fbpx
ಸಮಾಚಾರ

ವಿರಾಟ್ ಕೊಹ್ಲಿ ಬಳಿ ಕ್ಷಮೆಯಾಚಿಸಿದ ಡೇಲ್ ಸ್ಟೇನ್: ಅಷ್ಟಕ್ಕೂ ದಕ್ಷಿಣ ಆಫ್ರಿಕಾ ವೇಗಿ ಮಾಡಿದ ತಪ್ಪೇನು?

ದಕ್ಷಿಣ ಆಫ್ರಿಕಾ ಆಟಗಾರ ಡೇಲ್​ ಸ್ಟೇನ್​ ಅವರು ವಿರಾಟ್​ ಬಳಿ ಕ್ಷಮೇ ಕೇಳಿದ್ದಾರೆ!. ಅಷ್ಟಕ್ಕೂ ವಿರಾಟ್​ ಬಳಿ ಡೇಲ್​ ಸ್ಟೇನ್​ ಕ್ಷಮೆ ಕೇಳಿದ್ದು ಏಕೆ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಬಹುದು. ಇದಕ್ಕೆ ಕಾರಣ ಭಾರತ-ದ.ಆಫ್ರಿಕಾ ನಡುವೆ ನಡೆಯಲಿರುವ ಟಿ-20 ಸರಣಿಗೆ ಸ್ಟೇನ್​ ಆಯ್ಕೆಗೊಳ್ಳದೆ ಇರುವುದು. ಈ ವಿಚಾರಕ್ಕೆ ಸ್ಟೇನ್​ ತುಂಬಾನೇ ಸಿಟ್ಟಾಗಿದ್ದಾರೆ.

ಮುಂಬರುವ ಭಾರತ ಪ್ರವಾಸದಲ್ಲಿನ ಟೆಸ್ಟ್‌ ಮತ್ತು ಟಿ20 ಸರಣಿಗಳ ಸಲುವಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ ಮಂಗಳವಾರ ತನ್ನ ತಂಡಗಳನ್ನು ಪ್ರಕಟಿಸಿತ್ತು. ಈ ಸಂದರ್ಭದಲ್ಲಿ ಟಿ20 ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದ ಅನುಭವಿ ವೇಗಿ ಡೇಲ್‌ ಸ್ಟೇನ್‌, ಟ್ವಿಟರ್‌ ಮೂಲಕ ತಮ್ಮ ಬೇಸರ ಹೊರಹಾಕಿದ್ದಾರೆ.

 

 

ಟಿ20 ಸರಣಿಗೆ ಆಯ್ಕೆಯಾಗದೆ ಇರುವುದಕ್ಕೆ ಡೇಲ್ ಸ್ಟೇನ್ ತುಂಬಾನೇ ಸಿಟ್ಟಾಗಿದ್ದಾರೆ. ನಾನು ಟೀಂ ಇಂಡಿಯಾ ವಿರುದ್ಧದ ಸರಣಿಯಲ್ಲಿ ಆಡುತ್ತೇನೆ ಎಂದು ಭಾವಿಸಿದ್ದೆ ಆದರೆ ಅದು ಸಾಧ್ಯವಾಗದೆ ಹೋಗಿದೆ. ಹೀಗಾಗಿ ವಿರಾಟ್ ಕೊಹ್ಲಿ ಬಳಿ ಕ್ಷಮೆ ಕೇಳಿದ್ದಾರೆ.

ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ವಿರಾಟ್‌ ಕೊಹ್ಲಿಗೆ ಅಚ್ಚುಮೆಚ್ಚಿನವರಾಗಿದ್ದ ಡೇಲ್‌ ಸ್ಟೇನ್‌ ಬುಧವಾರ ಟ್ವೀಟ್‌ ಮೂಲಕ ತಮ್ಮ ಅನುಪಸ್ಥಿತಿಯನ್ನು ತಿಳಿಸಿದ್ದಾರೆ. ಭಾರತಕ್ಕೆ ಬರಲಾಗದಿರುವುದಕ್ಕೆ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಹಾಗೂ ಭಾರತೀಯ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top