fbpx
ಸಮಾಚಾರ

ನಾನು ಯುದ್ಧದಾಹಿಯಲ್ಲ, ಆದರೆ ದೇಶ ಭಕ್ತೆ – ಪಾಕ್ ಮಹಿಳೆಯ ಚಳಿ ಬಿಡಿಸಿದ ಪ್ರಿಯಾಂಕಾ.

ಪಾಕಿಸ್ತಾನದ ಮೇಲೆ ಭಾರತ ನ್ಯೂಕ್ಲಿಯರ್ ಬಾಂಬ್ ಪ್ರಯೋಗಿಸುವ ರೀತಿ ನೀವು ಪ್ರಚೋದಿಸುತ್ತಿದ್ದೀರಿ ಅಂತಾ ಆರೋಪಿಸಿದ ಪಾಕ್ ಮಹಿಳೆಗೆ ಪ್ರಿಯಾಂಕಾ ಚೋಪ್ರಾ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ.

ಕಳೆದ ವಾರ ಲಾಸ್ ಎಂಜಲೀಸ್‍ನಲ್ಲಿ ನಡೆದ ಬ್ಯೂಟಿಕಾನ್ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಕೂತು ಪ್ರಿಯಾಂಕಾ ಜನರೊಂದಿಗೆ ಸಂವಾದ ಮಾಡುತ್ತಿದ್ದ ವೇಳೆ ಪಾಕಿಸ್ತಾನಿ ಮಹಿಳೆಯೊಬ್ಬರು ಅವರ ವಿರುದ್ಧ ವಾಗ್ದಾಳಿ ನಡೆಸಿದರು. ವಿಶ್ವಸಂಸ್ಥೆಯ ಸದ್ಭಾವನಾ ರಾಯಭಾರಿಯಾಗಿ ನೀವು ಭಾರತ ಪಾಕ್ ಮೇಲೆ ದಾಳಿ ನಡೆಸಿದಾಗ ‘ಜೈ ಹಿಂದ್ ಇಂಡಿಯನ್ ಆಮ್ರ್ಡ್ ಫೋರ್ಸ್’ ಎಂದು ಟ್ವೀಟ್ ಮಾಡಿದ್ದೀರಿ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ರಾಷ್ಟ್ರಗಳ ನಡುವೆ ಶಾಂತಿಯನ್ನು ಕಾಪಾಡುವ ಬದಲು ಪಾಕಿಸ್ತಾನದ ಮೇಲೆ ನಡೆದ ಪರಮಾಣು ಯುದ್ಧಕ್ಕೆ ಪೋತ್ಸಾಹ ನೀಡಿದ್ದೀರಿ. ನಮ್ಮಂತ ಲಕ್ಷಾಂತರ ಮಂದಿ ಪಾಕಿಸ್ತಾನಿಯರು ನಿಮ್ಮ ಕೆಲಸಕ್ಕೆ ಪ್ರೋತ್ಸಾಹಿಸಿದ್ದರು. ಆದರೆ ನೀವು ಹೀಗೆ ಮಾಡಿದ್ದು ಸರಿಯೇ ಎಂದು ಪ್ರಶ್ನಿಸಿ ಹರಿಹಾಯ್ದರು.

ಯುವತಿಯ ಈ ಎಲ್ಲಾ ಆರೋಪ ಭರಿತ ಪ್ರಶ್ನೆಗಳನ್ನು ಶಾಂತವಾಗಿ ಕೇಳಿಸಿಕೊಂಡ ಪ್ರಿಯಾಂಕ ಛೋಪ್ರಾ ಬಳಿಕ ಪಾಕ್ ಯುವತಿಗೆ ಹೀಗೆ ಉತ್ತರಿಸುತ್ತಾರೆ, ‘ನಾನೋರ್ವ ಭಾರತೀಯಳಾಗಿದ್ದೇನೆ, ನನಗೆ ಪಾಕಿಸ್ಥಾನದಲ್ಲೂ ಬಹಳಷ್ಟು ಜನ ಸ್ನೇಹಿತರಿದ್ದಾರೆ. ನಾನೇನೂ ಯುದ್ಧದ ಕುರಿತಾಗಿ ಆಸೆ ಇಟ್ಟುಕೊಂಡವಳಲ್ಲ.. ಆದರೆ ನಾನು ದೇಶಭಕ್ತೆ ಎನ್ನುವುದು ಮಾತ್ರ ನಿಜ. ಆದರೆ ನನ್ನ ಈ ಟ್ವೀಟ್ ನಿಂದ ನನ್ನನ್ನು ಪ್ರೀತಿಸುವವರಿಗೆ ನೋವಾಗಿದ್ದರೆ ಕ್ಷಮಿಸಿ ಬಿಡಿ..’ ಎಂದು ಶಾಂತವಾಗಿಯೇ ಉತ್ತರಿಸುತ್ತಾರೆ.

‘ನಾವೆಲ್ಲರೂ ನಮ್ಮ ಜೀವನದಲ್ಲಿ ಒಂದು ಮಧ್ಯಮ ಮಾರ್ಗವನ್ನು ಅನುಸರಿಸಬೇಕಾಗುತ್ತದೆ. ಅದನ್ನೂ ನೀವೂ ಒಪ್ಪುತ್ತೀರಿ ಎಂದು ನಾನು ಭಾವಿಸುತ್ತೇನೆ. ಅದಕ್ಕೆ ನೀವಿಲ್ಲಿ ನನ್ನನ್ನು ಪ್ರಶ್ನಿಸಿದ ರೀತಿಯೇ ಸಾಕ್ಷಿ. ನಾವೆಲ್ಲಾ ಇಲ್ಲಿ ಜೀವಿಸುತ್ತಿರುವುದು ಪ್ರೀತಿಯಿಂದಲೇ, ದ್ವೇಷಕ್ಕೆ ನಮ್ಮಲ್ಲಿ ಜಾಗವಿಲ್ಲ’ ಎಂದು ಬಳಿಕ ಪ್ರಿಯಾಂಕ ಅವರು ಆ ಯುವತಿಯನ್ನು ಸಮಾಧಾನಪಡಿಸಿದ್ದಾರೆ. ನಾವೆಲ್ಲರು ಇಲ್ಲಿ ಪ್ರೀತಿ ಸಂದೇಶ ಸಾರಲು ಸೇರಿದ್ದೇವೆ ಎಂದು ಪಾಕ್ ಮಹಿಳೆಗೆ ತಿರುಗೇಟು ನೀಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top