fbpx
ಸಮಾಚಾರ

ಕರ್ನಾಟಕ ಪ್ರವಾಹಕ್ಕೆ ಮರುಗಿದ ತಮಿಳು ನಟರು- ಸಂತ್ರಸ್ತರ ಪರಿಹಾರಕ್ಕಾಗಿ ಉದಾರ ದೇಣಿಗೆ ಕೊಟ್ಟ ಸೂರ್ಯ ಮತ್ತು ಕಾರ್ತಿ

ವಿಪರೀತ ಮಳೆ ಮತ್ತು ಭೀಕರ ಭೂಕುಸಿತದಿಂದಾಗಿ ಕಣ್ಣ ಎದುರೇ ಕುಸಿದು ಹೋದ ಉತ್ತರಕ ಕರ್ನಾಟಕ ಜನರ ಕಷ್ಟದ ಬಗ್ಗೆ ಎಂಥವರಿಗಾದರೂ ಕರುಣೆ ಹುಟ್ಟುತ್ತದೆ. ಇಡೀ ಕರ್ನಾಟಕದ ಎಲ್ಲ ಕಡೆಗಳಿಂದಲೂ ಉತ್ತರಕ ಕರ್ನಾಟಕ ಸಂತ್ರಸ್ತರಿಗೆ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಪ್ರಕೃತಿ ಸೃಷ್ಟಿಸಿದ ಈ ದಾರುಣಕ್ಕೆ ಕನ್ನಡ ಚಿತ್ರರಂಗ ಕೂಡ ಸ್ಪಂದಿಸಿದ್ದು ಅನೇಕ ಕಲಾವಿದರು ಆಹಾರ,ಹಣ ಮತ್ತು ಅಗತ್ಯ ವಸ್ತುಗಳನ್ನು ನೀಡಿ ಒಂದೊಂದು ರೀತಿಯಲ್ಲಿ ನೆರೆ ಸಂತ್ರಸ್ತರಿಗೆ ನೆರವಾಗುತ್ತಿದ್ದಾರೆ.

 

 

ಈಗ ಉತ್ತರ ಕರ್ನಾಟಕ ಸ್ಥಿತಿ ಕಂಡು ತಮಿಳು ಚಿತ್ರರಂಗದ ಸ್ಟಾರ್ ಸಹೋದರರು ಮರುಗಿದ್ದಾರೆ. ತಮಿಳು ನಟ ಸೂರ್ಯ ಮತ್ತು ಅವರ ತಮ್ಮ ಕಾರ್ತಿ ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸಿದ್ದಾರೆ. ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗಾಗಿ ಸೂರ್ಯ ಮತ್ತು ಕಾರ್ತಿ ಅವರು 10 ಲಕ್ಷ ರೂ ನೆರವು ನೀಡಿದ್ದಾರೆ.. ತಮಿಳು ಚಲನಚಿತ್ರಗಳ ವಿಮರ್ಶಕ ರಮೇಶ್​ ಬಾಲಾ ಈ ಕುರಿತಂತೆ ತಮ್ಮ ಟ್ವಿಟರ್​ ಖಾತೆಯಲ್ಲಿ ಇದನ್ನು ಖಚಿತಪಡಿಸಿದ್ದಾರೆ. ನಟರಾದ ಸೂರ್ಯ ಹಾಗೂ ಕಾರ್ತಿಕ್​ ಅವರ ಕಾರ್ಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ಪರ ರಾಜ್ಯದ ಜನತೆಯ ಸಂಕಷ್ಟಕ್ಕೆ ಮಿಡಿದ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ. ಕನ್ನಡಿಗರು ಕೂಡ ನಟರಿಗೆ ಧನ್ಯವಾದಗಳನ್ನುಅರ್ಪಿಸಿದ್ದಾರೆ. ಅಂದಹಾಗೆ ಸೂರ್ಯ ಹಾಗೂ ಕಾರ್ತಿ ಹಲವು ಚಾರಿಟಿ ಕೆಲಸಗಳನ್ನು ಮಾಡುತ್ತಿದ್ದಾರೆ. ಅಲ್ಲದೆ ಕಷ್ಟದಲ್ಲಿ ಇರುವವರಿಗೆ ಸಹಾಯಧನ ನೀಡುತ್ತಾರೆ. ಕಳೆದ ವರ್ಷ ಕೇರಳದಲ್ಲಿ ಆದ ಪ್ರವಾಹಕ್ಕೆ ಕಾರ್ತಿ ಸ್ವತಃ ಸಿಎಂ ಅವರನ್ನು ಭೇಟಿ ಮಾಡಿ 25 ಲಕ್ಷ ರೂ. ಚೆಕ್ ನೀಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top