸುವುದರತ್ತ ಧಾಪುಗಾಲು ಹಾಕುತ್ತಿದೆ. ಮುನಿರತ್ನ ಕುರುಕ್ಷೇತ್ರ ಸಿನಿಮಾದ ಆರ್ಭಟಕ್ಕೆ ಪ್ರೇಕ್ಷಕರಿಂದ ಅಭೂತಪೂರ್ವ ರೆಸ್ಪಾನ್ಸ್ ಸಿಕ್ಕಿದ್ದು. ಎಲ್ಲೆಲ್ಲೂ ಕುರುಕ್ಷೇತ್ರ ಬಗ್ಗೆಯೇ ಮಾತಾಗುತ್ತಿದೆ.

ಹೀಗಿರುವಾಗಲೇ ತಮಿಳಿನ ಕುಖ್ಯಾತ ಜಾಲತಾಣಗಳಾದ tamilmv, tamilrockers ಮುಂತಾದ ವೆಬ್ ಸೈಟ್ ಗಳಲ್ಲಿ ಮುನಿರತ್ನ ಕುರುಕ್ಷೇತ್ರ ಚಿತ್ರ ಲೀಕ್ ಆಗಿದೆ.. ತಮಿಳಿನಲ್ಲಿ ತೆರೆಕಂಡ ಒಂದೇ ದಿನದಲ್ಲಿ ಕುರುಕ್ಷೇತ್ರ ಸಿನಿಮಾ ಪೂರ್ತಿ ಆಲ್ ಲೈನ್ ನಲ್ಲಿ ಲೀಕ್ ಆಗಿದೆ. ಪೈರಸಿ ಕಾಟದಿಂದ ಚಿತ್ರದ ಗಳಿಕೆಗೂ ಪೆಟ್ಟು ಬಿದ್ದಿದ್ದು, ಈ ವೆಬ್​ ಸೈಟ್​ ವಿರುದ್ಧ ಕ್ರಮ ಜರುಗಿಸಬೇಕೆಂಬ ಕೂಗು ಎಲ್ಲೆಡೆ ಕೇಳಿ ಬರ್ತಾ ಇದೆ.

ಈ ಹಿಂದೆ ದಿ ವಿಲನ್, ಯಜಮಾನ, ನಟಸಾರ್ವಭೌಮ ಮೊದಲಾದ ಸಿನಿಮಾಗಳನ್ನು ಮೊದಲ ದಿನವೇ ಲೀಕ್ ಮಾಡಿದ್ದ ತಮಿಳು ರಾಕರ್ಸ್ ಈಗ ಬಿಗ್ ಬಜೆಟ್​ ಮೂವಿ ಕುರುಕ್ಷೇತ್ರಕ್ಕೂ ದೊಡ್ಡ ತಲೆನೋವಾಗಿದೆ. ಸಿನಿಮಾ ಲೀಕ್ ಆಗುವುದನ್ನು ತಪ್ಪಿಸಲು ಎಷ್ಟೇ ಕ್ರಮ ಕೈಗೊಂಡರೂ ‘ಪೈರಸಿ’ ಎಂಬ ಭೂತದ ಕಾಟಕ್ಕೆ ಕನ್ನಡ ಚಿತ್ರರಂಗದ ದೊಡ್ಡ ದೊಡ್ಡ ಸಿನಿಮಾಗಳೂ ಒಳಗಾಗಿರುವುದು ವಿಷಾದನೀಯವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top